ನ.8ರಂದು ಗುರುಸಿದ್ದರಾಮೇಶ್ವರ ನೂತನ ದೇವಾಲಯ  ಉದ್ಘಾಟನೆ

News Desk

ಚಂದ್ರವಳ್ಳಿ ನ್ಯೂಸ್, ತುಮಕೂರು:
 ತುಮಕೂರು ತಾಲ್ಲೂಕು ಕಸಬಾ ಪೂರ್ವ ಹೋಬಳಿ ಬೆಳಗುಂಬ ಗ್ರಾಮದ ಶ್ರೀ ಗುರುಸಿದ್ದರಾಮೇಶ್ವರ ಮಹಾಸ್ವಾಮಿಯವರ ನೂತನ ದೇವಾಲಯ ಉದ್ಘಾಟನೆ ಹಾಗೂ ವಿಮಾನ ಗೋಪುರ ಕಲಶ ಸ್ಥಾಪನಾ ಕಾರ್ಯಕ್ರಮವು ನವೆಂಬರ್ ೮ರಂದು ಜರುಗಲಿದೆ ಎಂದು  ತಹಶೀಲ್ದಾರ್ ರಾಜೇಶ್ವರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ದೇವಾಲಯ ಉದ್ಘಾಟನಾ ಕಾರ್ಯಕ್ರಮವನ್ನು ನವೆಂಬರ್ ೮ರ ಶುಕ್ರವಾರ ಸಂಜೆ ೪.೩೦ ಗಂಟೆಗೆ ಶುಭ ಗೋಧೂಳಿ ಸಮಯದಲ್ಲಿ ಗಂಗಾಪೂಜೆ, ಮಹಾಗಣಪತಿಪೂಜೆ ಮೂಲಕ ಪ್ರಾರಂಭಿಸಲಾಗುವುದು. ನಂತರ  ಸಂಜೆ ೬ ಗಂಟೆಗೆ ಬೆಳ್ಳಾವಿ ಕಾರದೇಶ್ವರಮಠ ಶ್ರೀಶ್ರೀಶ್ರೀ ಕಾರದ ವೀರಬಸವ ಮಹಾಸ್ವಾಮಿ ದಿವ್ಯಸಾನಿಧ್ಯದಲ್ಲಿ ಧ್ವಜಾರೋಹಣ ಹಾಗೂ ದೇವಾಲಯ ಲೋಕಾರ್ಪಣೆಗೊಳ್ಳಲಿದೆ.

ದೇವಾಲಯ ಉದ್ಘಾಟನೆ ಹಾಗೂ ವಿಮಾನ ಗೋಪುರ ಕಲಶ ಸ್ಥಾಪನಾ ಅಂಗವಾಗಿ ನವೆಂಬರ್ ೧೧ರವರೆಗೂ ಅಭಿಷೇಕ, ಹೋಮ, ಪೂರ್ಣಫಲ ಸಮರ್ಪಣೆ ಸೇರಿ ವಿವಿಧ ಪೂಜಾ ಕೈಂಕರ್ಯಗಳು ನಡೆಯಲಿದ್ದು, ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶ್ವಸಿಗೊಳಿಸಬೇಕೆಂದು ಮನವಿ ಮಾಡಿದ್ದಾರೆ.

ಕಡೆಯ ದಿನ ನವೆಂಬರ್ ೧೧ರ ಬೆಳಿಗ್ಗೆ ೧೧ ಗಂಟೆಗೆ ಪೂಜಾ ಕಾರ್ಯಕ್ರಮಗಳ ಸಮಾರೋಪ ಸಮಾರಂಭ ಜರುಗಲಿದೆ.  ದೇವಾಲಯ ಉದ್ಘಾಟನೆ ಹಾಗೂ ವಿಮಾನ ಗೋಪುರ ಕಲಶ ಸ್ಥಾಪನಾ ಅಂಗವಾಗಿ ನವೆಂಬರ್ ೮ ರಿಂದ ೧೧ರವರೆಗೆ ಪ್ರತಿ ದಿನ ದಾಸೋಹ ನಡೆಯಲಿದೆ ಎಂದು ಅವರು ತಿಳಿಸಿದ್ದಾರೆ.

 

- Advertisement -  - Advertisement -  - Advertisement - 
Share This Article
error: Content is protected !!
";