ಆಹ್ವಾನ ಪತ್ರಿಕೆಯಲ್ಲಿ ಜಯದೇವ ಮುರುಘರಾಜೇಂದ್ರ ಕ್ರೀಡಾಂಗಣ ಎಂದು ನಮೂದಿಸಿ

News Desk

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ: 
ಗಣರಾಜ್ಯೋತ್ಸವದ ಆಹ್ವಾನ ಪತ್ರಿಕೆಯಲ್ಲಿ ಶ್ರೀ ಜಗದ್ಗುರು ಜಯದೇವ ಮುರುಘರಾಜೇಂದ್ರ ಕ್ರೀಡಾಂಗಣ ಎಂದು ನಮೂದಿಸುವ ಮಠದ ಭಕ್ತರು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿ ಒತ್ತಾಯಿಸಿದ್ದಾರೆ.

ಚಿತ್ರದುರ್ಗ ನಗರದ ಚಳ್ಳಕೆರೆ ಟೋಲ್‌ಗೇಟ್ ಬಳಿ ಇರುವ ಕ್ರೀಡಾಂಗಣವು ಶ್ರೀ ಜಗದ್ಗುರು ಜಯದೇವ ಮುರುಘರಾಜೇಂದ್ರ ಮಹಾಸ್ವಾಮಿಗಳ ಹೆಸರಿನಲ್ಲಿ ದಿನಾಂಕ: 06-09-1962 ರಲ್ಲಿ ಮೈಸೂರು ರಾಜ್ಯದ ಮುಖ್ಯಮಂತ್ರಿಯಾಗಿದ್ದ ಎಸ್ ನಿಜಲಿಂಗಪ್ಪ ನವರ ಅಮೃತಹಸ್ತದಿಂದ ಕ್ರೀಡಾಂಗಣವು ಉದ್ಘಾಟಿಸಲ್ಪಟ್ಟಿದೆ.

ಅಂದಿನಿಂದ ಈ ಕ್ರೀಡಾಂಗಣದ ಹೆಸರನ್ನು ಶ್ರೀ ಜಗದ್ಗುರು ಜಯದೇವ ಮುರುಘರಾಜೇಂದ್ರ ಕ್ರೀಡಾಂಗಣವೆಂದು ಕರೆಯಲ್ಪಡುತ್ತಿದೆ. ಅಲ್ಲಿ ನಡೆಯುವ ಕಾರ್ಯಕ್ರಮಗಳ ಆಹ್ವಾನಪತ್ರಿಕೆಯಲ್ಲೂ ಸಹ ಇದೇ ಹೆಸರು ನಮೂದಿಸಲಾಗಿದೆ.
ಆದರೆ ದಿನಾಂಕ:
26-01-2025 ರಂದು ನಡೆಯಲಿರುವ ಗಣರಾಜ್ಯೋತ್ಸವದ ಆಹ್ವಾನ ಪತ್ರಿಕೆಯಲ್ಲಿ ಸರ್ಕಾರಿ ವಿಜ್ಞಾನ ಕಾಲೇಜು ಮೈದಾನ ಎಂದು ನಮೂದಿಸಿ ಸ್ವಾಮೀಜಿಗಳ ಹೆಸರನ್ನು ಬಿಟ್ಟಿರುವುದು ಖಂಡನೀಯ ಮತ್ತು ಇದು ತ್ರಿವಿದ ದಾಸೋಹಿಗಳಾದ ಜಗದ್ಗುರು ಜಯದೇವ ಮುರುಘರಾಜೇಂದ್ರ ಮಹಾಸ್ವಾಮಿಜೀಗಳ ಭಕ್ತರಿಗೆ ನೋವುಂಟು ಮಾಡಿದೆ.

ತಕ್ಷಣ ಈಗ ಮುದ್ರಿಸಿರುವ ಆಹ್ವಾನ ಪತ್ರಿಕೆಯನ್ನು ಹಿಂಪಡೆದು ಶ್ರೀಗಳ ಹೆಸರನ್ನು ಮುದ್ರಿಸಬೇಕೆಂದು ಶ್ರೀ ಜಗದ್ಗುರು ಜಯದೇವ ಮುರುಘರಾಜೇಂದ್ರ ಕ್ರೀಡಾಂಗಣ ಅಭಿವೃದ್ಧಿ ಸಮಿತಿ ಅಧ್ಯಕ್ಷ ಜಿತೇಂದ್ರ ಎನ್ ಹುಲಿಕುಂಟೆ  ಇತರರು ಆಗ್ರಹಿಸಿದ್ದಾರೆ.

 

Share This Article
error: Content is protected !!
";