ಸೇವಂತಿಗೆ ಸುಧಾರಿತ ಬೇಸಾಯ, ನೀರಿನ ಸದ್ಬಳಕೆ ಕ್ರಮ

News Desk


ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ರೈತರು ಕೃಷಿಯ ಜೊತೆಗೆ ಕೃಷಿ ಉಪ ಕಸುಬುಗಳಾದ ಹೈನುಗಾರಿಕೆ, ಕುರಿ ಸಾಕಣಿಕೆ, ಕೋಳಿ ಮತ್ತು ಜೇನು ಸಾಕಾಣಿಕೆ ಮಾಡಿ ಸಮಗ್ರ ಕೃಷಿ ಪದ್ದತಿ ಅಳವಡಿಸುವುದರಿಂದ ಸುಸ್ಥಿರ ಕೃಷಿಯಿಂದ ಆರ್ಥಿಕವಾಗಿ ಸಬಲರಾಗಲು ಸಾಧ್ಯವಾಗುತ್ತದೆ ಎಂದು ಜಿಲ್ಲಾ ಕೃಷಿ ತರಬೇತಿ ಕೇಂದ್ರದ ಸಹಾಯಕ ಕೃಷಿ ನಿರ್ದೇಶಕ ರಜನೀಕಾಂತ ಹೇಳಿದರು.

  ಹಿರಿಯೂರು ತಾಲ್ಲೂಕಿನ ಬಬ್ಬೂರುಫಾರಂನ ಜಿಲ್ಲಾ ಕೃಷಿ ತರಬೇತಿ ಕೇಂದ್ರದಲ್ಲಿ ಈಚೆಗೆ ಹೊಸದುರ್ಗ ಮತ್ತು ಹಿರಿಯೂರು ತಾಲ್ಲೂಕಿನ ವಿವಿಧ ಗ್ರಾಮಗಳಿಂದ ಆಗಮಿಸಿದ ರೈತರಿಗೆ ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆಯಡಿ ಕೃಷಿಯಲ್ಲಿ ತುಂತುರು ಮತ್ತು ಹನಿ ನೀರಾವರಿ ಘಟಕಗಳ ಅಳವಡಿಕೆ ಮತ್ತು ನಿರ್ವಹಣೆ, ಸೇವಂತಿಗೆ ಬೆಳೆಯ ಸುಧಾರಿತ ಬೇಸಾಯ ಕ್ರಮಗಳು, ಸಮಗ್ರರೋಗ ಮತ್ತು ಕೀಟಗಳ ನಿರ್ವಹಣೆ ಕುರಿತು ಆಯೋಜಿಸಲಾದ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಕರ್ನಾಟಕದಲ್ಲಿ ಚಿತ್ರದುರ್ಗ ಜಿಲ್ಲೆಯು ಅತಿ ಹೆಚ್ಚು ಅಂತರ್ಜಲ ಉಪಯೋಗಿಸುವ ಜಿಲ್ಲೆಂiÀiಲ್ಲಿ ಒಂದಾಗಿದ್ದು,  ಮುಂದಿನ ಪೀಳಿಗೆಗೆ ಶುಧ್ಧ ನೀರನ್ನು ಉಳಿಸಲು ಹನಿ ಮತ್ತು ತುಂತುರು ನೀರಾವರಿ ಘಟಕಗಳ ಬಳಕೆಯಿಂದ ನೀರಿನ ಸಮರ್ಥ ಮತ್ತು ಮಿತ ಬಳಕೆಗೆ ಸಹಕಾರಿಯಾಗಿದೆ. ಸೇವಂತಿಗೆ ಜಿಲ್ಲೆಯ ಪ್ರಮುಖ ಹೂವಿನ ಬೆಳೆಯಾಗಿದ್ದು, ಈ ಬೆಳೆಯ ಸುಧಾರಿತ ಬೇಸಾಯ ಕ್ರಮಗಳ ತಾಂತ್ರಿಕತೆಗಳ ತರಬೇತಿಯ ಸದುಪಯೋಗ ಪಡೆದುಕೊಳ್ಳಲು ಕೋರಿದರು.

ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆ ಅಡಿ ರೈತರು ಅಗತ್ಯ ದಾಖಲಾತಿಗಳೊಂದಿಗೆ ತಮ್ಮ ಹತ್ತಿರದ ರೈತ ಸಂಪರ್ಕಕೇಂದ್ರವನ್ನು ಸಂಪರ್ಕಿಸಿ ತುಂತುರು ನೀರಾವರಿ ಘಟಕಗಳನ್ನು ಪಡೆಯಬಹುದಾಗಿದೆ. ಒಮ್ಮೆ ಸೂಕ್ಷ್ಮ ನೀರಾವರಿ ಪದ್ಧತಿಗೆ ಸಹಾಯಧನ ಪಡೆದ ಸಾಮಾನ್ಯ ವರ್ಗದ ರೈತರಿಗೆ ಮತ್ತೊಮ್ಮೆ ಸಹಾಯಧನ ಪಡೆಯಲು ಅವಕಾಶವಿರುವುದಿಲ್ಲ. ಆದರೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡರೈತರಿಗೆ ಪ್ರತಿ ಏಳು ವರ್ಷಕ್ಕೊಮ್ಮೆ ಸೂಕ್ಷ್ಮ ನೀರಾವರಿ ಘಟಕಗಳನ್ನು ಸಹಾಯಧನದಲ್ಲಿ ನೀಡಲು ಅವಕಾಶವಿರುತ್ತದೆ. ಹೆಚ್ಚಿನ ಮಾಹಿತಿಗಾಗಿ ತಮ್ಮ ಹತ್ತಿರದ ರೈತ ಸಂಪರ್ಕ ಕೇಂದ್ರಕ್ಕೆ ಸಂಪರ್ಕಿಸಲು ಕೋರಿದರು.

ಜೈನ್‍ಇರಿಗೇಷನ್ ಸಂಸ್ಥೆಯ ಪ್ರತಿನಿಧಿಯಾದ ಕೆ.ದೇವರಾಜ್ ಕೃಷಿ ಹಾಗೂ ತೋಟಗಾರಿಕಾ ಬೆಳಗಳಲ್ಲಿ ನೀರಿನ ಮಿತ ಬಳಕೆ ಹಾಗೂ ಉತ್ಪಾದಕತೆ ಹೆಚ್ಚಿಸಲು ಸ್ಪ್ರಿಂಕ್ಲರ್ ಮತ್ತು ಹನಿ ನೀರಾವರಿ ತಾಂತ್ರಿಕತೆ, ರಸಾವರಿ ತಂತ್ರಜ್ಞಾನ ಮತ್ತು ಅವುಗಳ ನಿರ್ವಹಣೆ ಕುರಿತು ವಿಷಯ ಮಂಡನೆ ಮಾಡಿದರು.

ಚಿತ್ರದುರ್ಗ ತಾಲ್ಲ್ಲೂಕಿನ ಹುಣಸೆಕಟ್ಟೆ ಗ್ರಾಮದ ಪ್ರಗತಿಪರ ರೈತರಾದ ಪಿ.ಸಿ.ಶ್ರೀನಿವಾಸ್ ಅವರು ಕಳೆದ 15 ವರ್ಷಗಳಿಂದ ಸೇವಂತಿಗೆ ಬೆಳೆಯನ್ನು ಬೆಳೆಯುತ್ತಿದ್ದು, ಹೆಚ್ಚಿನ ಇಳುವರಿ ಪಡೆಯಲು ಉತ್ತಮ ಆರೋಗ್ಯಕರ ಸಸಿಗಳ ನಾಟಿ ಮಾಡುವುದು ಪ್ರಮುಖವಾಗಿದ್ದು, ಪ್ರಾರಂಭಿಕ ಹಂತದ ರೋಗಗಳನ್ನು ನಿರ್ವಹಿಸಲು ಸಸಿ ಹಂತದಲ್ಲಿ ಕಾರ್ಬನ್‍ಡೈಜಿಮ್ + ಮ್ಯಾಂಕೊಜೆಬ್ ಸಿಂಪರಣೆ ಮಾಡುವುದು ಸೂಕ್ತ ಎಂದರು.

 ಬಬ್ಬೂರಿನ ತೋಟಗಾರಿಕೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕರಾದ ಡಾ. ಗುರುದೇವಿ ಅವರು ಸೇವಂತಿಗೆ ಬೆಳೆಯಲ್ಲಿ ಬರುವ ರೋಗಗಳ ನಿರ್ವಹಣೆ ಮತ್ತು ಬಬ್ಬೂರು ಫಾರಂನ ಕೃಷಿ ವಿಜ್ಞಾನ ಕೇಂದ್ರದ ಕೀಟಶಾಸ್ತ್ರಜ್ಞರಾದ ಡಾ.ಓಂಕಾರಪ್ಪರವರು ಸೇವಂತಿಗೆ ಬೆಳೆಯಲ್ಲಿ ಕೀಟಗಳ ನಿರ್ವಹಣೆ ಕುರಿತು ವಿಷಯ ಮಂಡನೆ ಮಾಡಿದರು.
ಇಪ್ಕೋ ಸಂಸ್ಥೆಯ ಕ್ಷೇತ್ರ ಅಧಿಕಾರಿಯಾದ ಚಿದಂಬರಮೂರ್ತಿ ಅವರು ನ್ಯಾನೋಯುರಿಯಾ ಮತ್ತು ನ್ಯಾನೋ ಡಿಎಪಿಯ ಕುರಿತು ಮಾಹಿತಿ ನೀಡಿದರು.

 

Share This Article
error: Content is protected !!
";