ಸಕಲ ಜೀವಿಗಳ ಮೇಲಣ ಶ್ರೀಮಾತೆಯವರ ಮಾತೃವಾತ್ಸಲ್ಯ ಅಗಾಧವಾದದ್ದು        

News Desk
- Advertisement -  - Advertisement - 

ಚಂದ್ರವಳ್ಳಿ ನ್ಯೂಸ್, ಚಳ್ಳಕೆರೆ:
ಶ್ರೀಮಾತೆ ಶಾರದಾದೇವಿಯವರು ಸಕಲ ಜೀವಿಗಳ ಮೇಲೆ ಹರಿಸುತ್ತಿದ್ದ ಮಾತೃವಾತ್ಸಲ್ಯ ಅನಂತವಾದದ್ದು  ಎಂದು ಚಳ್ಳಕೆರೆಯ ತ್ಯಾಗರಾಜನಗರದ ಶ್ರೀಶಾರದಾದೇವಿ ಸತ್ಸಂಗ ಕೇಂದ್ರದ ಉಪಾಧ್ಯಕ್ಷರಾದ ಶ್ರೀಮತಿ ಎಂ ಗೀತಾ ನಾಗರಾಜ್ ತಿಳಿಸಿದರು‌.
ನಗರದ ತ್ಯಾಗರಾಜನಗರದ ಸದ್ಭಕ್ತರಾದ ನಂಜಮ್ಮ ಕೆಂಚಪ್ಪ ಶಿಕ್ಷಕರ ಸವಿತಾ ನಿವಾಸದಲ್ಲಿ ಆಯೋಜಿಸಿದ್ದ ವಾರದ ವಿಶೇಷ ಸತ್ಸಂಗ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಭಜನೆ ನಡೆಸಿಕೊಟ್ಟ ಅವರು “ಶ್ರೀಮಾತೆ ಶಾರದಾದೇವಿಯವರ ಅಗಾಧ ಮಾತೃವಾತ್ಸಲ್ಯ” ಎಂಬ ವಿಷಯವಾಗಿ ವಿಶೇಷ ಉಪನ್ಯಾಸ ನೀಡುತ್ತಾ ಮಾತನಾಡುತ್ತಿದ್ದರು‌.

ಶಾರದಾಮಾತೆಯವರ ಸಮಗ್ರ ಜೀವನವನ್ನು ಅಧ್ಯಯನ ಮಾಡಿದಾಗ ಅವರ ಮಾತೃವಾತ್ಸಲ್ಯ ಕೇವಲ ಮನುಷ್ಯರ ಮೇಲಷ್ಟೇ ಹರಿಯದೆ ಜಗತ್ತಿನ ಸಕಲ ಪ್ರಾಣಿ-ಪಕ್ಷಿಗಳ ಮೇಲೆಯೂ ಹರಿಯುತ್ತಿತ್ತು ಎಂಬುದು ಗೊತ್ತಾಗುತ್ತದೆ. ಅವರ ಮನೆಯಲ್ಲಿದ್ದ ಬೆಕ್ಕು,ಕರು,ಅನಾಥ ಹುಡುಗ ಗೋವಿಂದನ ಮೇಲಣ ಅವರ ವಾತ್ಸಲ್ಯ ಅಪರಿಮಿತವಾದದ್ದು ಎಂದರು.

- Advertisement - 

ಸತ್ಸಂಗದ ಪ್ರಯುಕ್ತ ಸತ್ಸಂಗ ಕೇಂದ್ರದ ಸದ್ಭಕ್ತರಿಂದ ಸಾಮೂಹಿಕ ಶ್ರೀರಾಮರಕ್ಷಾ ಸ್ತೋತ್ರ ಪಠಣ, ಶ್ರೀರಾಮಕೃಷ್ಣರ ನಾಮಸ್ಮರಣೆ,ಶ್ರೀಮತಿ ನೇತ್ರಾ ಮಂಜುನಾಥ, ಚಿನ್ನಮ್ಮ, ತಿಪ್ಪಮ್ಮ ಉಮಾಶಂಕರ್ ಅವರಿಂದ ವಿಶೇಷ ಭಜನೆಗಳು, ಯತೀಶ್ ಎಂ ಸಿದ್ದಾಪುರ ಅವರಿಂದ “ಶ್ರೀಶಾರದಾದೇವಿ ಜೀವನಗಂಗಾ” ಗ್ರಂಥ ಪಾರಾಯಣ, ದಿವ್ಯತ್ರಯರಿಗೆ ಮಂಗಳಾರತಿ,ಪ್ರಸಾದ ವಿನಿಯೋಗ ನಡೆಯಿತು.
ಸತ್ಸಂಗ ಕಾರ್ಯಕ್ರಮದಲ್ಲಿ ಎಚ್ ಲಕ್ಷ್ಮೀದೇವಮ್ಮ , ಎಂ ಲಕ್ಷ್ಮೀದೇವಮ್ಮ ತಿಪ್ಪೇಸ್ವಾಮಿ,ಅರುಣ, ಪ್ರೇಮಾ, ಸರಸ್ವತಿ ರಾಜು, ಸರಸ್ವತಿ ಸೇರಿದಂತೆ ಸದ್ಭಕ್ತರು ಉಪಸ್ಥಿತರಿದ್ದರು.

 

- Advertisement - 

 

Share This Article
error: Content is protected !!
";