ಸೌತ್ ಜೋನ್ ಬಾಕ್ಸಿಂಗ್‌ನಲ್ಲಿ ಮದಿಹಾ ಇಬ್ರಾಹಿಂಗೆ ಪದಕ

News Desk

ಚಂದ್ರವಳ್ಳಿ ನ್ಯೂಸ್, ಶಿವಮೊಗ್ಗ :
ಫೆಬ್ರವರಿ ೯ ರಿಂದ ೧೧ ರವರೆಗೆ ಮಹಾರಾಷ್ಟ್ರದ ಕೊಲ್ಲಾಪುರದಲ್ಲಿ ನಡೆದ ಸಿಬಿಎಸ್‌ಇ ಸೌತ್ ಜೋನ್ ಬಾಕ್ಸಿಂಗ್ ಪಂದ್ಯಾವಳಿಯಲ್ಲಿ ಶಿವಮೊಗ್ಗದ ಜೈನ್ ಪಬ್ಲಿಕ್ ಶಾಲೆಯ ೧೦ನೇ ತರಗತಿ ವಿದ್ಯಾರ್ಥಿನಿ ಮದಿಹಾ ಇಬ್ರಾಹಿಂ ೧೭ ವರ್ಷ ವಯೋಮಿತಿಯೊಳಗಿನ ಬಾಲಕಿರ ೫೪-೫೭ ಕೆಜಿ ತೂಕದ ವಿಭಾಗದಲ್ಲಿ ಭಾಗವಹಿಸಿ ತೃತೀಯ ಬಹುಮಾನ ಪಡೆದಿದ್ದಾಳೆ.

 ಶಿವಮೊಗ್ಗ ಜಿಲ್ಲೆಯ ಇತಿಹಾಸದಲ್ಲಿ ಸಿಬಿಎಸ್‌ಇ ಪಂದ್ಯಾವಳಿಯ ಬಾಕ್ಸಿಂಗ್ ವಿಭಾಗದಲ್ಲಿ ಇದೇ ಮೊದಲು ಜಿಲ್ಲೆಯಿಂದ ಕ್ರೀಡಾಪಟುಗಳು ಸ್ಪರ್ಧಿಸಿದ್ದು ಮೊದಲ ಪ್ರಯತ್ನದಲ್ಲಿ ತೃತೀಯ ಬಹುಮಾನ ಪಡೆಯುವ ಮುಖಾಂತರ ಇತಿಹಾಸ ಸೃಷ್ಟಿಸಿದ್ದಾಳೆ.

 ಇವಳು ಕರ್ನಾಟಕ ಸರ್ಕಾರದ ಮಿನಿ ಒಲಂಪಿಕ್ಸ್ ಸೇರಿದಂತೆ ವಿವಿಧ ಕ್ರೀಡಾಕೂಟ ಗಳಲ್ಲಿ ಭಾಗವಹಿಸಿ ಬಹುಮಾನ ಪಡೆದಿದ್ದು ಕರಾಟೆ ಸ್ಕ್ವಾಯ ಕ್ರೀಡೆಗಳಲ್ಲಿ ಉತ್ತಮ ಸಾಧನೆ ಮಾಡಿರುವ ಸಲುವಾಗಿ ಜಿಲ್ಲಾಡಳಿತದಿಂದ ಗೌರವ ಸನ್ಮಾನ ಪಡೆದಿದ್ದಾಳೆ. ಜಿಲ್ಲಾ ಅಮೆಚೂರ್ ಬಾಕ್ಸಿಂಗ್ ಅಸೋಸಿಯೇಷನ್ ನ ಬಾಕ್ಸಿಂಗ್ ಕೋಚ್ ಮೀನಾಕ್ಷಿ ಬಳಿ ತರಬೇತಿ ಪಡೆಯುತ್ತಿದ್ದಾಳೆ.

  

- Advertisement -  - Advertisement - 
Share This Article
error: Content is protected !!
";