ಸ್ನಾತಕೋತ್ತರ ಕೋರ್ಸುಗಳಿಗೆ 2ನೇ ಸುತ್ತಿನ ಪ್ರವೇಶಾತಿಗೆ ಅರ್ಜಿ ಆಹ್ವಾನ

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಬೆಂಗಳೂರು ನಗರ ವಿಶ್ವವಿದ್ಯಾನಿಲಯದಲ್ಲಿ ಸ್ನಾತಕೋತ್ತರ ಕೋರ್ಸುಗಳಿಗೆ ಪ್ರವೇಶಾತಿಯಲ್ಲಿ ಉಳಿದಿರುವ ಸೀಟುಗಳಿಗೆ ಎರಡನೇ ಸುತ್ತಿನ ಪ್ರವೇಶಾತಿಗಾಗಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

- Advertisement - 

ಅರ್ಜಿಗಳನ್ನು ವಿಶ್ವವಿದ್ಯಾನಿಲಯದ ಜಾಲತಾಣ: http://bcu.ac.in ದಿಂದ ಡೌನ್ಲೋಡ್ ಮಾಡಿಕೊಂಡು ಸಂಬಂಧಪಟ್ಟ ಸ್ನಾತಕೋತ್ತರ ವಿಭಾಗಕ್ಕೆ ನವೆಂಬರ್ 04 ಒಳಗಾಗಿ ಹಾಗೂ 2.ದಂಡ ಶುಲ್ಕ ಸಹಿತ ಅರ್ಜಿಗಳನ್ನು ನವೆಂಬರ್ 05 ಒಳಗಾಗಿ ಸಲ್ಲಿಸುವುದು. ಅರ್ಹತಾ ಪಟ್ಟಿ ಮತ್ತು ಸಮಾಲೋಚನೆಯು ನವೆಂಬರ್ 07 ರಂದು ನಡೆಯಲಿರುವುದು.

- Advertisement - 

ಅರ್ಹತೆ, ಸೀಟ್ ಮ್ಯಾಟ್ರಿಕ್ ಮತ್ತು ಕೋರ್ಸುಗಳ ಶುಲ್ಕದ ಹೆಚ್ಚಿನ ಮಾಹಿತಿಗಾಗಿ ಬೆಂಗಳೂರು ನಗರ ವಿಶ್ವವಿದ್ಯಾನಿಲಯದ ಜಾಲತಾಣ: http://bcu.ac.in ನ್ನು ಸಂಪರ್ಕಿಸಲು ಪ್ರಕಟಣೆಯಲ್ಲಿ ತಿಳಿಸಿದೆ.

- Advertisement - 
Share This Article
error: Content is protected !!
";