ಸಮೃದ್ಧ ಜೀವನ ಫುಡ್ಸ್ ಹಾಗೂ ಸಮೃದ್ಧ ಜೀವನ ಮಲ್ಟಿಸ್ಟೇಟ್ ಮಲ್ಟಿ ಪರ್ಪಸ್ ಸೊಸೈಟಿಯಿಂದ ವಂಚನೆ

News Desk

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಚಿತ್ರದುರ್ಗ ನಗರದಲ್ಲಿ 2009 ರಿಂದ 2015 ರವರೆಗಿನ ಮಧ್ಯದ ಅವಧಿಯಲ್ಲಿ ಶ್ರೀನಾಥ್ ಬಿಲ್ಡಿಂಗ್‌ನಲ್ಲಿ ಪುಣೆ ಮೂಲದ ಸಮೃದ್ಧ ಜೀವನ ಫುಡ್ಸ್ ಹಾಗೂ ಸಮೃದ್ಧ ಜೀವನ ಮಲ್ಟಿಸ್ಟೇಟ್ ಮಲ್ಟಿ ಪರ್ಪಸ್ ಕೋ ಆಪರೇಟಿವ್ ಸೊಸೈಟಿ ಸಂಸ್ಥಾಪರಾದ ಮಹೇಶ್ ಕಿಸಾನ್ ಮೊತ್ತೆದಾರ್ ಹಾಗೂ ಇನ್ನಿತರರು ಸೇರಿಕೊಂಡು ಸಾರ್ವಜನಿಕರಿಂದ ಐದುವರೆ ವರ್ಷದಲ್ಲಿ ಹಣವನ್ನು ದ್ವಿಗುಣ ಮಾಡಿಕೊಡುವುದಾಗಿ ಹೇಳಿ ನಂಬಿಸಿ ಮೋಸದಿಂದ ಹಣವನ್ನು ಠೇವಣಿ ಮಾಡಿಸಿಕೊಂಡು ನಂತರ ದ್ವಿಗುಣ ಹಣ ನೀಡುವ ಸಮಯ ಬಂದಾಗ ಸೊಸೈಟಿಯನ್ನು ಮುಚ್ಚಿಕೊಂಡು ಹೋಗಿ ಕೋಟ್ಯಾಂತರ ರೂಪಾಯಿ ವಂಚಿಸಿದ್ದಾಗಿ ನೀಡಿದ ದೂರಿನ ಮೇರೆಗೆ ಚಿತ್ರದುರ್ಗ ನಗರದ ಸಿ.ಇ.ಎನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ, ಪ್ರಸ್ತುತ ಬೆಂಗಳೂರಿನ ಸಿ.ಐ.ಡಿ ತನಿಖೆಯಲ್ಲಿದೆ.

ಸಾರ್ವಜನಿಕರು ಸಮೃದ್ಧ ಜೀವನ ಫುಡ್ಸ್ ಹಾಗೂ ಸಮೃದ್ಧ ಜೀವನ ಮಲ್ಟಿಸ್ಟೇಟ್ ಮಲ್ಟಿ ಪರ್ಪಸ್ ಕೋ ಆಪರೇಟಿವ್ ಸೊಸೈಟಿಯಲ್ಲಿ ಹಣ ಠೇವಣಿ, ಹೂಡಿಕೆ ಮಾಡಿದ್ದು, ಅವಧಿ ಪೂರ್ಣ ನಂತರದಲ್ಲಿ ಈ ಕಂಪನಿ ಅಥವಾ ಸೊಸೈಟಿಯವರು ಹಣ ಮರುಪಾವತಿ ಮಾಡದೇ ಇದ್ದ ಪಕ್ಷದಲ್ಲಿ ಅಂತಹ ವ್ಯಕ್ತಿಗಳು ತಮಗೆ ಕಂಪನಿ, ಸೊಸೈಟಿಯವರು ಹಣ ಪಡೆದು ನೀಡಿದ್ದ ಬಾಂಡ್, ರಸೀದಿ ಇತ್ಯಾದಿ ಎಲ್ಲಾ ಮೂಲ ದಾಖಲಾತಿಗಳೊಂದಿಗೆ ವಾರದೊಳಗೆ ಬೆಂಗಳೂರು ಅರಮನೆ ರಸ್ತೆ, ಸಿ.ಐ.ಡಿ ಮುಖ್ಯ ಕಚೇರಿಯ ಆರ್ಥಿಕ ಅಫರಾಧಗಳ ವಿಭಾಗದ ಪೊಲೀಸ್ ಉಪಾಧೀಕ್ಷಕರನ್ನು ಅಥವಾ ದೂರವಾಣಿ ಸಂಖ್ಯೆ 080-22094469 ಗೆ ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

- Advertisement -  - Advertisement -  - Advertisement - 
Share This Article
error: Content is protected !!
";