ಚಂದ್ರವಳ್ಳಿ ನ್ಯೂಸ್, ಕಲಬುರಗಿ : ಅಸಹಾಯಕ ಮಹಿಳೆಯರನ್ನ ಬಳಸಿಕೊಂಡು ಸರ್ಕಾರಿ ಅಧಿಕಾರಿಗಳು, ಉದ್ಯಮಿಗಳನ್ನು ಟಾರ್ಗೆಟ್ ಮಾಡಿ ಹನಿಟ್ರ್ಯಾಪ್ ಖೆಡ್ಡಾಗೆ ಬೀಳಿಸುತ್ತಿದ್ದ ಆರೋಪಿಗಳ ವಿರುದ್ಧ ಕಲಬುರಗಿಯ ಸ್ಟೇಷನ್ ಬಜಾರ್ ಠಾಣೆಯಲ್ಲಿ ದೂರು ದಾಖಲಾಗಿದೆ.
ದಲಿತ ಸೇನೆಯ ಹಣಮಂತ ಯಳಸಂಗಿ, ಪ್ರಭು ಹಿರೇಮಠ, ರಾಜು ಲೆಂಗಟಿ, ಶ್ರೀಕಾಂತ ರೆಡ್ಡಿ, ಮಂಜು ಭಂಡಾರಿ ಸೇರಿದಂತೆ 8 ಜನರ ವಿರುದ್ಧ ಪ್ರಕರಣ ದಾಖಲಾಗಿದೆ.
ಆರೋಪಿಗಳು ಸಾಮಾಜಿಕ ಜಾಲತಾಣದ ಮೂಲಕ ಯುವತಿಯರನ್ನು ಪರಿಚಯ ಮಾಡಿಕೊಂಡಿದ್ದಾರೆ. ನಂತರ, ಅವರ ಆರ್ಥಿಕ ಪರಿಸ್ಥ ಆರ್ಥಿಕ ಪರಸ್ಥಿತಿ ನೋಡಿಕೊಂಡು ಅವರಿಗೆ ಹಣದ ಆಮಿಷ ತೋರಿಸಿದ್ದಾರೆ. ಬಳಿಕ, ಯುವತಿಯರನ್ನು ಹನಿಟ್ರ್ಯಾಪ್ಗೆ ಬಳಸಿಕೊಂಡಿದ್ದಾರೆ. ಆರೋಪಿಗಳು 10ಕ್ಕೂ ಹೆಚ್ಚು ಯುವತಿಯರನ್ನು ಹನಿಟ್ರ್ಯಾಪ್ಗೆ ಬಳಸಿಕೊಂಡಿದ್ದಾರೆ.
ನ್ಯಾಯಕ್ಕಾಗಿ ಅಲೆದಾಡುವ ಒಂಟಿ ಮಹಿಳೆಯರೇ ಇವರಿಗೆ ಟಾರ್ಗೆಟ್ . ಈ ಜಾಲದ ಬಗ್ಗೆ ಸ್ವತಃ ಹನಿಟ್ರ್ಯಾಪ್ಗೆ ಒಳಗಾದ ಮಹಿಳೆಯರೇ ದೂರು ನೀಡಿದ್ದು, ಇತ್ತ ಹನಿಟ್ರ್ಯಾಪ್ ಮಾಡುವ ಮಹಿಳೆಯರಿಗೆ, ಅತ್ತ ಅವರ ಬಲೆಗೆ ಬೀಳುವ ಉದಗಯಮಿ, ಅಧಿಕಾರಿಗಳು, ಶ್ರೀಮಂತರನ್ನು ಹೆದರಿಸಿ ಹಣ ವಸೂಲಿ ಮಾಡುತ್ತಿದ್ದರು ಎನ್ನಲಾಗಿದೆ.
ಮಹಾರಾಷ್ಟ್ರ ಮೂಲದ ಯುವತಿಯೋರ್ವಳನ್ನು ಬಳಸಿಕೊಂಡು ಉದ್ಯಮಿ ವಿನೋಧ ಎನ್ನುವಾತನಿಗೆ ಹನಿಟ್ರ್ಯಾಪ್ ಮಾಡಿದ್ದು, ಯುವತಿಯ ಮೂಲಕ ವಿನೋಧಗೆ ಖೆಡ್ಡಾ ತೋಡಿ ಕಲಬುರಗಿಯ ಲಾಡ್ಜಗೆ ಕರೆಸಿ ಹಲವು ವಿಡಿಯೋ ಮಾಡಿಸಿಕೊಂಡು ನಂತರ ಈ ಗ್ಯಾಂಗ್ ಬ್ಲ್ಯಾಕ್ ಮೇಲ್ ಮಾಡಿದೆ ಎಂದು ಆರೋಪಿಸಲಾಗಿದೆ.
ಹನಿಟ್ರ್ಯಾಪ್ಗೆ ಬಳಸುತ್ತಿದ್ದ ಯುವತಿಯನ್ನು ಕೆಲಸ ಕೊಡಿಸುವುದಾಗಿ ಕಲಬುರಗಿಗೆ ಕರೆಸಿ ಲಾಡ್ಜ್ನಲ್ಲಿಟ್ಟು ಇತರರಿಂದ ಅತ್ಯಾಚಾರಕ್ಕೆ ಗುರಿಯಾಗಿಸಿದ್ದು, ನಂತರ ಆ ವಿಡಿಯೋಗಳನ್ನು ಮಾಡಿಕೊಂಡು ನಾವು ಹೇಳಿದಂತೆ ಕೇಳು ಇಲ್ಲದಿದ್ರೆ ವಿಡಿಯೋ ಹೊರಗೆ ಹಾಕ್ತಿವಿ ಅಂತ ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ. ಮತ್ತೊಂದೆಡೆ ಇದೇ ರೀತಿ ಗಂಡನಿಂದ ನ್ಯಾಯ ಕೇಳಲು ಬಂದ ಕಮಲಾಪೂರ ತಾಲೂಕಿನ ಡೋಂಗರಗಾಂವ್ ಮಹಿಳೆಯನ್ನೂ ಈ ಖತರ್ನಾಕ್ ಗ್ಯಾಂಗ್ ಹನಿಟ್ರ್ಯಾಪ್ಗೆ ಬಳಸಿಕೊಂಡಿದ್ದು, ಪೊಲೀಸ್ ಕಾನ್ಸಟೇಬಲ್ಗೆ ಕರೆ ಮಾಡಿಸಿ ಪುಸಲಾಯಿಸಿ ಲಾಡ್ಜ್ಗೆ ಕರೆದುಕೊಂಡು ಹೋಗಿ ವಿಡಿಯೋ ಮಾಡಿಕೊಂಡಿದ್ದಾರೆ. ನಂತರ ಪೇದೆ ಬಸವರಾಜ್ಗೆ ಬ್ಲ್ಯಾಕ್ ಮೇಲ್ ಮಾಡಿ 7 ಲಕ್ಷ ರೂಪಾಯಿ ವಸೂಲಿ ಮಾಡಿದ್ದಾರೆ ಎಂದು ಡೋಂಗರಗಾಂವ್ ಮಹಿಳೆ ಆರೋಪಿಸಿದ್ದಾರೆ.
ದೂರು ನೀಡಿರುವ ಮಹಿಳೆ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ‘ದಲಿತ ಸೇನೆ ಸಂಘಟನೆ ಕಟ್ಟಿಕೊಂಡು ಇದನ್ನೇ ಮಾಡುತ್ತಿದ್ದಾರೆ. ನಮ್ಮಂತ ಹತ್ತಾರು ಅಮಾಯಕ ಮಹಿಳೆರನ್ನು ಈ ರೀತಿ ಹನಿಟ್ರ್ಯಾಪ್ ಗೆ ಬಳಸಿಕೊಳ್ಳುತ್ತಿದ್ದಾರೆ ಎಂದು ಸ್ವತಃ ಪೊಲೀಸ್ ಠಾಣೆಗೆ ದೂರು ಕೊಟ್ಟಿದ್ದಾರೆ.
ಪ್ರಕರಣ ಸಂಬಂಧ ಕಲಬುರಗಿಯ ಸ್ಟೇಷನ್ ಬಜಾರ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.