ಲೋಕಾಯುಕ್ತದ ಮೂವರು ಐಪಿಎಸ್‌ಅಧಿಕಾರಿಗಳ ವಿರುದ್ಧ ದೂರು

News Desk

ಚಂದ್ರವಳ್ಳಿ ನ್ಯೂಸ್, ಮೈಸೂರು:
ಮುಡಾ ಹಗರಣದಲ್ಲಿ ಸುಳ್ಳು ವರದಿ ಸಲ್ಲಿಸಿದ ಲೋಕಾಯುಕ್ತದ ಮೂವರು ಹಿರಿಯ ಐಪಿಎಸ್‌ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತಿ ಆಯೋಗಕ್ಕೆ ಮುಡಾ ಹಗರಣದ ದೂರುದಾರ ಸ್ನೇಹಮಯಿ ಕೃಷ್ಣ ದೂರು ಸಲ್ಲಿಸಿದ್ದಾರೆ.

- Advertisement - 

ಮಾಧ್ಯಮಗಳ ಜೊತೆ ಮಾತನಾಡಿದ ಸ್ನೇಹಮಯಿ ಕೃಷ್ಣ, “ಮುಡಾ ಪ್ರಕರಣದಲ್ಲಿ ಸಿದ್ದರಾಮಯ್ಯ ಕುಟುಂಬ ಭಾಗಿಯಾಗಿರುವ ಕುರಿತು ಸಾಕಷ್ಟು ಸಾಕ್ಷಿ, ಆಧಾರಗಳು ಇದ್ದರೂ, ಆರೋಪಿಗಳನ್ನು ರಕ್ಷಣೆ ಮಾಡಲು ಲೋಕಾಯುಕ್ತ ಪೊಲೀಸರು ಸುಳ್ಳು ವರದಿಗಳನ್ನು ಸಲ್ಲಿಸಿದ್ದರು.
ಈ ಮೂವರು ಲೋಕಾಯುಕ್ತ
ADGP ಮನೀಷ್ ಖರ್ಬೀಕರ್‌, IGP ಸುಬ್ರಮಣ್ಯೇಶ್ವರ್‌ರಾವ್‌ ಹಾಗೂ ಮೈಸೂರು ಲೋಕಾಯುಕ್ತ ಎಸ್‌ಪಿ ಟಿ.ಜೆ.ಉದ್ದೇಶ್‌ವಿರುದ್ಧ ಕೇಂದ್ರದ ಜಾಗೃತ ಆಯೋಗಕ್ಕೆ ಮೂರು ಪುಟದ ದೂರನ್ನು ಇಮೇಲ್‌ಹಾಗೂ ರಿಜಿಸ್ಟರ್‌ಅಂಚೆ ಮೂಲಕ ಕಳುಹಿಸಿದ್ದೇನೆ ಎಂದು ಸ್ನೇಹಮಯಿ ಕೃಷ್ಣ ತಿಳಿಸಿದರು.

- Advertisement - 

ಲೋಕಾಯುಕ್ತ ಪೊಲೀಸರು ಸಲ್ಲಿಸಿರುವ ವರದಿಯನ್ನು ಸಂಪೂರ್ಣವಾಗಿ ಪರಿಶೀಲನೆ ಮಾಡಿದ್ದೇನೆ. ಈ ವರದಿಯಲ್ಲಿ ಲೋಕಾಯುಕ್ತ ಪೊಲೀಸರು ಯಾವುದೇ ದಾಖಲಾತಿಗಳನ್ನು ಪರಿಶೀಲಿಸದೆ, ಯಾರನ್ನೋ ರಕ್ಷಣೆ ಮಾಡಲು ಸುಳ್ಳು ವರದಿ ತಯಾರಿಸಿ ನೀಡಿದ್ದಾರೆ. ಅದರಲ್ಲಿ ಒಂದು ಉದಾಹರಣೆ ಎಂದರೆ, ಸಿದ್ದರಾಮಯ್ಯ ಅವರ ಭಾಮೈದ ಮಲ್ಲಿಕಾರ್ಜುನ ಸ್ವಾಮಿ 1998ರಲ್ಲಿ ಪ್ರಕರಣದ ಎ4 ಆರೋಪಿ ದೇವರಾಜ್‌ಹೆಸರಿನಲ್ಲಿ ಸುಳ್ಳು ಪತ್ರ ಸೃಷ್ಟಿಸಿದ್ದ. ಆ ಪತ್ರಕ್ಕೆ ದೇವರಾಜು ಸಹಿಯನ್ನು ಮಲ್ಲಿಕಾರ್ಜುನ ಸ್ವಾಮಿ ಮಾಡಿ, ಅಪರಾಧ ಕೃತ್ಯವೆಸಗಿದ್ದಾರೆ. ಈ ದಾಖಲೆಗಳು ವರದಿಯಲ್ಲಿ ಇವೆ. ಆದರೂ ಇದೆಲ್ಲ ಸಾಕ್ಷಿಗಳು ಇದ್ದರೂ, ಲೋಕಾಯುಕ್ತದ ಐಪಿಎಸ್‌ಅಧಿಕಾರಿಗಳು ಸಾಕ್ಷಿಯಿಲ್ಲ ಎಂದು ಸುಳ್ಳು ವರದಿ ನೀಡಿದ್ದಾರೆ. ಯಾರನ್ನೋ ರಕ್ಷಣೆ ಮಾಡಲು ಈ ಅಧಿಕಾರಿಗಳು ಮುಂದಾಗಿದ್ದಾರೆ ಎಂದು ಕೇಂದ್ರ ಜಾಗೃತಿ ಆಯೋಗಕ್ಕೆ ದೂರು ಸಲ್ಲಿಸಿದ್ದೇನೆ” ಎಂದು ಸ್ನೇಹಮಯಿ ಕೃಷ್ಣ ಮಾಹಿತಿ ನೀಡಿದರು.

ಲೋಕಾಯುಕ್ತ ವರದಿಯ ವಿರುದ್ಧ ಮೇಲ್ಮನವಿ ಸಲ್ಲಿಸಿದ್ದು, ಇದರ ಬಗ್ಗೆ ಇನ್ನೂ ದಿನಾಂಕ ನಿಗಧಿಯಾಗಿಲ್ಲ. ನ್ಯಾಯಾಲಯದ ಮುಂದೆ ಬಂದ ನಂತರ ದಾಖಲೆ ಸಮೇತ ಈ ವಿಚಾರವನ್ನು ಕೋರ್ಟ್​ಗೆ ಮನವರಿಕೆ ಮಾಡಿಕೊಡುತ್ತೇನೆ. ಮುಡಾ ಹಗರಣದ ಸಮಗ್ರ ತನಿಖೆ ನಡೆಸುವಂತೆ ಈ ಪ್ರಕರಣವನ್ನು ಸಿಬಿಐಗೆ ನೀಡುವಂತೆ ಹೈಕೋರ್ಟ್​ನಲ್ಲಿ ಮನವಿ ಮಾಡಿರುವ ವಿಚಾರದಲ್ಲಿ ವಕೀಲರು ವಾದ ಮಂಡಿಸುತ್ತಾರೆ. ಹಾಗೂ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲಿ ನಾನು ವಾದ ಮಂಡಿಸುತ್ತೇನೆ ಎಂದು ಹೇಳಿದರು.

- Advertisement - 

 

Share This Article
error: Content is protected !!
";