Press ID & Credential Portal
Apply / Verify  ➔
LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Press & Media Credential Portal
1. Apply for Press ID Card
Register official reporter application with Email OTP.
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
State News

ಮೈಸೂರು ದಸರಾ: ಗಜಪಯಣಕ್ಕೆ ಚಾಲನೆ, ‘ಕೂಂಬಿಂಗ್ ಕಿಂಗ್’ ಅಭಿಮನ್ಯುವಿಗೆ ಭಾವಪೂರ್ಣ ಬೀಳ್ಕೊಡುಗೆ

ಚಂದ್ರವಳ್ಳಿ ನ್ಯೂಸ್, ಮೈಸೂರು: 
ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದ ಅಂಗವಾಗಿ ವೀರನಹೊಸಹಳ್ಳಿಯಲ್ಲಿ ಬುಧವಾರ ಗಜಪಯಣಕ್ಕೆ ಅಧಿಕೃತ ಚಾಲನೆ ನೀಡಲಾಯಿತು. ಈ ಬಾರಿಯ ದಸರಾದಲ್ಲಿ ಪ್ರಮುಖ ಆಕರ್ಷಣೆಯಾಗಿ
'ಕಂಬಳ' ಕ್ರೀಡೆಯನ್ನೂ ಆಯೋಜಿಸಲಾಗುವುದು ಎಂದು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಡಾ. ಯತೀಂದ್ರ ಸಿದ್ದರಾಮಯ್ಯ ತಿಳಿಸಿದ್ದಾರೆ.

ಶುಭ ತುಲಾ ಲಗ್ನದಲ್ಲಿ ಗಜಪೂಜೆ-
ಕಳೆದ
29 ವರ್ಷಗಳಿಂದ ಸಾಂಪ್ರದಾಯಿಕ ಪೂಜೆ ಸಲ್ಲಿಸುತ್ತಿರುವ ಅರ್ಚಕ ಪ್ರಹ್ಲಾದ್ ರಾವ್ ಅವರ ನೇತೃತ್ವದಲ್ಲಿ, ತುಲಾ ಲಗ್ನದಲ್ಲಿ ಗಜಪಡೆಗೆ ವಿಶೇಷ ಪೂಜೆ ನೆರವೇರಿಸಲಾಯಿತು. ಗಜರಾಜರ ಪಾದ ತೊಳೆದು, ಅರಿಶಿನ-ಕುಂಕುಮ, ಗಂಧ ಹಚ್ಚಿ, ನೈವೇದ್ಯ ಹಾಗೂ ಹೂವಿನ ಅರ್ಚನೆ ಮಾಡಲಾಯಿತು. ನಂತರ ಕಬ್ಬು-ಬೆಲ್ಲ ನೀಡಿ, ದಸರಾ ಮಹೋತ್ಸವವು ಯಾವುದೇ ವಿಘ್ನವಿಲ್ಲದೆ ನೆರವೇರಲಿ ಎಂದು ಪ್ರಾರ್ಥಿಸಲಾಯಿತು.

ಅಭಿಮನ್ಯು ಆನೆಗೆ ಗೌರವದ ನಿವೃತ್ತಿ-
ಕಳೆದ
25 ವರ್ಷಗಳಿಂದ ದಸರಾ ಮೆರವಣಿಗೆಯಲ್ಲಿ ಭಾಗವಹಿಸಿ, 6 ಬಾರಿ ಯಶಸ್ವಿಯಾಗಿ ಚಿನ್ನದ ಅಂಬಾರಿ ಹೊತ್ತು 'ಕೂಂಬಿಂಗ್ ಕಿಂಗ್' ಎಂದೇ ಹೆಸರುವಾಸಿಯಾಗಿದ್ದ ಅಭಿಮನ್ಯು ಆನೆಗೆ (60 ವರ್ಷ) ಗಜಪಯಣದ ಸಂದರ್ಭದಲ್ಲೇ ಹೃದಯಸ್ಪರ್ಶಿ ಬೀಳ್ಕೊಡುಗೆ ನೀಡಲಾಯಿತು. ಗಜಪಡೆಯ ಮಧ್ಯೆ ಅಭಿಮನ್ಯು ಸಾಗುವಾಗ ಹೂಮಳೆ ಸುರಿಸಲಾಯಿತು. ಅಭಿಮನ್ಯು ಸೊಂಡಿಲೆತ್ತಿ ವಂದಿಸಿದರೆ, ಮಾವುತ ವಸಂತ ಸೆಲ್ಯೂಟ್ ಹೊಡೆದು ಕೃತಜ್ಞತೆ ಸಲ್ಲಿಸಿದರು.

ಕಂಬಳ ಆಯೋಜನೆ: ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಸೂಚನೆಯಂತೆ, ಈ ಮುಂಚೆ ಗುರುತಿಸಲಾದ ಜಾಗದಲ್ಲೇ ಈ ಬಾರಿ ದಸರಾ ಕಂಬಳ ನಡೆಯಲಿದೆ.

ಅಂಬಾರಿ ಆನೆ ಇನ್ನೂ ತೀರ್ಮಾನವಾಗಿಲ್ಲ: 60 ವರ್ಷ ಪೂರೈಸಿದ ಆನೆಗಳನ್ನು ಬಳಸದಂತೆ ನ್ಯಾಯಾಲಯದ ನಿರ್ದೇಶನವಿರುವುದರಿಂದ, ಅಭಿಮನ್ಯುವನ್ನು ಮೈಸೂರಿಗೆ ಕರೆತರುವ ಬಗ್ಗೆ ಹಾಗೂ ಅಂಬಾರಿ ಹೊರಲಿರುವ ಆನೆಯ ಆಯ್ಕೆಯ ಕುರಿತು ಗಜಪಡೆಯ ತಾಲೀಮಿನ ನಂತರ ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು. 

ಮೊದಲ ತಂಡದ ಗಜಪಡೆ: ಮೊದಲ ಹಂತದಲ್ಲಿ 9 ಆನೆಗಳು ಮೈಸೂರಿಗೆ ಆಗಮಿಸುತ್ತಿವೆ. ಸುಗ್ರೀವ ಆನೆಯ ಬದಲಿಗೆ ಶ್ರೀಕಂಠಆನೆ ಮೊದಲ ತಂಡ ಸೇರಿಕೊಂಡಿದ್ದು, ಸುಗ್ರೀವ 2ನೇ ತಂಡದಲ್ಲಿ ಆಗಮಿಸಲಿದ್ದಾನೆ.

ಆಗಸ್ಟ್ 28ರಂದು ಬೆಳಿಗ್ಗೆ 8:45ಕ್ಕೆ ಮೈಸೂರಿನ ಅರಣ್ಯ ಭವನದಲ್ಲಿ ಗಜಪಡೆಗೆ ಸಾಂಪ್ರದಾಯಿಕ ಪೂಜೆ ಸಲ್ಲಿಸಿ, ಬಳಿಕ ಅರಮನೆ ಆವರಣಕ್ಕೆ ಬರಮಾಡಿಕೊಳ್ಳಲಾಗುವುದು ಎಂದು ಡಿಸಿಎಫ್ ಪ್ರಭುಗೌಡ ಮಾಹಿತಿ ನೀಡಿದ್ದಾರೆ.

Author
ಸಿ.ಹೆಂಜಾರಪ್ಪ
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಆತ್ರೇಯ ಆಯುರ್ವೇದ ಕಾಲೇಜಿನ ವಿದ್ಯಾರ್ಥಿಗಳಿಗೆ ಅತಂತ್ರ ಸ್ಥಿತಿಸಹಬಾಳ್ವೆ ಮತ್ತು ಸಾಮಾಜಿಕ ಸಾಮರಸ್ಯವೇ ನಮ್ಮ ನಾಡಿನ ಶಕ್ತಿ: ಟಿ.ರಘುಮೂರ್ತಿಅದ್ಧೂರಿಯಾಗಿ ನಡೆದ ಈದ್‌ಮಿಲಾದ್ ಮೆರವಣಿಗೆ  ಹೋರಾಟಗಾರ ಎನ್.ಎಸ್.ಹರ್ಡೆಕರ್‌ರವರಲ್ಲಿ ಶಿಸ್ತು, ದೇಶಭಕ್ತಿ ಎದ್ದು ಕಾಣುತ್ತಿತ್ತು‘ರಸ್ತೆ ರಾಜ’ನ ಕ್ಷೇತ್ರದಲ್ಲಿ ಗುಂಡಿಗಳದ್ದೇ ಸಾಮ್ರಾಜ್ಯ: ಅನುದಾನದ ಹೊಳೆಯಿದ್ದರೂ ತಪ್ಪದ ಯಮಯಾತನೆ!ಕನ್ನಡ ಸಾಹಿತ್ಯ ಪರಿಷತ್ತು ಕಬ್ಜ ಆಗಲು ಬಿಡುವುದಿಲ್ಲ: ಪ್ರೊ.ಎಸ್.ಜಿ ಸಿದ್ದರಾಮಯ್ಯಚಿಕ್ಕಂದವಾಡಿ ಗ್ರಾಮದ ರೇವಜ್ಜರ ಓಂಕಾರಪ್ಪ ಇನ್ನಿಲ್ಲಧರ್ಮಪುರ ಭಾಗದಲ್ಲಿ ಕೌಂಟ್ ಇಲ್ಲದ ಬಾಲಕೃಷ್ಣ: ಮಾಜಿ ಜಿಪಂ ಉಪಾಧ್ಯಕ್ಷ ದ್ಯಾಮೇಗೌಡ ವಾಗ್ದಾಳಿಅದ್ದೂರಿ ಚಾಲನೆ ಪಡೆದ ಯಶ್ ಅಭಿನಯದ 'ಟಾಕ್ಸಿಕ್': ಬಾಕ್ಸ್ ಆಫೀಸ್‌ನಲ್ಲಿ 100 ಕೋಟಿಯತ್ತ ಭರ್ಜರಿ ಮುನ್ನೋಟ!ಮೈಸೂರು ದಸರಾ: ಗಜಪಯಣಕ್ಕೆ ಚಾಲನೆ, ‘ಕೂಂಬಿಂಗ್ ಕಿಂಗ್’ ಅಭಿಮನ್ಯುವಿಗೆ ಭಾವಪೂರ್ಣ ಬೀಳ್ಕೊಡುಗೆ