ಕರ್ನಾಟಕಕ್ಕೆ 18,430 ಕೋಟಿ ಹೂಡಿಕೆ ಹರಿವು: 15 ಸಾವಿರಕ್ಕೂ ಅಧಿಕ ಉದ್ಯೋಗ ಸೃಷ್ಟಿ

News Desk
- Advertisement -  - Advertisement - 

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ರಾಜ್ಯದ ಕೈಗಾರಿಕಾ ವಲಯದಲ್ಲಿ ಮತ್ತೊಂದು ಹೂಡಿಕೆಯ ಪರ್ವ ಆರಂಭವಾಗಿದ್ದು, ಒಟ್ಟು 18,430.44 ಕೋಟಿ ಮೊತ್ತದ ಬಂಡವಾಳ ಹೂಡಿಕೆಗೆ ರಾಜ್ಯ ಸರ್ಕಾರ ಅಸ್ತು ಎಂದಿದೆ. ಇದರಿಂದಾಗಿ ರಾಜ್ಯದಲ್ಲಿ ಸುಮಾರು 15,032 ಹೊಸ ಉದ್ಯೋಗಾವಕಾಶಗಳು ಸೃಷ್ಟಿಯಾಗಲಿವೆ.

​ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್ ಅವರ ಅಧ್ಯಕ್ಷತೆಯಲ್ಲಿ ನಡೆದ ರಾಜ್ಯ ಉನ್ನತ ಮಟ್ಟದ ಅನುಮೋದನೆ ನೀಡಿಕೆ ಸಮಿತಿಯ (SHLCC) 67ನೇ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಸಭೆಯಲ್ಲಿ ಒಟ್ಟು 11 ಹೊಸ ಯೋಜನೆಗಳು ಹಾಗೂ 6 ಹೆಚ್ಚುವರಿ ಬಂಡವಾಳ ಹೂಡಿಕೆಯ ಪ್ರಸ್ತಾವನೆಗಳಿಗೆ ಅಧಿಕೃತವಾಗಿ ಸಮ್ಮತಿ ಸೂಚಿಸಲಾಗಿದೆ.

- Advertisement - 

​’ಬಿಯಾಂಡ್ ಬೆಂಗಳೂರುಪರಿಕಲ್ಪನೆಗೆ ಭರ್ಜರಿ ಯಶಸ್ಸು:
​ಕೈಗಾರಿಕೆಗಳು ಕೇವಲ ಬೆಂಗಳೂರಿಗೆ ಮಾತ್ರ ಸೀಮಿತವಾಗದೆ ರಾಜ್ಯದ ಇತರೆ ಜಿಲ್ಲೆಗಳಿಗೂ ವಿಸ್ತರಿಸಬೇಕು ಎನ್ನುವ ಸರ್ಕಾರದ ಬಿಯಾಂಡ್ ಬೆಂಗಳೂರುಆಶಯಕ್ಕೆ ಈ ಹೂಡಿಕೆಗಳು ದೊಡ್ಡ ಬಲ ನೀಡಿವೆ. ಈ ಬಾರಿ ಅನುಮೋದನೆಗೊಂಡಿರುವ ಯೋಜನೆಗಳು ರಾಜ್ಯದ ವಿವಿಧ 11 ಜಿಲ್ಲೆಗಳಲ್ಲಿ ಹರಡಿಕೊಂಡಿರುವುದು ವಿಶೇಷ.

​ಹೂಡಿಕೆ ಹರಿಯಲಿರುವ ಜಿಲ್ಲೆಗಳು:
​ಬಾಗಲಕೋಟೆ, ಬೀದರ್‌, ಬೆಳಗಾವಿ, ​ಬಳ್ಳಾರಿ, ಕೋಲಾರ, ಚಿಕ್ಕಬಳ್ಳಾಪುರ,​ದಕ್ಷಿಣ ಕನ್ನಡ, ತುಮಕೂರು, ಚಾಮರಾಜನಗರ, ​ಬೆಂಗಳೂರು ಗ್ರಾಮಾಂತರ ಹಾಗೂ ಬೆಂಗಳೂರು ನಗರ ಜಿಲ್ಲೆ.

- Advertisement - 

​ಸಮತೋಲಿತ ಅಭಿವೃದ್ಧಿಯತ್ತ ಹೆಜ್ಜೆ:
​”
ಬಿಯಾಂಡ್ ಬೆಂಗಳೂರು ಪರಿಕಲ್ಪನೆಯು ಉದ್ಯಮ ವಲಯದಲ್ಲಿ ಆಳವಾಗಿ ಬೇರೂರುತ್ತಿರುವುದಕ್ಕೆ ಈ ಹೂಡಿಕೆಗಳೇ ಸಾಕ್ಷಿ. ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಕೈಗಾರಿಕೆಗಳು ಸ್ಥಾಪನೆಯಾಗುವುದರಿಂದ ಆಯಾ ಭಾಗದ ಸ್ಥಳೀಯರಿಗೆ ಉದ್ಯೋಗ ದೊರೆಯಲಿದೆ. ಇದು ರಾಜ್ಯದ ಸರ್ವತೋಮುಖ ಮತ್ತು ಸಮತೋಲಿತ ಅಭಿವೃದ್ಧಿಗೆ ದಾರಿಯಾಗಲಿದೆ,” ಎಂದು ಸಚಿವ ಎಂ.ಬಿ. ಪಾಟೀಲ್ ಸಂತಸ ವ್ಯಕ್ತಪಡಿಸಿದ್ದಾರೆ.

​ಈ ಬೃಹತ್ ಹೂಡಿಕೆಯು ಕರ್ನಾಟಕವನ್ನು ದೇಶದ ಅಗ್ರಗಣ್ಯ ಕೈಗಾರಿಕಾ ಹಬ್ ಆಗಿ ಮುಂದುವರಿಸಲು ನೆರವಾಗಲಿದ್ದು, ಆರ್ಥಿಕತೆಗೆ ಹೆಚ್ಚಿನ ವೇಗ ನೀಡಲಿದೆ ಎಂದು ನಿರೀಕ್ಷಿಸಲಾಗಿದೆ.

 

 

Share This Article
error: Content is protected !!
";