Press ID & Credential Portal
Apply / Verify  ➔
LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
State News

ಕಾಂಗ್ರೆಸ್‌ನಲ್ಲಿ ಗುರು-ಶಿಷ್ಯರ ರಾಜಕೀಯ ಸಮರ: ಪ್ರದೀಪ್‌ಈಶ್ವರ್‌vs ಡಾ. ಸುಧಾಕರ್‌ಕದನ ತೀವ್ರ!

ಚಂದ್ರವಳ್ಳಿ ನ್ಯೂಸ್, ಚಿಕ್ಕಬಳ್ಳಾಪುರ:
ಚಿಕ್ಕಬಳ್ಳಾಪುರ ರಾಜಕೀಯ ವಲಯದಲ್ಲಿ ಎಂದೂ ಕಾಣದ ರೀತಿಯಲ್ಲಿ ಆಡಳಿತರೂಢ ಕಾಂಗ್ರೆಸ್‌ನ ಇಬ್ಬರು ಹಾಲಿ ಶಾಸಕರ ನಡುವಿನ ಮುಸುಕಿನ ಗುದ್ದಾಟ ಈಗ ಬೀದಿಗೆ ಬಂದಿದ್ದು, ನೇರ ಸಮರಕ್ಕೆ ತಿರುಗಿದೆ.

 ಒಂದು ಕಾಲದಲ್ಲಿ ತನ್ನ ರಾಜಕೀಯ ಗುರು ಎಂದು ಬಹಿರಂಗವಾಗಿ ಕೊಂಡಾಡುತ್ತಿದ್ದ ಶಾಸಕ ಪ್ರದೀಪ್‌ಈಶ್ವರ್‌ಹಾಗೂ ಮಾಜಿ ಸಚಿವ ಡಾ. ಎಂ.ಸಿ. ಸುಧಾಕರ್‌ನಡುವಿನ ಈ ತೀವ್ರ ಸಂಘರ್ಷವು ಜಿಲ್ಲಾ ಕಾಂಗ್ರೆಸ್‌ನಲ್ಲಿ ಭಾರೀ ಸಂಚಲನ ಸೃಷ್ಟಿಸಿದ್ದು, ರಾಜ್ಯ ಹೈಕಮಾಂಡ್‌‌ಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.

Advertisement

ಸಂಘರ್ಷಕ್ಕೆ ನಾಂದಿ ಹಾಡಿದ್ದೇನು?:
ಡಾ. ಎಂ.ಸಿ. ಸುಧಾಕರ್‌ಅವರು ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಕಾಲದಿಂದಲೂ ಇವರ ನಡುವೆ ಮುನಿಸು ಆರಂಭವಾಗಿತ್ತು.
ಡಾ. ಸುಧಾಕರ್‌ಅವರು ಅಧಿಕಾರದಿಂದ ನಿರ್ಗಮಿಸುತ್ತಿದ್ದಂತೆ ಹಲವು ನೇಮಕಾತಿಗಳಲ್ಲಿ ಬದಲಾವಣೆಗಳು ನಡೆಯಲಾರಂಭಿಸಿದವು.

ಪ್ರಮುಖವಾಗಿ 'ಚಿಮುಲ್‌' ನಾಮನಿರ್ದೇಶಕ ವಿಷಯದಲ್ಲಿ ಈ ಗುರು-ಶಿಷ್ಯರ ಸಮರ ಬಹಿರಂಗವಾಗಿ ಸ್ಫೋಟಗೊಂಡಿತು. ಶಾಸಕ ಪ್ರದೀಪ್‌ಈಶ್ವರ್‌ಅವರ ಶಿಫಾರಸಿನ ಮೇರೆಗೆ ನಡೆದಿದ್ದ ನೇಮಕಾತಿಯು ಕೆಲವೇ ಗಂಟೆಗಳಲ್ಲಿ ಬದಲಾವಣೆಗೊಂಡಿದ್ದು ವಿವಾದಕ್ಕೆ ಕಾರಣವಾಯಿತು.

ಹೈಕಮಾಂಡ್‌ಮೆಟ್ಟಿಲೇರಿದ ಭಿನ್ನಮತ: ಕ್ಷೇತ್ರದಲ್ಲಿ ಪ್ರದೀಪ್‌ಈಶ್ವರ್‌ಅವರ ಏಕಪಕ್ಷೀಯ ನಿರ್ಧಾರಗಳು, ಸ್ಥಳೀಯ ಮುಖಂಡರನ್ನು ಕಡೆಗಣಿಸುತ್ತಿರುವ ಧೋರಣೆ ಹಾಗೂ ಪಕ್ಷ ವಿರೋಧಿ ನಡವಳಿಕೆಗಳನ್ನು ವಿರೋಧಿಸಿ ಚಿಕ್ಕಬಳ್ಳಾಪುರದ ಅತೃಪ್ತ ಮುಖಂಡರ ದಂಡನ್ನು ಕಟ್ಟಿಕೊಂಡು ಮಾಜಿ ಸಚಿವ ಡಾ. ಎಂ.ಸಿ. ಸುಧಾಕರ್‌ಇತ್ತೀಚೆಗೆ ಬೆಂಗಳೂರಿನ ಕೆಪಿಸಿಸಿ ಕಚೇರಿಗೆ ತೆರಳಿ ಹೈಕಮಾಂಡ್‌ಗೆ ದೂರು ಸಲ್ಲಿಸಿದ್ದರು. ತನ್ನದೇ ಕ್ಷೇತ್ರದ ಮುಖಂಡರನ್ನು ಒಗ್ಗೂಡಿಸಿ ದೂರು ನೀಡುವುದರ ಮೂಲಕ ತನಗೆ ರಾಜಕೀಯವಾಗಿ ಇಕ್ಕಟ್ಟು ತಂದ ಗುರುವಿನ ಈ ನಡೆಯು ಶಾಸಕ ಪ್ರದೀಪ್‌ಈಶ್ವರ್ ಅವರನ್ನು ತೀವ್ರವಾಗಿ ಕೆರಳಿಸಿತು.

ಚಿಂತಾಮಣಿಯನ್ನೇ ಟಾರ್ಗೆಟ್ ಮಾಡಿದ ಪ್ರದೀಪ್‌ಈಶ್ವರ್‌!:
ಗುರುವಿನ ಈ ನಡೆಗೆ ತಿರುಗೇಟು ನೀಡಲು ಪ್ರದೀಪ್‌ಈಶ್ವರ್‌ಅವರು ನೇರವಾಗಿ ಡಾ. ಸುಧಾಕರ್‌ ಅವರ ತವರು ಕ್ಷೇತ್ರವಾದ ಚಿಂತಾಮಣಿಯನ್ನೇ ಗುರಿಯಾಗಿಸಿಕೊಂಡರು. ಚಿಂತಾಮಣಿ ತಾಲೂಕಿನ ಊಲವಾಡಿ ಗ್ರಾಮದಲ್ಲಿರುವ ವೇಣುಗೋಪಾಲಸ್ವಾಮಿ ದೇಗುಲಕ್ಕೆ ದಲಿತರಿಗೆ ಪ್ರವೇಶ ನಿರಾಕರಿಸಲಾಗಿದೆ ಎಂದು ಆರೋಪಿಸಿ ಅವರು ಜಿಲ್ಲಾಡಳಿತಕ್ಕೆ ಪತ್ರ ಬರೆದು ಶಾಕ್‌ನೀಡಿದ್ದರು.

ಆದರೆ, ತಾಲೂಕು ಆಡಳಿತ ಹಾಗೂ ಪೊಲೀಸ್‌ಇಲಾಖೆಯ ಹಿರಿಯ ಅಧಿಕಾರಿಗಳು ತಕ್ಷಣವೇ ಊಲವಾಡಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದಾಗ, ಗ್ರಾಮದಲ್ಲಿ ಯಾವುದೇ ರೀತಿಯ ಅಸ್ಪೃಶ್ಯತೆ ಅಥವಾ ದೇವಸ್ಥಾನ ಪ್ರವೇಶಕ್ಕೆ ನಿರ್ಬಂಧವಿಲ್ಲದಿರುವುದು ಹಾಗೂ ಎಲ್ಲಾ ಸಮುದಾಯಗಳು ಸೌಹಾರ್ದತೆಯಿಂದ ಇರುವುದು ಸ್ಪಷ್ಟವಾಯಿತು. ಇದು ಪ್ರದೀಪ್‌ಈಶ್ವರ್‌ಅವರ ಆರೋಪದ ಬಲವನ್ನು ತಗ್ಗಿಸಿತು.

ಮುಖ್ಯಮಂತ್ರಿಯವರ ಮಧ್ಯಪ್ರವೇಶ ಮತ್ತು ಸುದ್ದಿಗೋಷ್ಠಿ ರದ್ದು: ಅಧಿಕಾರಿಗಳ ಈ ಸ್ಪಷ್ಟನೆಯಿಂದ ಮತ್ತಷ್ಟು ಆಕ್ರೋಶಗೊಂಡ ಪ್ರದೀಪ್‌ಈಶ್ವರ್‌, ಅಕ್ಟೋಬರ್ 1ರಂದು ಚಿಂತಾಮಣಿಯಲ್ಲೇ ಬೃಹತ್‌ಸುದ್ದಿಗೋಷ್ಠಿ ನಡೆಸಿ ಸತ್ಯ ಹೊರಹಾಕುವುದಾಗಿ ಘೋಷಿಸಿದ್ದರು.
ಆದರೆ, ಇಬ್ಬರು ಪ್ರಮುಖ ನಾಯಕರ ಈ ಬಹಿರಂಗ ಜಗಳದಿಂದ ಸರ್ಕಾರಕ್ಕೆ ಮುಜುಗರವಾಗಲಿದೆ ಎಂಬುದನ್ನು ಮನಗಂಡ ಮುಖ್ಯಮಂತ್ರಿಯವರು ಕೊನೆ ಕ್ಷಣದಲ್ಲಿ ಮಧ್ಯಪ್ರವೇಶಿಸಿ, ಪತ್ರಿಕಾಗೋಷ್ಠಿಯನ್ನು ರದ್ದುಪಡಿಸುವಂತೆ ಕಟ್ಟುನಿಟ್ಟಿನ ಸೂಚನೆ ನೀಡಿದರು ಎನ್ನಲಾಗಿದೆ.

ಸಾಮಾಜಿಕ ಜಾಲತಾಣದಲ್ಲಿ ಮುಂದುವರಿದ ಕಿಡಿ: "Let's fight" ಸವಾಲು! ಮುಖ್ಯಮಂತ್ರಿಯವರ ಸೂಚನೆಯಂತೆ ಪತ್ರಿಕಾಗೋಷ್ಠಿ ರದ್ದಾಗುತ್ತಿದ್ದಂತೆ, ಪ್ರದೀಪ್‌ಈಶ್ವರ್‌ತಮ್ಮ ಸಾಮಾಜಿಕ ಜಾಲತಾಣದ ಮೂಲಕ ಮತ್ತೊಮ್ಮೆ ಎದುರಾಳಿಗಳ ವಿರುದ್ಧ ವಾಗ್ದಾಳಿ ನಡೆಸಿದರು. ‘‘ನನ್ನ ಬಗ್ಗೆ ಮಾತಾಡೋದು ಸುಲಭ, ನನ್ನ ಸ್ಥಾನಕ್ಕೆ ಬರೋದು ಕಷ್ಟ’’ ಎಂಬ ಶೀರ್ಷಿಕೆಯಡಿ ಮಾಜಿ ಸಚಿವ ಡಾ. ಎಂ.ಸಿ. ಸುಧಾಕರ್‌ವಿರುದ್ಧ ತೀವ್ರ ಆಕ್ರೋಶ ಹೊರಹಾಕಿದರು.

ತಮ್ಮ ಪೋಸ್ಟ್‌ನಲ್ಲಿ ಚಿಂತಾಮಣಿಯ ದಲಿತ ಬಾಂಧವರನ್ನು ಉದ್ದೇಶಿಸಿ ಮಾತನಾಡಿರುವ ಅವರು, ಮುಖ್ಯಮಂತ್ರಿಯವರ ನಿರ್ದೇಶನದ ಮೇರೆಗೆ ಮಾತ್ರ ಅ.1ರಂದು ನಡೆಯಬೇಕಿದ್ದ ಸುದ್ದಿಗೋಷ್ಠಿಯನ್ನು ರದ್ದು ಮಾಡಿದ್ದೇನೆಯೇ ಹೊರತು, ಚಿಂತಾಮಣಿಯ ಯಾವನೇ ಪ್ರಭಾವಿ ರಾಜಕಾರಣಿಯ ಹೆದರಿಕೆಯಿಂದಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಕಂಬಾಲಹಳ್ಳಿಯಲ್ಲಿ 7 ಮಂದಿ ದಲಿತರನ್ನು ಸಜೀವ ದಹನ ಮಾಡಲು ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಕಾರಣವಾಗಿದ್ದ ಕುಟುಂಬದ ಕುಡಿಯ ಹೆದರಿಕೆಗೆ ತಾನು ಜಗ್ಗುವ ವ್ಯಕ್ತಿಯಲ್ಲ ಎಂದು ಸಚಿವರ ಕುಟುಂಬದ ಹಿನ್ನೆಲೆಯನ್ನು ನೇರವಾಗಿ ಕೆದಕಿದ್ದಾರೆ. ಆ ಪ್ರಭಾವಿ ರಾಜಕಾರಣಿಗೆ ಬಹಿರಂಗವಾಗಿ ಸವಾಲು ಹಾಕಿ, "ನಾನೊಬ್ಬ ಸೆಲ್ಫ್ ಮೇಡ್ ಮ್ಯಾನ್, ನಿಮ್ಮ ವಿಕೃತ ಮನಸ್ಸಿನ ರಾಜಕಾರಣಕ್ಕೆ ಹೆದರುವ ವ್ಯಕ್ತಿ ನಾನಲ್ಲ. ನಿಮ್ಮೊಂದಿಗೆ ಹೇಗೆ ಫೈಟ್‌ಮಾಡಬೇಕೆಂದು ನನಗೆ ಸ್ಪಷ್ಟವಾಗಿ ಅರ್ಥವಾಗಿದೆ. Let's fight" ಎಂದು ಗುಡುಗುವ ಮೂಲಕ ಸಂಘರ್ಷವನ್ನು ಮತ್ತಷ್ಟು ಹೈ ವೋಲ್ಟೇಜ್‌ಗೆ ಕೊಂಡೊಯ್ದಿದ್ದಾರೆ.

ಹೈಕಮಾಂಡ್‌ಗೆ ಪೀಕಲಾಟ ಹಾಗೂ ಕಾರ್ಯಕರ್ತರಲ್ಲಿ ಆತಂಕ: ಜಿಲ್ಲೆಯ ಇಬ್ಬರು ಹಾಲಿ ಶಾಸಕರ ನಡುವಿನ ಈ ಬಹಿರಂಗ ಕಾದಾಟವು ಕೆಪಿಸಿಸಿ ಅಧ್ಯಕ್ಷರು ಹಾಗೂ ರಾಜ್ಯ ಹೈಕಮಾಂಡ್‌ಗೆ ತಲೆನೋವಾಗಿ ಪರಿಣಮಿಸಿದೆ. ಲೋಕಸಭೆ ಹಾಗೂ ಇತರೆ ರಾಜಕೀಯ ಸವಾಲುಗಳ ನಡುವೆ ಯಾರ ಪರ ನಿಲ್ಲಬೇಕು, ಯಾರನ್ನು ನಿಯಂತ್ರಿಸಬೇಕು ಎಂಬುದು ಪಕ್ಷದ ಹಿರಿಯ ನಾಯಕರಿಗೆ ದೊಡ್ಡ ಕಗ್ಗಂಟಾಗಿದೆ. ಮತ್ತೊಂದೆಡೆ, ವರ್ಷಗಳ ಕಾಲ ಪಕ್ಷಕ್ಕಾಗಿ ಬೆವರು ಹರಿಸಿ ಸಂಘಟನೆ ಮಾಡಿದ್ದ ಮೂಲ ಕಾಂಗ್ರೆಸ್‌ಕಾರ್ಯಕರ್ತರಲ್ಲಿ ಈ ಬೆಳವಣಿಗೆಯು ತೀವ್ರ ಆತಂಕ ಹಾಗೂ ಬೇಸರ ಮೂಡಿಸಿದೆ.

 

Author
ಸಿ.ಹೆಂಜಾರಪ್ಪ
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ರಾಜ್ಯ ಮಟ್ಟಕ್ಕೆ ಆಯ್ಕೆಯಾದ ವಿದ್ಯಾರ್ಥಿನಿ ಬಿಂದುರಾಜ್ಯ ವಕೀಲರ ಪರಿಷತ್ತಿನ ಅಧ್ಯಕ್ಷರಾಗಿ ಆಯ್ಕೆಯಾದ ನ್ಯಾಯವಾದಿ ಆರ್.ರಾಜಣ್ಣಜೆಡಿಎಸ್ ಕಚೇರಿಯಲ್ಲಿ ರಾಷ್ಟ್ರಪಿತ ಮಹಾತ್ಮಗಾಂಧಿ ಜಯಂತಿ ಭೀಮಸಮುದ್ರದ ಜಿ.ಎಸ್.ಮಂಜುನಾಥ್ ಮಾತನಾಡಿದರುಎನ್.ಎಸ್.ಶಂಕರ್ ಸೇರಿ ಅಗಲಿದ ಪತ್ರಕರ್ತರಿಗೆ ಕೆಯುಡಬ್ಲೂಜೆಯಲ್ಲಿ ಇಂದು ನುಡಿ ನಮನಕಾಂಗ್ರೆಸ್‌ನಲ್ಲಿ ಗುರು-ಶಿಷ್ಯರ ರಾಜಕೀಯ ಸಮರ: ಪ್ರದೀಪ್‌ಈಶ್ವರ್‌vs ಡಾ. ಸುಧಾಕರ್‌ಕದನ ತೀವ್ರ!ವಿಮಾನ ದುರಂತ ತಪ್ಪಿಸಿದ ಕ್ಯಾಪ್ಟನ್ ಸ್ಮಿತ್ ಮಚ್ಚಾರ್: ಪ್ರಧಾನಿ ಮೋದಿ ಜೊತೆ ಭಾವನಾತ್ಮಕ ಮಾತು!ಮುಖ್ಯಮಂತ್ರಿ ಹಾಗೂ ಸಚಿವರ ಪ್ರತಿಭಟನೆ: ಹೈಕೋರ್ಟ್ ಆದೇಶ ಉಲ್ಲಂಘನೆ ಆರೋಪಿಸಿ ಪೊಲೀಸ್ ಆಯುಕ್ತರಿಗೆ ಬಿಜೆಪಿ ದೂರುಚುನಾವಣಾ ಆಯೋಗದ ವಿರುದ್ಧ ಮುಂಬೈ ಹಾಗೂ ದೆಹಲಿಯಲ್ಲಿ ಬೃಹತ್ ಪ್ರತಿಭಟನೆ: ಸಿಇಸಿ ಜ್ಞಾನೇಶ್ ಕುಮಾರ್ ರಾಜೀನಾಮೆಗೆ ಆಗ್ರಹಬಿಎನ್‌ಎಸ್‌ಎಸ್ ಸೆಕ್ಷನ್ 163 ಜಾರಿ: ಮುಖ್ಯ ಚುನಾವಣಾ ಆಯುಕ್ತರ ವಿರುದ್ಧದ ಪ್ರತಿಭಟನೆಗೆ ಅನುಮತಿ ನಿರಾಕರಣೆ