ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಭ್ರಷ್ಟಾತಿ ಭ್ರಷ್ಟ ಕಾಂಗ್ರೆಸ್‌ಸರ್ಕಾರ ಮಹರ್ಷಿ ವಾಲ್ಮೀಕಿ ನಿಗಮದ ಪರಿಶಿಷ್ಟರ ಅಭಿವೃದ್ಧಿ ಹಣ ಲೂಟಿ ಹೊಡೆದು ಬಳ್ಳಾರಿ ಲೋಕಸಭಾ ಚುನಾವಣೆಗೆ ಅಕ್ರಮವಾಗಿ ಬಳಕೆ ಮಾಡಿದೆ.
ಮೂವರು ಕಾಂಗ್ರೆಸ್‌ಶಾಸಕರ ಮೂಲಕ ಕಾರ್ಯಕರ್ತರಿಗೆ ಎಣ್ಣೆ ಖರೀದಿ, ಪಕ್ಷದ ಅಭ್ಯರ್ಥಿ ಪರ ಮತ ಹಾಕಿಸಲು ಹಣ ಹಂಚಿಕೆಗಾಗಿ 14.80 ಕೋಟಿ ವೆಚ್ಚ ಮಾಡಿರುವ ಬಗ್ಗೆ ಇಡಿ (ED) ನ್ಯಾಯಾಲಯಕ್ಕೆ ಸಲ್ಲಿಸಿರುವ ಚಾರ್ಜ್‌ಶೀಟ್‌ನಲ್ಲಿ ಆರೋಪಿಸಿದೆ ಎಂದು ಜೆಡಿಎಸ್ ಕಾಂಗ್ರೆಸ್ ಆಡಳಿತದ ವಿರುದ್ಧ ಹರಿಹಾಯ್ದಿದೆ.
ವಾಲ್ಮೀಕಿ ನಿಗಮದಲ್ಲಿ ದೋಚಿರುವ ಹಣದಲ್ಲಿ ಮಾಜಿ ಸಚಿವ ಬಿ.ನಾಗೇಂದ್ರ ಮತ್ತು ಕುಟುಂಬದವರು ವಿಮಾನದ ಟಿಕೆಟ್‌ಖರೀದಿ ಸೇರಿದಂತೆ ಮೋಜು ಮಸ್ತಿಗೆ ಬಳಸಿಕೊಂಡಿದ್ದಾರೆ ಎಂದು.
ಸ್ವತಃ ಹಣಕಾಸು ಸಚಿವರಾಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಮೂಗಿನಡಿಯೇ ಅಕ್ರಮವಾಗಿ ಹಣಕಾಸಿನ ವರ್ಗಾವಣೆ ನಡೆದಿರುವುದು ಕರ್ನಾಟಕ ಕಾಂಗ್ರೆಸ್ ಸರ್ಕಾರದ ಭ್ರಷ್ಟ ಆಡಳಿತಕ್ಕೆ ಹಿಡಿದ ಕೈಗನ್ನಡಿ ಎಂದು ಜೆಡಿಎಸ್ ದೂರಿದೆ.