Technology News

ಕರ್ನಾಟಕ ಅತ್ಯಂತ ವಿಶ್ವಾಸಾರ್ಹ ಹೂಡಿಕೆ ತಾಣ-ಸಿಎಂ

ಚಂದ್ರವಳ್ಳಿ ನ್ಯೂಸ್, ಬೆಂಗಳೂರು: ಸರ್ಕಾರದ ಸ್ಪಷ್ಟ ನೀತಿಗಳು, ಸುಗಮ ಅನುಮತಿಗಳು,  ಕೌಶಲ್ಯ, ಮೂಲ ಸೌಕರ್ಯ ಹಾಗೂ ಪೂರಕ ವಾತಾವರಣಗಳು, ಕರ್ನಾಟಕವನ್ನು ಭಾರತದ ಅತ್ಯಂತ ವಿಶ್ವಾಸಾರ್ಹ ಹೂಡಿಕೆ ತಾಣವಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ವಿದ್ಯುನ್ಮಾನ, ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ

Your Trusted Source for Accurate and Timely Updates!

Our commitment to accuracy, impartiality, and delivering breaking news as it happens has earned us the trust of a vast audience. Stay ahead with real-time updates on the latest events, trends.

Just for You

ಕಬ್ಬು ತುಂಬಿದ್ದ ಟ್ರ್ಯಾಕ್ಟರ್​ಗಳಿಗೆ ಬೆಂಕಿ, ಪ್ರತ್ಯೇಕ 3 ಎಫ್ಐಆರ್ ದಾಖಲು

ಚಂದ್ರವಳ್ಳಿ ನ್ಯೂಸ್, ಬಾಗಲಕೋಟೆ: ಕಬ್ಬು ತುಂಬಿದ್ದ ಟ್ರ್ಯಾಕ್ಟರ್​ಗಳಿಗೆ ಬೆಂಕಿ ಇಟ್ಟು ಕಲ್ಲು ತೂರಾಟ ಮಾಡಿದ್ದ ಪ್ರಕರಣಕ್ಕೆ ಸಂಬಧಿಸಿದಂತೆ ಮೂರು ಪ್ರತ್ಯೇಕ‌

ಚಿತ್ರದುರ್ಗ, ಹಿರಿಯೂರು ಮತ್ತು ಚಳ್ಳಕೆರೆ ಈ ಮೂರು ಕ್ಷೇತ್ರಗಳನ್ನ ಜೆಡಿಎಸ್ ಪಕ್ಷಕ್ಕೆ ಕೇಳುತ್ತೇವೆ-ರವೀಂದ್ರಪ್ಪ

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ: ರಾಷ್ಟ್ರೀಯ ಪಕ್ಷಗಳ ಭರಾಟೆಯಲ್ಲಿ ಅನೇಕ ಪ್ರಾದೇಶಿಕ ಪಕ್ಷಗಳು ಬಂದು ಹಾಗೇ ಕಣ್ಮರೆಯಾಗಿವೆ.‌ಈ‌‌ನಡುವೆ ಜೆಡಿಎಸ್ ಪಕ್ಷ 25

ಅವಿರೋಧವಾಗಿ ಆಯ್ಕೆಗೊಂಡ ಶಿವಾನಂದ ತಗಡೂರು ನೇತೃತ್ವದ ತಂಡ

 ಚಂದ್ರವಳ್ಳಿ ನ್ಯೂಸ್, ಬೆಂಗಳೂರು: ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘದ(ಕೆಯುಡಬ್ಲೂಜೆ) 2025-2028ನೇ ಸಾಲಿನ ಚುನಾವಣೆಯಲ್ಲಿ ರಾಜ್ಯಾಧ್ಯಕ್ಷರಾಗಿ ಶಿವಾನಂದ ತಗಡೂರು ಅವರ

ನ್ಯಾಯಾಲಯದ ಸೂಚನೆ ಮೇರೆಗೆ ತಾಲೂಕು ಮತ್ತು ಜಿಲ್ಲಾ ಪಂಚಾಯತ್ ಚುನಾವಣೆ-ಸಿಎಂ

ಚಂದ್ರವಳ್ಳಿ ನ್ಯೂಸ್, ಬೆಂಗಳೂರು: ಪರಪ್ಪನ ಅಗ್ರಹಾರದಲ್ಲಿ ಕೈದಿಗಳಿಗೆ ಐಷಾರಾಮಿ ಸವಲತ್ತುಗಳು ದೊರಕುತ್ತಿರುವ ವಿಷಯ ನಮ್ಮ ಸರ್ಕಾರದ ಗಮನಕ್ಕೆ ಬಂದಿದೆ. ಸಂಬಂಧಪಟ್ಟ

Lasted Technology News

ಸೂಕ್ಷ್ಮ ನೀರಾವರಿ ತಾಂತ್ರಿಕತೆ ಮತ್ತು ನೀರಿನ ಮರು ಪೂರೈಕೆ, ರೈತರಿಗೆ ತರಬೇತಿ

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ: ಕೃಷಿ ಇಲಾಖೆಯ ಬಬ್ಬೂರು ಫಾರಂನ ಜಿಲ್ಲಾ ಕೃಷಿ ತರಬೇತಿ ಕೇಂದ್ರದಲ್ಲಿ ಅಟಲ್ ಭೂಜಲ ಯೋಜನೆಯಡಿ ಸಮುದಾಯ ಸಹಭಾಗಿತ್ವದೊಂದಿಗೆ ಅಂತರ್ಜಲ ನಿರ್ವಹಣೆ, ಜಲ ಭದ್ರತಾ

ಜ.28ರಂದು ವಿದ್ಯುತ್ ವ್ಯತ್ಯಯ

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ: 220 ಕೆ.ವಿ.ಎ ಎಸ್.ಆರ್.ಎಸ್, ಕವಿಪ್ರನಿನಿ ಚಿತ್ರದುರ್ಗ ವತಿಯಿಂದ ಚಿತ್ರದುರ್ಗ ವಿಭಾಗ ವ್ಯಾಪ್ತಿಯಲ್ಲಿರುವ 220/66/11 ಕೆ.ವಿ ಚಿತ್ರದುರ್ಗ, 66/11 ಕೆ.ವಿ ಚಿತ್ರದುರ್ಗ, ಭರಮಸಾಗರ, ಸಿರಿಗೆರೆ,

ಸ್ಯಾನ್ ಫ್ರಾನ್ಸಿಸ್ಕೊ, ಶಾಂಘೈನಲ್ಲಿ ಕಟ್ಟಡ ಸ್ಥಳಾಂತರ ಮಾಡಿದಂತೆ ಹಿರಿಯೂರಿನಲ್ಲೂ ಇಡೀ ಬೃಹತ್ ಕಟ್ಟಡ ಶಿಫ್ಟ್ ಆಗಲಿದೆ

ಮಲ್ಲಪ್ಪನಹಳ್ಳಿ ಎಂ.ಎಲ್.ಗಿರಿಧರ. ಚಂದ್ರವಳ್ಳಿ ನ್ಯೂಸ್ ಹಿರಿಯೂರು: ಸ್ಯಾನ್ ಫ್ರಾನ್ಸಿಸ್ಕೊ, ಶಾಂಘೈ ಸೇರಿದಂತೆ ದೇಶ-ವಿದೇಶಗಳಲ್ಲಿ ಆಧುನಿಕ ತಂತ್ರಜ್ಞಾನ, ಕೌಶಲ್ಯ ಬಳಸಿ ಇಡೀ ಕಟ್ಟಡ ಶಿಫ್ಟ್(ಸ್ಥಳಾಂತರ) ಮಾಡುತ್ತಿದ್ದ ಕಾರ್ಯವನ್ನು ಆತ್ತ

ಪ್ಲಾಸ್ಟಿಕ್ ತ್ಯಾಜ್ಯದಿಂದ ಆಟಿಕೆಗಳ ತಯಾರಿ;ವಿಜ್ಞಾನ ಕಲಿಕೆಗೆ ಸಹಕಾರಿ

ಚಂದ್ರವಳ್ಳಿ ನ್ಯೂಸ್, ಹಿರಿಯೂರು: ಭೂಮಿಯನ್ನು ನಿರಂತರವಾಗಿ ಕಾಡುತ್ತಿರುವ ಪ್ಲಾಸ್ಟಿಕ್ ತ್ಯಾಜ್ಯದಿಂದ ವಿಜ್ಞಾನದ ಆಟಿಕೆಗಳನ್ನು ತಯಾರಿಸಿ, ವಿಜ್ಞಾನದ ನಿಯಮ, ತತ್ವ ಸಿದ್ಧಾಂತಗಳನ್ನು ತಿಳಿಯುವುದರ ಮೂಲಕ ಕಸವನ್ನು ದೇಶದ ಅಭಿವೃದ್ಧಿಗೆ

ವಿಜ್ಞಾನದಿಂದ ಮಕ್ಕಳ ಮನಸ್ಸು ವಿಕಾಸ

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ: "ವಿಜ್ಞಾನದಿಂದ ನಮ್ಮ ಜೀವನ ಶೈಲಿಯೇ ಬದಲಾಗಿದೆ. ಇಂತಹ ವಿಜ್ಞಾನ ಮೇಳಗಳಲ್ಲಿ ಭಾಗವಹಿಸುವ ಮೂಲಕ ಅವರ ಮನಸ್ಸು ವಿಕಾಸ ವಾಗುತ್ತದೆ. ಅನೇಕ ವೈಜ್ಞಾನಿಕ ಸಂಶೋಧನೆಗಳು

ಸರ್ಕಾರಿ ಅಧಿಕಾರಿ ಡಿಜಿಟಲ್ ಅರೆಸ್ಟ್, 19 ಲಕ್ಷ ವಂಚಿಸಿದ ವಂಚಕರು

ಚಂದ್ರವಳ್ಳಿ ನ್ಯೂಸ್, ತುಮಕೂರು: ಸರ್ಕಾರಿ ಅಧಿಕಾರಿಯೊಬ್ಬರನ್ನ 6 ಗಂಟೆಗಳ ಕಾಲ ಡಿಜಿಟಲ್ ಅರೆಸ್ಟ್ ಮಾಡಿ ಬರೊಬ್ಬರಿ 19 ಲಕ್ಷ ರೂ. ವಂಚಿಸಿರುವ ಘಟನೆ ತುಮಕೂರಿನಲ್ಲಿ ಸಂಭವಿಸಿದೆ. ನಗರದ

ವಿದ್ಯಾರ್ಥಿಗಳ ಆಲೋಚನೆ ಪ್ರಬುದ್ಧತೆಯಿಂದ ಕೂಡಿದೆ-ಡಾ.ಭರತ್

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ: ನಗರದ ಎಸ್.ಜೆ.ಎಂ. ತಾಂತ್ರಿಕ ಮಹಾವಿದ್ಯಾಲಯದಲ್ಲಿ ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯೂನಿಕೇಷನ್ ಇಂಜಿನಿಯರಿಂಗ್ ವಿಭಾಗದ ವತಿಯಿಂದ ಮೂರನೇ ವರ್ಷದ ವಿದ್ಯಾರ್ಥಿಗಳು ಸಿದ್ಧಪಡಿಸಿದ ಮಿನಿ ಪ್ರಾಜೆಕ್ಟ್‌ಗಳ ಪ್ರದರ್ಶನ

  ಸಿಜೇರಿಯನ್  ಹೆರಿಗೆ ತಡೆಗಟ್ಟಲು ವಿಶೇಷ ಕಾರ್ಯಕ್ರಮ:ಸಚಿವ ದಿನೇಶ್ ಗುಂಡೂರಾವ್

ಚಂದ್ರವಳ್ಳಿ ನ್ಯೂಸ್, ಬೆಳಗಾವಿ:   ರಾಜ್ಯದಲ್ಲಿ ಸರ್ಜರಿ ಮೂಲಕ ಹೆರಿಗೆಗಳಾಗುತ್ತಿರುವ ಪ್ರಮಾಣ ಶೇ 46 ರಷ್ಟಿದ್ದು, ಸರಕಾರಿ ಆಸ್ಪತ್ರೆ ಯಲ್ಲಿ ಶೇ. 36 ಮತ್ತು ಖಾಸಗಿ ಆಸ್ಪತ್ರೆ ಯಲ್ಲಿ ಶೇ. 61 ಇದ್ದು, ರಾಜ್ಯದಲ್ಲಿ ಅನಗತ್ಯ ಸಿಜೇರಿಯನ್ ಹೆರಿಗೆ ತಡೆಗಟ್ಟಲು   ಮುಂದಿನ ತಿಂಗಳು ವಿಶೇಷ ಕಾರ್ಯಕ್ರಮ ಘೋಷಿಸಲಾಗುವುದು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ಹೇಳಿದರು. ಅವರು ಇಂದು ವಿಧಾನ ಪರಿಷತ್ತಿನಲ್ಲಿ ಸದಸ್ಯ ಜಗದೇವ ಗುತ್ತೇದಾರ ಅವರ ಚುಕ್ಕೆ ಗುರುತಿನ ಪ್ರಶ್ನೆಗೆ ಉತ್ತರಿಸಿದರು.  ರಾಜ್ಯದಲ್ಲಿ ಅನಗತ್ಯ ಸಿಜೇರಿಯನ್ ಹೆರಿಗೆ ತಡೆಯಲು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ  ತಾಲ್ಲೂಕು ಮಟ್ಟದ ಆಸ್ಪತ್ರೆಗಳನ್ನು 24X7 ಪ್ರಸೂತಿ ಸೇವೆಗಳನ್ನು ನೀಡಲು ಬಲಪಡಿಸಲಾಗುತ್ತಿದೆ. ರಾತ್ರಿ ವೇಳೆಯಲ್ಲಿ ಸಹಜ ಹರಿಗೆಗಳನ್ನು ಮತ್ತು ಅವಶ್ಯವಿದ್ದಲ್ಲಿ, ಸಿಜೇರಿಯನ್ ಶಸ್ತ್ರಚಿಕಿತ್ಸೆ ನಡೆಸಲು ಅನುಕೂಲವಾಗುತ್ತಿದೆ, ಈ ಕ್ರಮದಿಂದ ತಾಲ್ಲೂಕು ಮಟ್ಟದಿಂದ ಜಿಲ್ಲಾ ಮಟ್ಟಕ್ಕೆ ಶಿಫಾರಸ್ಸುಗೊಳ್ಳುವ ಸಂಖ್ಯೆಯು ಕಡಿಮೆ ಆಗಲಿದ್ದು ಅನಗತ್ಯ ಸಿಜೇರಿಯನ್ ಶಸ್ತ್ರಚಿಕಿತ್ಸೆಗೆ ಕಡಿವಾಣ ಹಾಕಲಾಗುತ್ತಿದೆ ಎಂದರು.   ಪ್ರತ್ಯೇಕ ತಾಯಿ ಮತ್ತು ಮಕ್ಕಳ ಆಸ್ಪತ್ರೆಗಳನ್ನು ತೆರೆಯಲಾಗಿದ್ದು, ಇದುವರೆಗೂ 88 ತಾಯಿ ಮತ್ತು ಮಕ್ಕಳ ಆಸ್ಪತ್ರೆಗಳು ಮಂಜೂರಾಗಿದ್ದು ಅದರಲ್ಲಿ 60 ತಾಯಿ ಮತ್ತು ಮಕ್ಕಳ ಆಸ್ಪತ್ರೆಗಳು ಕಾರ್ಯ ನಿರ್ವಹಿಸುತ್ತಿರುತ್ತವೆ. 24X7 ಸಮಗ್ರ ಪ್ರಸೂತಿ ಸೇವೆಗಳನ್ನು ನೀಡಲಾಗುತ್ತಿದೆ. ಈ ತಾಯಿ ಮತ್ತು ಮಕ್ಕಳ ಆಸ್ಪತ್ರೆಗಳಲ್ಲಿ ಪ್ರತ್ಯೇಕ ಸಿಬ್ಬಂದಿಯು ಮತ್ತು ನುರಿತ ತಾಯಿ ಮತ್ತು ಮಕ್ಕಳ ತಜ್ಞರು ಇರುವುದರಿಂದ 24X7 ಸಹಜ ಹರಿಗೆ ನಡೆಸಲು ಉತ್ತೇಜಿಸಲಾಗುತ್ತಿದೆ.  ಸಹಜ ಹೆರಿಗೆಗಳನ್ನು ಹೆಚ್ಚಿಸಲು ಹಾಗೂ ಸಿಜೆರಿಯನ್ ಶಸ್ತ್ರಚಿಕಿತ್ಸೆ ಕಡಿಮೆ ಮಾಡಲು Midwifery ಯೋಜನೆಯನ್ನು ಪ್ರಾರಂಭಿಸಲಾಗಿದೆ ಈ ಯೋಜನೆಯಲ್ಲಿ ಶುಶ್ರೂಷಾಧಿಕಾರಿಗಳಿಗೆ 18 ತಿಂಗಳ ತರಬೇತಿಯನ್ನು Midwifery ಯೋಜನೆಯಲ್ಲಿ ಪಡೆದು MLCU ಹರಿಗೆ ಕೋಣೆಯಲ್ಲಿ ಸಹಜ ಹೆರಿಗೆಗಳನ್ನು ನೆರವೇರಿಸಲು ತಜ್ಞತೆಯನ್ನು ಹೊಂದಿರುತ್ತಾರೆ.   ಪ್ರಸ್ತುತ ತರಬೇತುದಾರರ ತರಬೇತಿಯನ್ನು ಬೆಂಗಳೂರಿನ ವಾಣಿ ವಿಲಾಸ ಆಸ್ಪತ್ರೆಯಲ್ಲಿ ಮತ್ತು ಹೈದರಬಾದಿನ Fernandez Foundation ನಲ್ಲಿ ಪೂರ್ಣಗೊಳಿಸಿ ಬೆಂಗಳೂರು, ಮೈಸೂರು ಮತ್ತು ಬೆಳಗಾವಿಯಲ್ಲಿ ಶುಶ್ರೂಷಾಧಿಕಾರಿಗಳಿಗೆ 18 ತಿಂಗಳ ತರಬೇತಿಯನ್ನು ನೀಡುತ್ತಿದ್ದಾರೆ.  ಮೈಸೂರಿನ ಚೆಲುವಾಂಬ ಆಸ್ಪತ್ರೆಯಲ್ಲಿ ನಡೆಸಲಾಗುತ್ತಿರುವ 1830 ಶುಶ್ರೂಷಾಧಿಕಾರಿಗಳ ತರಬೇತಿಯಲ್ಲಿ 12 ತಿಂಗಳು ಪೂರ್ಣಗೊಂಡಿದ್ದು ಇನ್ನು 6 ತಿಂಗಳಲ್ಲಿ ತರಬೇತಿ ಮುಗಿಯಲಿದ್ದು ಜುಲೈ-2025 ರಿಂದ ಹಾಸನ, ಮಂಡ್ಯ ಮತ್ತು ಮೈಸೂರಿನ ಜಿಲ್ಲಾ ಆಸ್ಪತ್ರೆಯಲ್ಲಿ MLCU ಕಾರ್ಯಾರಂಭ ಮಾಡಲಿದೆ.   ಬೆಂಗಳೂರಿನಲ್ಲಿ ವಾಣಿ ವಿಲಾಸ ಆಸ್ಪತ್ರೆ ಯಲ್ಲಿ ಬೆಂಗಳೂರು ವಿಭಾಗಕ್ಕೆ ಸಂಬಂಧಿಸಿದಂತೆ 25 ಶುಶ್ರೂಷಾಧಿಕಾರಿಗಳು NPM ತರಬೇತಿಯನ್ನು ಜುಲೈ-2024 ರಲ್ಲಿ ಪ್ರಾರಂಭಿಸಲಾಗಿದ್ದು, ಡಿಸೆಂಬರ್ 2025 ರ ವರೆಗೆ 18 ತಿಂಗಳ ತರಬೇತಿಯು ಮುಗಿಯಲಿದ್ದು ತದ ನಂತರ ಕೋಲಾರ, ಬೆಂಗಳೂರು, ದಾವಣಗೆರೆ ಮತ್ತು ತುಮಕೂರು ಜಿಲ್ಲಾ ಆಸ್ಪತ್ರೆಗಳಲ್ಲಿ MLCU ಪ್ರಾರಂಭಗೊಳ್ಳುತ್ತದೆ.  ಬೆಳಗಾವಿ ಜಿಲ್ಲೆಯಲ್ಲಿ 18 ತಿಂಗಳ ತರಬೇತಿ ಪ್ರಾರಂಭಿಸಲಾಗಿದ್ದು ಒಟ್ಟು 24 ಶುಶ್ರೂಷಾಧಿಕಾರಿಗಳಿಗೆ ತರಬೇತಿ ನೀಡಲಾಗುವುದು. ತದನಂತರ ಬೆಳಗಾವಿ, ಹುಬ್ಬಳ್ಳಿ ಮತ್ತು ಗಂಗಾವತಿ ಯಲ್ಲಿ MLCU ಪ್ರಾರಂಭಗೊಳ್ಳಲಿದೆ.  ಪ್ರತಿ ಜಿಲ್ಲಾಸ್ಪತ್ರೆ ಮತ್ತು ತಾಲ್ಲೂಕು ಆಸ್ಪತ್ರೆಯಲ್ಲಿ ಸಿಜೇರಿಯನ್  ಶಸ್ತ್ರಚಿಕಿತ್ಸೆಯ ಕಡಿವಾಣ ಹಾಕಲು ಸಿಜೇರಿಯನ್  ಆಡಿಟ್ ಅಸ್ಪತ್ರೆಯಲ್ಲಿ ಮಾಡಲಾಗುತ್ತಿದೆ. ಈ ಆಡಿಟ್ ನಿಂದ ಪ್ರತಿ ಸಿಜೇರಿಯನ್  ಶಸ್ತ್ರಚಿಕಿತ್ಸೆ ಅಗತ್ಯತೆ ಹಾಗು ಅನಗತ್ಯತೆ ಬಗ್ಗೆ ಕೂಲಂಕುಷವಾಗಿ ಪರಿಶೀಲಿಸಿ ಸಿಜೇರಿಯನ್  ಶಸ್ತ್ರಚಿಕಿತ್ಸೆ ತಡೆಗಟ್ಟಲು ಕ್ರಮವಹಿಸಲಾಗುತ್ತಿದೆ ಎಂದರು.   ಪ್ರತಿ ತಿಂಗಳು ಸಿಜೇರಿಯನ್  ಶಸ್ತ್ರಚಿಕಿತ್ಸೆಯ ಅನಗತ್ಯ ಶಸ್ತ್ರಚಿಕಿತ್ಸೆ ತಡೆಯಲು ಜಿಲ್ಲಾ ಮಟ್ಟದಲ್ಲಿ ಪರಿಶೀಲನಾ ಸಭೆಗಳನ್ನು ನಡೆಸಲಾಗುತ್ತಿದೆ.

error: Content is protected !!
";