Press ID & Credential Portal
Apply / Verify  ➔
LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Press & Media Credential Portal
1. Apply for Press ID Card
Register official reporter application with Email OTP.
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
State News

ಆತ್ರೇಯ ಆಯುರ್ವೇದ ಕಾಲೇಜಿನ ವಿದ್ಯಾರ್ಥಿಗಳಿಗೆ ಅತಂತ್ರ ಸ್ಥಿತಿ

ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ತಾಲೂಕಿನ ಕೊಡಿಗೆಹಳ್ಳಿಯ ಆತ್ರೇಯ ಆರ್ಯುವೇದ ಕಾಲೇಜಿಗೆ ಬ್ಯಾಂಕಿನಿಂದ ಸಾಲ ಪಡೆದು ಮರು ಪಾವತಿಸದೇ ಇದ್ದ ಕಾರಣ  ಕಾಲೇಜಿಗೆ ಬೀಗ ಹಾಕಲಾಗಿದ್ದು, ವಿದ್ಯಾರ್ಥಿಗಳ ಸ್ಥಿತಿ ಅತಂತ್ರ  ಪರಿಸ್ಥಿತಿ ನಿರ್ಮಾಣವಾಗಿದೆ. 

ನಗರದ ಹೊರವಲಯದ ಕೊಡಿಗೇಹಳ್ಳಿ ಹತ್ತಿರ ವಿರುವ ಆತ್ರೇಯ ಆರ್ಯುವೇದ ಮಹಾ-
ವಿದ್ಯಾಲಯ ಸುಮಾರು ಒಂದುವರೆ ತಿಂಗಳಿಂದ ಕಾಲೇಜು ವಿದ್ಯಾರ್ಥಿಗಳಿಗೆ ಯಾವುದೇ ರೀತಿಯಾದ ವ್ಯಾಸಂಗ ಹಾಗೂ ಪರೀಕ್ಷೆಗಳನ್ನು ನೀಡುವಲ್ಲಿ ವಿಫಲವಾಗಿದೆ ಎಂದು ಕನ್ನಡಿಗರ ಕರ್ನಾಟಕ ರಕ್ಷಣಾ ವೇದಿಕೆ ಸಂಸ್ಥಾಪಕ ಅಧ್ಯಕ್ಷ ಬಿ.ಎಸ್‌. ಚಂದ್ರಶೇಖ‌ರ್ ಎಂದು ದೂರಿದ್ದಾರೆ.

ಕಾಲೇಜು ಬಳಿ ಮಂಗಳವಾರ ನಡೆದ ಸಭೆಯಲ್ಲಿ ಮಾತನಾಡಿದ ‌ ‌ ಅವರು, 'ಸರ್ಕಾರ ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಕಾಳಜಿವಹಿಸಿ ಕಾಲೇಜಿನ ‌ ‌ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಹಾಗೂ ಪರೀಕ್ಷೆ ‌ ಬರೆಯಲು ಪರ್ಯಾಯ ವ್ಯವಸ್ಥೆ ಕಲ್ಪಿಸಿಕೊಡಬೇಕು.

ಆತ್ರೇಯ ಆಯುರ್ವೇದ ಮಹಾವಿದ್ಯಾಲಯದಲ್ಲಿ 400 ವಿದ್ಯಾರ್ಥಿಗಳಿದ್ದು, ರಾಜ್ಯ ಹಾಗೂ ದೇಶದ ವಿವಿಧೆಡೆಗಳಿಂದ ದಾಖಲಾತಿ ಪಡೆದಿದ್ದಾರೆ. ಕಾಲೇಜು ಬ್ಯಾಂಕಿನಿಂದ ಸಾಲ ಪಡೆದಿದ್ದು, ಮರುಪಾವತಿ ಮಾಡದ ಕಾರಣ ಬ್ಯಾಂಕ್‌ನವರು ಬೀಗ ಹಾಕಿದ್ದಾರೆ. ಒಂದು ತಿಂಗಳಿಂದ ಕಾಲೇಜಿನಲ್ಲಿ ಯಾವುದೇ ತರಗತಿ ಹಾಗೂ ಪರೀಕ್ಷೆ ನಡೆದಿಲ್ಲ. 

ಈಗ ಪ್ರವೇಶ ಪಡೆದಿರುವ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಾಗದೆ ಅತಂತ್ರವಾಗಿದ್ದಾರೆ. ಈ ವಿದ್ಯಾರ್ಥಿಗಳಿಗೆ ಆಯಾ ಊರಿನ ಸಮೀಪದ ಕಾಲೇಜುಗಳಲ್ಲಿ ಪ್ರವೇಶ ನೀಡಿ, ಪರೀಕ್ಷೆ ಬರೆಯಲು ಅನುವು ಮಾಡಿಕೊಡಬೇಕು. ಕಾಲೇಜು ಕುರಿತು ಸಮಗ್ರ ತನಿಖೆ ನಡೆಸಬೇಕು' ಎಂದು ಒತ್ತಾಯಿಸಿದರು. ಲಕ್ಷಾಂತರ ರೂಪಾಯಿ ಹಣ ಕಟ್ಟಿದ್ದರೂ, ‌ ವಿದ್ಯಾರ್ಥಿಗಳ ಪಾಲಿಗೆ ಈಗ ಕಾಲೇಜು ಮುಚ್ಚಿದೆ. 

ಇಷ್ಟಾದರೂ ವಿದ್ಯಾರ್ಥಿಗಳಿಗೆ ಸೆಪ್ಟೆಂಬರ್‌ನಲ್ಲಿ ಕಾಲೇಜು ಶುಲ್ಕ ಕಟ್ಟುವಂತೆ ಮೆಸೇಜ್ ಮಾಡಿದ್ದರು. ವಿದ್ಯಾರ್ಥಿಗಳಿಗೆ ದಿಕ್ಕೇ ತೋಚದಂತಾಗಿದೆ. ಕಾಲೇಜಿನ ಸಿಬ್ಬಂದಿಗೆ ಸಮಯಕ್ಕೆ ಸರಿಯಾಗಿ ಸಂಬಳ ನೀಡುತ್ತಿರಲಿಲ್ಲ. ಪಿ.ಎಫ್ ಸಹ ಕಟ್ಟಿಲ್ಲ. ಸಿಬ್ಬಂದಿ ಸಹ ಕಾಲೇಜಿನ ಆಡಳಿತ ಮಂಡಲಿ ಮೇಲೆ ತೀವ್ರ ಆಕ್ರೋಶಗೊಂಡಿದ್ದರು' ಎಂದು ಇಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಸಿಬ್ಬಂದಿ ಪ್ರದೀಪ್ ಕುಮಾರ್ ದೂರಿದ್ದಾರೆ. 

ಈ ಸಂದರ್ಭದಲ್ಲಿ ರಾಜ್ಯ ಪ್ರಧಾನ ಕಾರ್ಯದರ್ಶಿ ಆರ್ ರಮೇಶ್, ರಾಜ್ಯ ಮುಖಂಡ ಈ ವಾಸು,ಜಿಲ್ಲಾ ಪ್ರಧಾನ ಕಾರ್ಯದರ್ಶಿ ತಾಯೇಗೌಡ, ಜಿಲ್ಲಾ  ಕಾರ್ಯಧ್ಯಕ್ಷಪ್ರದೀಪ್ ಕುಮಾರ್ ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

 

 

Author
ಸಿ.ಹೆಂಜಾರಪ್ಪ
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಆತ್ರೇಯ ಆಯುರ್ವೇದ ಕಾಲೇಜಿನ ವಿದ್ಯಾರ್ಥಿಗಳಿಗೆ ಅತಂತ್ರ ಸ್ಥಿತಿಸಹಬಾಳ್ವೆ ಮತ್ತು ಸಾಮಾಜಿಕ ಸಾಮರಸ್ಯವೇ ನಮ್ಮ ನಾಡಿನ ಶಕ್ತಿ: ಟಿ.ರಘುಮೂರ್ತಿಅದ್ಧೂರಿಯಾಗಿ ನಡೆದ ಈದ್‌ಮಿಲಾದ್ ಮೆರವಣಿಗೆ  ಹೋರಾಟಗಾರ ಎನ್.ಎಸ್.ಹರ್ಡೆಕರ್‌ರವರಲ್ಲಿ ಶಿಸ್ತು, ದೇಶಭಕ್ತಿ ಎದ್ದು ಕಾಣುತ್ತಿತ್ತು‘ರಸ್ತೆ ರಾಜ’ನ ಕ್ಷೇತ್ರದಲ್ಲಿ ಗುಂಡಿಗಳದ್ದೇ ಸಾಮ್ರಾಜ್ಯ: ಅನುದಾನದ ಹೊಳೆಯಿದ್ದರೂ ತಪ್ಪದ ಯಮಯಾತನೆ!ಕನ್ನಡ ಸಾಹಿತ್ಯ ಪರಿಷತ್ತು ಕಬ್ಜ ಆಗಲು ಬಿಡುವುದಿಲ್ಲ: ಪ್ರೊ.ಎಸ್.ಜಿ ಸಿದ್ದರಾಮಯ್ಯಚಿಕ್ಕಂದವಾಡಿ ಗ್ರಾಮದ ರೇವಜ್ಜರ ಓಂಕಾರಪ್ಪ ಇನ್ನಿಲ್ಲಧರ್ಮಪುರ ಭಾಗದಲ್ಲಿ ಕೌಂಟ್ ಇಲ್ಲದ ಬಾಲಕೃಷ್ಣ: ಮಾಜಿ ಜಿಪಂ ಉಪಾಧ್ಯಕ್ಷ ದ್ಯಾಮೇಗೌಡ ವಾಗ್ದಾಳಿಅದ್ದೂರಿ ಚಾಲನೆ ಪಡೆದ ಯಶ್ ಅಭಿನಯದ 'ಟಾಕ್ಸಿಕ್': ಬಾಕ್ಸ್ ಆಫೀಸ್‌ನಲ್ಲಿ 100 ಕೋಟಿಯತ್ತ ಭರ್ಜರಿ ಮುನ್ನೋಟ!ಮೈಸೂರು ದಸರಾ: ಗಜಪಯಣಕ್ಕೆ ಚಾಲನೆ, ‘ಕೂಂಬಿಂಗ್ ಕಿಂಗ್’ ಅಭಿಮನ್ಯುವಿಗೆ ಭಾವಪೂರ್ಣ ಬೀಳ್ಕೊಡುಗೆ