ನಕಲಿ ಹಕ್ಕುಪತ್ರ ಜಾಲ ತಹಶೀಲ್ದಾರ್ ದಿಢೀರ್ ದಾಳಿ, ನಕಲಿ ದಾಖಲೆ ವಶಕ್ಕೆ

khushihost

ಚಂದ್ರವಳ್ಳಿ ನ್ಯೂಸ್, ಹೊಸನಗರ : ನಕಲಿ ಹಕ್ಕುಪತ್ರಗಳು, ಅರಣ್ಯ ಎನ್‌ಒಸಿ, ಅದಕ್ಕೆ ಬಳಸಿದ ಸೀಲ್ ಗಳು ಸೇರಿದಂತೆ ನಕಲಿ ತಯಾರಿಕೆಗೆ ಬಳಸಲಾಗುತ್ತಿದ್ದ ವಸ್ತುಗಳನ್ನು ವಶಕ್ಕೆ ಪಡೆದುಕೊಂಡ ಘಟನೆ ತಾಲೂಕಿನ ಎಲ್ ಗುಡ್ಡೇಕೊಪ್ಪದಲ್ಲಿ ಸೋಮವಾರ ನಡೆದಿದೆ.

ಅನೇಕ ದಿನಗಳಿಂದ ತಮಗೆ ಬರುತ್ತಿದ್ದ ಮಾಹಿತಿ ಆಧರಿಸಿ ತಹಶೀಲ್ದಾರ್ ರಶ್ಮಿ ಹಾಲೇಶ ದಿಢೀರ್ ದಾಳಿ ನಡೆಸಿ, ನೇತೃತ್ವದ ಅಧಿಕಾರಿಗಳ ತಂಡ ಎಲ್.ಗುಡ್ಡೇಕೊಪ್ಪ ನಿವಾಸಿ ರಾಜೇಂದ್ರ ಎಂಬಾತನ ಮನೆಯ ಮೇಲೆ ದಾಳಿ ನಡೆಸಿದ್ದಾರೆ. ಆ ವೇಳೆ ನೂರಾರು ನಕಲಿ ಹಕ್ಕುಪತ್ರಗಳು, ಅದಕ್ಕೆ ಬೇಕಾದ ಅರಣ್ಯ ಇಲಾಖೆ ಎನ್‌ಒಸಿ, ತಾಲೂಕು ಕಚೇರಿ, ಪಂಚಾಯ್ತಿ, ಸೊಸೈಟಿ ವಿವಿಧ ಬ್ಯಾಂಕ್ ಗಳ ನಕಲಿ ಸೀಲ್ ಗಳು ಕಂಡು ಬಂದಿದ್ದು ವಶಕ್ಕೆ ಪಡೆಯಲಾಗಿದೆ.

ದಾಳಿ ಮಾಡಿ ನೂರಾರು ಹಕ್ಕುಪತ್ರ, ಖಾಲಿ ಪತ್ರಗಳು, ಅದಕ್ಕೆ ಸಂಬಂಧಿಸಿದ ಅನೇಕ ನಕಲಿವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ. ಇದನ್ನು ಪರಿಶೀಲಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು. ನಕಲಿ ಹಕ್ಕುಪತ್ರದ ಜಾಲ ಕಾರ್ಯನಿರ್ವಹಿಸುತ್ತಿದೆಯೇ.. ಎಷ್ಟು ವರ್ಷದಿಂದ ಈ ಅಕ್ರಮ ನಡೆಯುತ್ತಿದೆ. ತಾಲೂಕಿನಲ್ಲಿ ಈವರೆಗೆ ಹಂಚಿಕೆಯಾಗಿರುವ ನಕಲಿ ಹಕ್ಕುಪತ್ರಗಳ ಮಾಹಿತಿ ಇನ್ನಷ್ಟೆ ಕಲೆಹಾಕಬೇಕಿದೆ ಎಂದು ತಹಶೀಲ್ದಾರ್ ರಶ್ಮಿ ಹಾಲೇಶ್ ತಿಳಿಸಿದ್ದಾರೆ.

ದಾಳಿಯಲ್ಲಿ ಶಿರೆಸ್ತಾದಾರ ಮಂಜುನಾಥ, ಪಿಎಸ್‌ಐ ಶಂಕರಗೌಡ ಪಾಟಿಲ್, ಚಿರಾಗ್, ಕಚೇರಿ ಸಿಬ್ಬಂದಿಗಳು ಭಾಗವಹಿಸಿದ್ದರು.

- Advertisement -  - Advertisement - 
Share This Article
error: Content is protected !!
";