Web Stories
Chandravalli News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಮುಖ್ಯಮಂತ್ರಿಗಳ ಜೊತೆಗೆ 14 ಶಾಸಕರು ಸಚಿವರಾಗಿ ಪ್ರಮಾಣ ವಚನ ಸ್ವೀಕಾರ

Advertisement
Advertisement

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಜೂನ್ 3 ರಂದು ನೂತನ ಮುಖ್ಯಮಂತ್ರಿಯಾಗಿ ಡಿ.ಕೆ. ಶಿವಕುಮಾರ್ ಅವರು ಪದಗ್ರಹಣ ಮಾಡುವುದು ಬಹುತೇಕ ಖಚಿತವಾಗಿದ್ದು, ಅವರ ಜೊತೆಗೇ ಸಚಿವ ಸಂಪುಟ ಸೇರಲಿರುವ ಸಂಭಾವ್ಯ ನಾಯಕರ ಮೊದಲ ಪಟ್ಟಿ ಈಗ ಮುನ್ನೆಲೆಗೆ ಬಂದಿದೆ. ಮುಖ್ಯಮಂತ್ರಿಗಳ ಜೊತೆಗೆ ಮೊದಲ ಹಂತದಲ್ಲಿ ಒಟ್ಟು 14 ಶಾಸಕರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸುವ ಸಾಧ್ಯತೆ ಇದೆ ಎಂದು ಆಪ್ತ ಮೂಲಗಳು ತಿಳಿಸಿವೆ.

ಹಿರಿಯ ಅನುಭವಿ ನಾಯಕರಿಗೆ ಮಣೆ ಹಾಕುವ ಜೊತೆಗೆ ಹೊಸ ಮುಖಗಳಿಗೂ ಮಂತ್ರಿಮಂಡಲದಲ್ಲಿ ಆದ್ಯತೆ ನೀಡಲಾಗುತ್ತಿದ್ದು, ಹೈಕಮಾಂಡ್ ವಲಯದಲ್ಲಿ ತೀವ್ರ ಚರ್ಚೆಯಾಗುತ್ತಿರುವ ಸಂಭಾವ್ಯ ಸಚಿವರ ಪಟ್ಟಿ 'ಟಿವಿ೯' ವಾಹಿನಿಗೆ ಲಭ್ಯವಾಗಿದೆ.

ಸಚಿವ ಸಂಪುಟದ ಸಂಭಾವ್ಯರ ಪಟ್ಟಿ:
ಕಾಂಗ್ರೆಸ್ ಪಾಳಯದಲ್ಲಿ ತೀವ್ರ ಕುತೂಹಲ ಮೂಡಿಸಿರುವ ಸಂಭಾವ್ಯ ಸಚಿವರ ಹೆಸರುಗಳು ಹೀಗಿವೆ.

ಹಿರಿಯ ಹಾಗೂ ಅನುಭವಿ ನಾಯಕರು: ಡಾ. ಜಿ. ಪರಮೇಶ್ವರ, ಕೆ.ಜೆ. ಜಾರ್ಜ್, ಎಂ.ಬಿ. ಪಾಟೀಲ್, ಸತೀಶ್ ಜಾರಕಿಹೋಳಿ, ಕೃಷ್ಣ ಬೈರೇಗೌಡ, ದಿನೇಶ್ ಗುಂಡು ರಾವ್.

ಯುವ ಹಾಗೂ ಪ್ರಮುಖ ಮುಖಗಳು: ಪ್ರಿಯಾಂಕ್ ಖರ್ಗೆ, ಲಕ್ಷ್ಮಿ ಹೆಬ್ಬಾಳ್ಕರ್, ಯತೀಂದ್ರ ಸಿದ್ದರಾಮಯ್ಯ, ರೂಪಾ ಶಶಿಧರ್.

ರಾಜಧಾನಿ ಹಾಗೂ ಇತರ ಪ್ರಭಾವಿ ನಾಯಕರು: ಜಮೀರ್ ಅಹಮದ್ ಖಾನ್, ಆರ್. ಚಲುವರಾಯಸ್ವಾಮಿ, ಬೈರತಿ ಸುರೇಶ್, ಯು.ಟಿ. ಖಾದರ್, ಎನ್.ಎ. ಹ್ಯಾರಿಸ್.

ಸ್ಪೀಕರ್ ಹುದ್ದೆಗೂ ತೀವ್ರ ಪೈಪೋಟಿ:
ಮತ್ತೊಂದೆಡೆ ನೂತನ ಸರ್ಕಾರ ರಚನೆಯಾಗುತ್ತಿದ್ದಂತೆಯೇ ವಿಧಾನಸಭೆಯ ಸಭಾಧ್ಯಕ್ಷರ (ಸ್ಪೀಕರ್) ಆಯ್ಕೆಗೂ ತೆರೆಮರೆಯ ಕಸರತ್ತು ಚುರುಕಾಗಿದೆ. ಸದ್ಯ ಈ ರೇಸ್‌ನಲ್ಲಿ ಇಬ್ಬರು ಹಿರಿಯ ಮುತ್ಸದ್ದಿಗಳ ಹೆಸರುಗಳು ಮುಂಚೂಣಿಯಲ್ಲಿವೆ.

ಎಚ್.ಕೆ. ಪಾಟೀಲ್, ಡಾ. ಎಚ್.ಸಿ. ಮಹದೇವಪ್ಪ. ಸುದೀರ್ಘ ರಾಜಕೀಯ ಅನುಭವ ಹಾಗೂ ಸದನದ ನಿಯಮಾವಳಿಗಳ ಮೇಲಿರುವ ಪಕ್ವತೆಯ ಆಧಾರದ ಮೇಲೆ ಸದ್ಯಕ್ಕೆ ಡಾ. ಎಚ್.ಸಿ. ಮಹದೇವಪ್ಪ ಅವರ ಹೆಸರು ಸ್ಪೀಕರ್ ಸ್ಥಾನಕ್ಕೆ ಅತ್ಯಂತ ಪ್ರಬಲವಾಗಿ ಕೇಳಿಬರುತ್ತಿದೆ.

ಮುಂದಿನ ಹೆಜ್ಜೆ: ಸದ್ಯಕ್ಕೆ ಈ ಸಂಭಾವ್ಯ ಪಟ್ಟಿ ಸಿದ್ಧವಾಗಿದ್ದರೂ, ಸಾಮಾಜಿಕ ಹಾಗೂ ಪ್ರಾದೇಶಿಕ ಸಮತೋಲನವನ್ನು ಕಾಯ್ದುಕೊಳ್ಳುವ ನಿಟ್ಟಿನಲ್ಲಿ ದೆಹಲಿ ಮಟ್ಟದಲ್ಲಿ ಅಂತಿಮ ಸುತ್ತಿನ ಸಮಾಲೋಚನೆ ನಡೆಯುತ್ತಿದೆ. ಹೈಕಮಾಂಡ್‌ನಿಂದ ಅಧಿಕೃತ ಮುದ್ರೆ ಬಿದ್ದ ತಕ್ಷಣವೇ ಸಚಿವರ ಅಂತಿಮ ಪಟ್ಟಿ ಪ್ರಕಟವಾಗಲಿದೆ.

 

 

 

Advertisement
Advertisement

Author
Chandravalli News
Regional Kannada Daily is a leading news paper in (Karnataka state). Which is having large number of circulation in the districts of Chitradurga, Davanagere, Bellary, Vijayanagara, Shimoga, Chikmagalur, Tumkur, Bangalore, Simultaneously published in rural districts of Bangalore
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಮುನಿಯಪ್ಪನವರ ಅನುಭವಕ್ಕೆ ತಕ್ಕಂತೆ ಉಪಮುಖ್ಯಮಂತ್ರಿಯನ್ನಾಗಿ ನೇಮಿಸಲು ಬ್ಲಾಕ್ ಕಾಂಗ್ರೆಸ್ ಆಗ್ರಹಸೂಪರ್ಡೆಂಟ್ ಆಗಿ ಸೇವೆ ಸಲ್ಲಿಸಿ ನಿವೃತ್ತರಾಧ ನಂದಕುಮಾರ್ರವರಿಗೆ ಅಭಿನಂದನಾ ಸಮಾರಂಭರಾಜಕೀಯ ಮುತ್ಸದ್ದಿ ಮುನಿಯಪ್ಪ ಅವರಿಗೆ ಉಪ ಮುಖ್ಯಮಂತ್ರಿ ಸ್ಥಾನ ನೀಡಲು ಮಾದಾರ ಮಹಾಸಭಾ ಒತ್ತಾಯಸ್ಥಳೀಯ ಸ್ವಾಭಿಮಾನವಾ? ಅಥವಾ ಚುನಾವಣಾ ಕಾಲದ ದ್ವಂದ್ವ ರಾಜಕೀಯವಾ?ಹಿರಿಯೂರು ಜೆಡಿಎಸ್ ಭದ್ರ ಕೋಟೆಗೆ ಒಳ ಒಪ್ಪಂದದ ಗೆದ್ದಲು ಹಿಡಿದಿದೆಯೇ? ಕಾರ್ಯಕರ್ತರ ಕಣ್ಣೀರಿನ ಪ್ರಶ್ನೆ?ಜೂನ್ 3 ರಂದು ನೂತನ ಸಿಎಂ ಆಗಿ ಡಿ.ಕೆ. ಶಿವಕುಮಾರ್ ಪ್ರಮಾಣವಚನ ಸ್ವೀಕಾರಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕನಾಗಿ ಡಿ.ಕೆ. ಶಿವಕುಮಾರ್ ಆಯ್ಕೆ; ಜೂನ್ 3ಕ್ಕೆ ಸಿಎಂ ಆಗಿ ಪ್ರಮಾಣವಚನರಾಜಭವನಕ್ಕೆ ಡಿ.ಕೆ.ಶಿ ಭೇಟಿ: ಸರ್ಕಾರ ರಚನೆಗೆ ಹಕ್ಕು ಮಂಡನೆ; ಜೂನ್ 3ಕ್ಕೆ ಪ್ರಮಾಣವಚನಕ್ಕೆ ಸಿದ್ಧತೆ!ಖಾಸಗಿ ಶಾಲೆಯ ಸಭಾಂಗಣದಲ್ಲಿ ಭೀಕರ ಅಗ್ನಿ ಅವಘಡ; ಸಮಯಪ್ರಜ್ಞೆಯಿಂದ ತಪ್ಪಿದ ದೊಡ್ಡ ದುರಂತ!ಸಿಎಲ್‌ಪಿ ಸಭೆಗೂ ಮುನ್ನ ರಾಜ್ಯಪಾಲರನ್ನು ಭೇಟಿಯಾದ ಡಿ.ಕೆ. ಶಿವಕುಮಾರ್: