ಚಂದ್ರವಳ್ಳಿ ನ್ಯೂಸ್, ಹೊಳಲ್ಕೆರೆ:
ತಾಲ್ಲೂಕಿನ ಬೊಮ್ಮನಕಟ್ಟೆ ಕೆರೆಗೆ ಭಾನುವಾರ ಸಂಜೆ ಕಾರು ಬಿದ್ದಿದ್ದು, ಅತ್ತೆ, ಸೊಸೆ ಮೃತಪಟ್ಟಿದ್ದಾರೆ. ಅನಿತಾ (42) ರತ್ನಮ್ಮ (55) ಮೃತಪಟ್ಟವರು. ಕಾರು ಚಲಾಯಿಸುತ್ತಿದ್ದ ಅನಿತಾ ಪತಿ ಮಂಜುನಾಥ ಹಾಗೂ ಅವರ ಚಿಕ್ಕಮ್ಮ ಮಂಜುಳಾ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಸಾಫ್ಟ್ ವೇರ್ ಎಂಜಿನಿಯರ್ ಆಗಿದ್ದ ತಾಳ್ಯ ಗ್ರಾಮದ ಮಂಜುನಾಥ್ ಬೆಂಗಳೂರಿನಲ್ಲಿ ನೆಲೆಸಿದ್ದರು. ಪತ್ನಿ, ತಾಯಿ ಹಾಗೂ ಚಿಕ್ಕಮ್ಮನೊಂದಿಗೆ ಬೀರೂರಿಗೆ ಸಂಬಂಧಿಕರ ಮದುವೆಗೆ ಹೋಗಿದ್ದರು.
ಮದುವೆ ಮುಗಿಸಿ ಹೊಸದುರ್ಗ ಮಾರ್ಗವಾಗಿ ಹೊಳಲ್ಕೆರೆ ತಾಲ್ಲೂಕಿನ ಶಿವಗಂಗಾ ಗ್ರಾಮಕ್ಕೆ ಬರುತ್ತಿದ್ದರು. ಬೊಮ್ಮನಕಟ್ಟೆ ಗೇಟ್‌ನಲ್ಲಿರುವ ಕೆರೆ ಏರಿಯ ಮೇಲೆ ನಾಯಿಯೊಂದು ಅಡ್ಡ ಬಂದಿದ್ದು, ಅದನ್ನು ತಪ್ಪಿಸಲು ಹೋಗಿ ಕಾರು ಕೆರೆಗೆ ಬಿದ್ದಿದೆ. ಮಂಜುನಾಥ್ ಅವರು ಕಾರಿನ ಕಿಟಕಿ ಒಡೆದು ಈಜಿ ದಡ ಸೇರಿದ್ದಾರೆ. ಕಿಟಕಿ ಪಕ್ಕದಲ್ಲೇ ಇದ್ದ ಚಿಕ್ಕಮ್ಮ ಮಂಜುಳಾ ಅವರನ್ನೂ ಹೊರಕ್ಕೆ ಎಳೆದು ಬದುಕಿಸಿದ್ದಾರೆ.
ಆದರೆ, ಮಂಜುನಾಥ್ ಅವರ ಪತ್ನಿ ಹಾಗೂ ತಾಯಿ ಇಬ್ಬರೂ ನೀರು ಕುಡಿದು ಮೃತಪಟ್ಟಿದ್ದಾರೆ. ಮಂಜುನಾಥ್ ಮತ್ತು ಅನಿತಾ ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಅನಿತಾ ಕೆಂಗುಂಟೆ ಗ್ರಾಮದವರಾಗಿದ್ದು, ಮೂವರು ಸಹೋದರಿಯರು ಇದ್ದಿದ್ದು, ಪಟ್ಟಣದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದು ರಾಷ್ಟ್ರೀಯ ಹೆದ್ದಾರಿಯಾಗಿದ್ದು, ಒಂದು ಕಡೆ ರಸ್ತೆ ಬದಿಯಲ್ಲಿಯೇ ಕೆರೆ ಇದೆ ಮತ್ತೊಂದು ಕಡೆ ಕಡೆ ಆಳವಾದ ತಗ್ಗು ಇದೆ ಈ ಭಾಗದಲ್ಲಿ ದಿನ ನಿತ್ಯ ಸಾವಿರಾರು ವಾಹನಗಳು ಸಂಚರಿಸುತ್ತಿದ್ದು ಅನೇಕ ಸಲ ಈ ಸ್ಥಳದಲ್ಲಿ ಅಪಘಾತ ಸಂಭವಿಸಿವೆ.
ರಸ್ತೆ ಅಕ್ಕ ಪಕ್ಕ ಬಾರಿ ಜಂಗಲ್ ಬೆಳಿದಿದ್ದು ಜಂಗಲ್ ತೆಗೆದು ಈ ಸ್ಥಳದ ರಸ್ತೆ ಬದಿಯಲ್ಲಿ ತಡೆ ಗೋಡೆ ನಿರ್ಮಿಸಬೇಕೆಂದು ಬೊಮ್ಮನಕಟ್ಟೆ ಗ್ರಾಮಸ್ಥರಾದ ಮೂರ್ತಣ್ಣ ಆಗ್ರಹಿಸಿದ್ದಾರೆ.