ಹಣ ಪಡೆದು ಜಾಮೀನು ಕೊಡಲು ಬಂದ ಮಹಿಳೆ ವಿರುದ್ಧವೇ ದೂರು ದಾಖಲು

News Desk

ಚಂದ್ರವಳ್ಳಿ ನ್ಯೂಸ್, ಶಿವಮೊಗ್ಗ :
ಹಣದ ಪಡೆದು ಜಾಮೀನು ನೀಡಲು ಬೆಂಗಳೂರಿನಿಂದ ಬಂದಿದ್ದ ಮಹಿಳೆ ಸೇರಿ ಇಬ್ಬರ ವಿರುದ್ಧ ನ್ಯಾಯಾಧೀಶರ ಸೂಚನೆ ಮೇರೆಗೆ ಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಕರಣವೊಂದರಲ್ಲಿ ಆರೋಪಿಯೊಬ್ಬರಿಗೆ ಜಾಮೀನು ನೀಡಲು ಬೆಂಗಳೂರಿನ ಗಂಗಮ್ಮ ಎಂಬುವವರು ಬಂದಿದ್ದರು. ಆರೋಪಿ ತನಗೆ ಪರಿಚಯ ಇದ್ದಾರೆ ಎಂದು ತಿಳಿಸಿದ್ದರು.

ಪ್ರಶ್ನಿಸಿದಾಗ ಗಂಗಮ್ಮಳಿಗೂ, ಆರೋಪಿಗೂ ಪರಿಚಯವಿಲ್ಲ ಎನ್ನುವುದು ಬೆಳಕಿಗೆ ಬಂದಿದೆ. ಇದರಿಂದ ಆಕೆಯ ವಿರುದ್ದ ದೂರು ದಾಖಲಿಸುವಂತೆ ನ್ಯಾಯಾಧೀಶರು ಸೂಚಿಸಿದ್ದಾರೆ.

ಜಾಮೀನು ನೀಡಿದರೆ ೫ ಸಾವಿರ ರೂ. ಹಣ ನೀಡುವುದಾಗಿ ಮಾಮು ಎಂಬಾತ ತಿಳಿಸಿದ್ದ ಎಂದು ನ್ಯಾಯಾಲಯದಲ್ಲಿ ಗಂಗಮ್ಮ ಒಪ್ಪಿಕೊಂಡಿದ್ದಾರೆ. ಪೊಲೀಸರು ಮಾಮುನನ್ನು ಹುಡುಕುತ್ತಿದ್ದಾರೆ.

ಈತ ದಲ್ಲಾಳಿಯಾಗಿ ಜಾಮೀನು ಕೊಡಿಸುವ ಕೆಲಸ ಮಾಡುತ್ತಿದ್ದ ಎಂದು ಪೊಲೀಸರು ಸಂಶಯಿಸಿದ್ದಾರೆ.

- Advertisement -  - Advertisement -  - Advertisement - 
Share This Article
error: Content is protected !!
";