ಠಾಣೆ ಮೇಲೆ ಕಲ್ಲು ತೂರಿ, ಪೊಲೀಸರ ಮೇಲೆ ಹಲ್ಲೆ ಮಾಡಿದ ಪುಂಡರನ್ನು ಬಂಧಿಸಿ

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಮುಖ್ಯಮಂತ್ರಿ ಸಿದ್ದರಾಮಯ್ಯ
ಅವರೇ ಕರ್ನಾಟಕ ಕಾಂಗ್ರೆಸ್ ಸರ್ಕಾರ ಒಂದು ಸಮುದಾಯವನ್ನು ಅತಿಯಾದ ಓಲೈಕೆ ಮಾಡುತ್ತಿರುವುದರಿಂದ ರಾಜ್ಯದ ಜನರಿಗಷ್ಟೆ ಅಲ್ಲ, ಸ್ವಯಂ ಪೊಲೀಸರಿಗೂ ರಕ್ಷಣೆಯೇ ಇಲ್ಲವಾಗಿದೆ ಎಂದು ಜೆಡಿಎಸ್ ಆತಂಕ ವ್ಯಕ್ತಪಡಿಸಿದೆ.

ಪೊಲೀಸ್ ಠಾಣೆ ಮೇಲೆ ದಾಳಿ ಮಾಡಿದವರು ಖಂಡಿತ ಮಾನಸಿಕ ಅಸ್ವಸ್ಥರಲ್ಲ ಗೃಹ ಸಚಿವ ಡಾ.ಜಿ.ಪರಮೇಶ್ವರ ಅವರೇ. ಮೈಸೂರಿನ ಉದಯಗಿರಿ ಗಲಭೆ ಪೂರ್ವ ನಿಯೋಜಿತ ಕೃತ್ಯ ಎಂಬುದರಲ್ಲಿ ಅನುಮಾನವೇ ಇಲ್ಲ ಎಂದು ಜೆಡಿಎಸ್ ಆತಂಕ ವ್ಯಕ್ತಪಡಿಸಿದೆ.

ಅವಹೇಳನಕಾರಿ ಪೋಸ್ಟ್‌ಹಾಕಿದರೆ ಪೊಲೀಸರಿಗೆ ದೂರು ನೀಡಬೇಕೆ ಹೊರತು, ಪೊಲೀಸ್‌ಠಾಣೆ ಮೇಲೆ ಏಕಾಏಕಿ ದಾಳಿ ಮಾಡಿ, ಆರಕ್ಷಕರನ್ನು ಗುರಿಯಾಗಿಸಿಕೊಂಡು ಕಲ್ಲು ತೂರುವುದು ತಾಲಿಬಾನ್‌ಮನಸ್ಥಿತಿಯೇ ಆಗಿದೆ ಎಂದು ಜೆಡಿಎಸ್ ಹರಿಹಾಯ್ದಿದೆ. 

ಸಾಮಾಜಿಕ ಜಾಲತಾಣದಲ್ಲಿ ಧಾರ್ಮಿಕ ವಿಚಾರವಾಗಿ ಅವಹೇಳಕಾರಿ ಪೋಸ್ಟ್‌ಗಳು ಸಾವಿರಾರು ಬರುತ್ತವೆ. ಆಗ ಬೇರೇ ಧರ್ಮದವರು ಕಾನೂನು ಕೈಗೆತ್ತಿಕೊಂಡು, ಕಲ್ಲು ಹೊಡೆಯಲು ಶುರು ಮಾಡಿದರೆ ರಾಜ್ಯದ ಪರಿಸ್ಥಿತಿ ಏನು ? ಎಂದು ಜೆಡಿಎಸ್ ಪ್ರಶ್ನಿಸಿದೆ.

ರಾಜ್ಯ ಸರ್ಕಾರ ತಡಮಾಡದೆ ಠಾಣೆ ಮೇಲೆ ಕಲ್ಲು ತೂರಿ, ಪೊಲೀಸರಿಗೆ ಗಾಯಗೊಳಿಸಿರುವ ಪುಂಡರನ್ನು ತಕ್ಷಣವೇ ಬಂಧಿಸಿ, ಸಾಂಸ್ಕೃತಿಕ ನಗರಿಯಲ್ಲಿ ಹದಗೆಟ್ಟಿರುವ ಕಾನೂನು-ಸುವ್ಯವಸ್ಥೆಯನ್ನು ಸರಿಪಡಿಸಬೇಕು ಎಂದು ಜೆಡಿಎಸ್ ತಾಕೀತು ಮಾಡಿದೆ.

 

 

Share This Article
error: Content is protected !!
";