ಚಂದ್ರವಳ್ಳಿ ನ್ಯೂಸ್, ದೆಹಲಿ:
ಡಿ.5 ರಂದು ಗುರುವಾರ ಕಾಂಗ್ರೆಸ್ ಪಕ್ಷದ ವತಿಯಿಂದ ಹಾಸನದಲ್ಲಿ ಅದ್ದೂರಿ ಜನಕಲ್ಯಾಣ ಸಮಾವೇಶ ನಡೆಯುತ್ತಿರುವ ಸಂದರ್ಭದಲ್ಲಿ ಹಾಸನದ ಶಾಸಕ ಹೆಚ್.ಡಿ.ರೇವಣ್ಣ ದೆಹಲಿ ಪ್ರವಾಸ ಕೈಗೊಂಡಿದ್ದಾರೆ.
ಹೊಳೆನರಸೀಪುರ ಶಾಸಕ ಹೆಚ್ ಡಿ ರೇವಣ್ಣ ಅವರನ್ನು ಈ ಕುರಿತು ಮಾಧ್ಯಮ ಸ್ನೇಹಿತರು ಕೇಳಿದ ಪ್ರಶ್ನೆಗೆ, ಮಾಡಿಕೊಳ್ಳಲಿ, ಕಳೆದ 50 ವರ್ಷಗಳಲ್ಲಿ ಕಾಂಗ್ರೆಸ್ ಹಾಸನ ಜಿಲ್ಲೆಯನ್ನಂತೂ ಉದ್ಧಾರ ಮಾಡಲಿಲ್ಲ,
ಇನ್ನಾದರೂ ಮಾಡಲಿ, ಹೆಚ್ ಡಿ ದೇವೇಗೌಡರ ಕುಟುಂಬವನ್ನು ಮುಗಿಸುವುದು ಸಾಧ್ಯವಿಲ್ಲ, ಲೋಕಸಭಾ ಚುನಾವಣೆಯಲ್ಲಿ ಏನು ನಡೆಯಿತು ಅಂತ ಎಲ್ಲರಿಗೂ ಗೊತ್ತಿದೆ, 6 ಬಾರಿ ಶಾಸಕನಾಗಿ ಅಯ್ಕೆಯಾಗಿರುವ ತಾನು ಇಂಥ ಹಲವಾರು ಸಮಾವೇಶಗಳನ್ನು ನೋಡಿದ್ದೇನೆ ಎಂದು ಮಾರ್ಮಿಕವಾಗಿ ರೇವಣ್ಣ ಹೇಳಿದರು.