ಗ್ಲೋಬಲ್ ಅಚೀವರ್ಸ್ ಪ್ರಶಸ್ತಿಗೆ ಭಾಜನರಾದ ಡಾ.ಕೃಷ್ಣಾರೆಡ್ಡಿ

News Desk

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಮಾಲ್ಡಿವ್ಸಿನಲ್ಲಿ ನಡೆದ ಜಾಗತಿಕ ಸಾಧಕರ ಸಮಾವೇಶದಲ್ಲಿ ಕರ್ನಾಟಕ ಸ್ಟೇಟ್ ರೋಡ್ ರೆಗ್ಯುಲೇಟರಿ ಮತ್ತು ಡೆವಲಪ್ಮೆಂಟ್ ಅಥಾರಿಟಿಯ ಸಿ.ಇ.ಓ ಡಾ.ಕೃಷ್ಣಾ ರೆಡ್ಡಿ ಅವರಿಗೆ ಗ್ಲೋಬಲ್ ಅಚೀವರ್ಸ್ ಪ್ರಶಸ್ತಿ ನೀಡಿ ಗೌರವಿಸಲಾಯಿತು. 

ಮುಖ್ಯ ಅತಿಥಿಗಳಾಗಿ ಭೋವಿ  ಗುರುಪೀಠದ ಸಿದ್ದರಾಮೇಶ್ವರ ಸ್ವಾಮೀಜಿ, ಖ್ಯಾತ ಅಭಿನೇತ್ರಿ ಡಾ.ಜಯಮಾಲಾ, ಯುವ ನಟಿ ಸೌಂದರ್ಯ, ಹಿರಿಯ ಪತ್ರಕರ್ತ ವಿಶ್ವೇಶ್ವರ ಭಟ್ ಮತ್ತು ಮಾಲ್ಡಿವ್ ಸಿನ ಗಣ್ಯರು ಉಪಸ್ಥಿತರಿದ್ದರು. 

ಬೆಂಗಳೂರಿನಿಂದ ಮಾಲ್ಡಿವ್ಸಿಗೆ ತಲುಪಿರುವ ನಾಲ್ಕು ದಿನಗಳ ಸಾಂಸ್ಕೃತಿಕ ನಿಯೋಗದಲ್ಲಿ ಡಾ. ಕೃಷ್ಣಾರೆಡ್ಡಿ ಮತ್ತು ಅವರ ಪತ್ನಿ ಸುಮಾ ಕೃಷ್ಣಾರೆಡ್ಡಿ ಅವರೂ ಭಾಗವಹಿಸಿದ್ದರು.

- Advertisement -  - Advertisement - 
Share This Article
error: Content is protected !!
";