ರೈತರೇ ದೇಶದ ಬೆನ್ನೆಲುಬು

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಭಾರತ ದೇಶ ಗ್ರಾಮೀಣ ಪರಂಪರೆಯ ಬೀಡು. ಗ್ರಾಮೀಣ ಪ್ರಾಂತ್ಯದಲ್ಲಿ ಕೃಷಿ ಕಾಯಕಕ್ಕೆ ಮಹತ್ವ. ದೇಶಕ್ಕೆ ಸ್ವಾತಂತ್ರ್ಯ ಬಂದ ನಂತರ ಪ್ರಭುತ್ವದ ಆಡಳಿತದಲ್ಲಿ ಕೃಷಿ ಬದುಕನ್ನು ಬೆಂಬಲಿಸುವ ಸಲುವಾಗಿ ರೈತರೆ ದೇಶದ ಬೆನ್ನೆಲುಬು ಎಂಬ ಮಹತ್ವದ ಘೋಷಣೆ ಮೊಳಸಿತ್ತು ಸರ್ಕಾರ ಇದು ಇತಿಹಾಸ.

 ಕಾಲುಗಳು ಉರುಳಿದಂತೆ ಆಧುನಿಕತೆ ಬೆಳೆದಂತೆ ಸರ್ಕಾರದ ಯೋಜನೆಗಳು ಕೃಷಿ ಕಾಯಕಕ್ಕೆ ದೊಡ್ಡ ಪ್ರಮಾಣದ ಹೊಡೆತಗಳನ್ನು ನೀಡುತ್ತಿವೆ ಇದಕ್ಕೆ ಸಾಕ್ಷಿ=ಗುಡ್ಡೆಗಳು ಹಲವಾರು. ಕೃಷಿ ಬದುಕು ಕ್ಷೀಣಿಸುತ್ತಿರುವ ಕಾರಣವೇನು ಎಂದು ಅರ್ಥೈಸಬೇಕಾದ ಸಂಗತಿಯಾಗಿದೆ.

 ಸುಮಾರು 40 ವರ್ಷಗಳ ಹಿಂದಿನ ದಿನಮಾನಗಳಲ್ಲಿ ಕೃಷಿ ಬದುಕಿಗೆ ದೊಡ್ಡ ಪ್ರಮಾಣದ ಗೌರವದ ಸ್ಥಾನಮಾನ ಇದ್ದುದ್ದು ನಾನು ಕಂಡಿದ್ದೇನೆ.

 ಆ ದಿನಮಾನಗಳಲ್ಲಿ ಕೃಷಿ ಕುಟುಂಬದ ವಿದ್ಯಾವಂತ ಯುವಕರು ಸರ್ಕಾರಿ ಕೆಲಸಗಳಿಗೆ  ಹೋಗದೆ ಕೃಷಿ ಬದುಕಿನಲ್ಲಿ ತೊಡಗಿಕೋಳುತ್ತಿದರು.  ಇನ್ನು ಕೆಲವ ಕೃಷಿಕರ  ಮಕ್ಕಳು ಓದುವ ವಿಚಾರದಲ್ಲಿ ಅಸಡ್ಡೆಯನ್ನು ತೋರುತ್ತಿದ್ದರು ಆ  ಸಾಲಿನಲ್ಲಿ ನಾನು ಒಬ್ಬನು.

 ಈ ಕಾಲಮಾನದಲ್ಲಿ ಕೃಷಿ ಬದುಕು ಎಲ್ಲಾ ವಿಷಯಗಳಲ್ಲಿ ಕಷ್ಟಕ್ಕೆ ಸಿಲುಕಿದೆ. ಕೃಷಿ ಬದುಕಿನ ಜನತೆ ಸಾಕಷ್ಟು ಕಷ್ಟನಷ್ಟಗಳನ್ನು  ಅನುಭವಿಸಿ ಕೃಷಿ ಕಾಯಕದಿಂದ ದೂರ ಉಳಿಯಲು ನಿರ್ಧರಿಸಿದ್ದಾರೆ ಈ ಸಾಲಿನಲ್ಲಿ ನಾನು ಸೇರಿದ್ದೇನೆ.

 ನನ್ನ ಕೃಷಿ ಬದುಕಿನ ಕಷ್ಟನಷ್ಟಗಳನ್ನು  ನನ್ನ  ಗ್ರಾಮವಾದ ಪಾವಗಡ ತಾಲ್ಲೂಕಿನ ಕೆ ಟಿ ಹಳ್ಳಿಯ ನನ್ನ ಆತ್ಮಿಯ ಜನತೆಗೆ ತಿಳಿದಿದೆ. ದೇಶದಲ್ಲಿ ಕೃಷಿ ಬದುಕಿಗೆ ಮತ್ತೊಮ್ಮೆ ಮಹತ್ವದ ಸ್ಥಾನ ಸಿಗಬೇಕು.

 ಕೃಷಿ ಬದುಕಿನ ಎಲ್ಲಾ ಕಷ್ಟಗಳು ಬಗ್ಗೆಹರಿಯವ ವಿಷಯದಲ್ಲಿ ಒಂದು ಮಹತ್ವದ ಪವಾಡ ನಡೆಯಬೇಕಿದೆ ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ. ಕೃಷಿ ದೇಶದ ಬೆನ್ನೆಲುಬು ಎಂಬ ವಿಚಾರದಲ್ಲಿ ಕೃಷಿ ಉತ್ಪನ್ನಗಳು ದೇಶದಲ್ಲಿ ವೃದ್ಧಿಸಿದರೆ ದೇಶವು ಶ್ರೀಮಂತಿಕೆ ಹೊಂದುವುದು ಶತಸಿದ್ಧ.
ಕಿರು ಲೇಖನ-ರಘು ಗೌಡ 9916101265

- Advertisement -  - Advertisement -  - Advertisement - 
Share This Article
error: Content is protected !!
";