E-PAPER
22 Nov 2026, 06:08:54 PM|
Gold₹12413/gGold24K ₹12,413/g - 22K ₹11,369/gTap for full details
Press ID & Credential Portal
Apply / Verify  ➔
Advertisement
LIVE TV LocalCrimeNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
State News

ಶಿಕ್ಷಕರೆಂಬ ಶೈಕ್ಷಣಿಕ ಬಂಧು

ಚಂದ್ರವಳ್ಳಿ ನ್ಯೂಸ್, ​ಬೆಂಗಳೂರು:
ಶಿಕ್ಷಕರೆಂಬ ಶೈಕ್ಷಣಿಕ ಬಂಧು

ಬಂಧುಗಳೇ ಮಾನವನ ಜೀವನದಲ್ಲಿ ತಾಯಿಯ ನಂತರ ಅತ್ಯಂತ ಗೌರವದ ಸ್ಥಾನವನ್ನು ಹೊಂದಿರುವವರು ಎಂದರೆ ಅದು ಶಿಕ್ಷಕರು. ತಾಯಿ ಮಗುವಿಗೆ ಜನ್ಮ ನೀಡಿದರೆ, ಶಿಕ್ಷಕರು ಆ ಮಗುವಿನ ವ್ಯಕ್ತಿತ್ವಕ್ಕೆ ವಿಕಸನಕ್ಕೆ ಜ್ಞಾನ, ಸಂಸ್ಕಾರ, ಶಿಸ್ತು ಮತ್ತು ಮೌಲ್ಯಗಳ ಮೂಲಕ ಹೊಸ ರೂಪವನ್ನು ನೀಡುತ್ತಾರೆ. ಶಿಕ್ಷಣವೆಂಬುದು ಕೇವಲ ಅಕ್ಷರ ಜ್ಞಾನವನ್ನು ಕಲಿಸುವುದು ಮಾತ್ರವಲ್ಲ  ಮನುಷ್ಯನ ಆಲೋಚನೆ, ನಡವಳಿಕೆ, ಜೀವನದ ದೃಷ್ಟಿಕೋನ ಮತ್ತು ಸಾಮಾಜಿಕ ಜವಾಬ್ದಾರಿಯನ್ನು ರೂಪಿಸುವ ಮಹತ್ತರ ಕಾರ್ಯವಾಗಿದೆ. ಈ ಮಹತ್ತರ ಕಾರ್ಯವನ್ನು ನಿಸ್ವಾರ್ಥವಾಗಿ ನಿರ್ವಹಿಸುವ ಶಿಕ್ಷಕರು ನಿಜಕ್ಕೂ ಸಮಾಜದ ಶೈಕ್ಷಣಿಕ ಬಂಧುಗಳಾಗಿದ್ದಾರೆ.

ಶಿಕ್ಷಕ ಎಂದರೆ ಕೇವಲ ಪಠ್ಯಪುಸ್ತಕದಲ್ಲಿರುವ ಪಾಠಗಳನ್ನು ಬೋಧಿಸುವ ವ್ಯಕ್ತಿಯಲ್ಲ. ವಿದ್ಯಾರ್ಥಿಗಳಲ್ಲಿರುವ ಸುಪ್ತ ಪ್ರತಿಭೆಯನ್ನು ಗುರುತಿಸಿ ಅದಕ್ಕೆ ಸೂಕ್ತವಾದ ಪ್ರೋತ್ಸಾಹ ನೀಡಿ ಅವರಲ್ಲಿನ ಆತ್ಮವಿಶ್ವಾಸವನ್ನು ಹೆಚ್ಚಿಸುವ ಮಾರ್ಗದರ್ಶಕರಾಗಿದ್ದಾರೆ. ಕತ್ತಲೆಯಲ್ಲಿರುವವರಿಗೆ ಬೆಳಕಿನ ದಾರಿ ತೋರಿಸುವ ದೀಪದಂತೆ ಶಿಕ್ಷಕರು ವಿದ್ಯಾರ್ಥಿಗಳ ಭವಿಷ್ಯವನ್ನು ಬೆಳಗಿಸುತ್ತಾರೆ. ಒಬ್ಬ ಉತ್ತಮ ಶಿಕ್ಷಕ ವಿದ್ಯಾರ್ಥಿಗೆ ಏನು ಕಲಿಯಬೇಕು ಎಂಬುದನ್ನು ಮಾತ್ರ ತಿಳಿಸುವುದಿಲ್ಲ ಏಕೆ ಕಲಿಯಬೇಕು ಮತ್ತು ಕಲಿತ ಜ್ಞಾನವನ್ನು ಜೀವನದಲ್ಲಿ ಹೇಗೆ ಬಳಸಿಕೊಳ್ಳಬೇಕು ಎಂಬುದನ್ನೂ ತಿಳಿಸುತ್ತಾರೆ. ಪ್ರಶ್ನಿಸುವ ಮನೋಭಾವ, ವೈಜ್ಞಾನಿಕ ಚಿಂತನೆ, ಸೃಜನಶೀಲತೆ ಮತ್ತು ಸಮಸ್ಯೆಗಳನ್ನು ಎದುರಿಸುವ ಸಾಮರ್ಥ್ಯವನ್ನು ಬೆಳೆಸುತ್ತಾರೆ.

ಶಿಕ್ಷಕ ಮತ್ತು ವಿದ್ಯಾರ್ಥಿಗಳ ನಡುವಿನ ಸಂಬಂಧವು ಕೇವಲ ತರಗತಿ ಕೋಣೆಗೆ ಸೀಮಿತವಾಗಿರುವುದಿಲ್ಲ. ಅದು ಪ್ರೀತಿ, ವಿಶ್ವಾಸ, ಗೌರವ ಮತ್ತು ಆತ್ಮೀಯತೆಯ ಮೇಲೆ ನಿರ್ಮಾಣವಾಗಿರುವ ಪವಿತ್ರ ಸಂಬಂಧವಾಗಿದೆ. ವಿದ್ಯಾರ್ಥಿಯ ಸಾಮರ್ಥ್ಯ, ಆಸಕ್ತಿ, ಕುಟುಂಬದ ಪರಿಸ್ಥಿತಿ ಹಾಗೂ ಮಾನಸಿಕ ಸ್ಥಿತಿಯನ್ನು ಅರ್ಥಮಾಡಿಕೊಂಡು ಅವರಿಗೆ ಸೂಕ್ತ ಮಾರ್ಗದರ್ಶನ ನೀಡುವುದು ಶಿಕ್ಷಕರ ಜವಾಬ್ದಾರಿಯಾಗಿದೆ.

ಕೆಲವೊಮ್ಮೆ ವಿದ್ಯಾರ್ಥಿಗಳು ಜೀವನದಲ್ಲಿ ಸೋಲು, ನಿರಾಶೆ ಮತ್ತು ಗೊಂದಲಗಳನ್ನು ಎದುರಿಸುತ್ತಾರೆ. ಅಂತಹ ಸಂದರ್ಭದಲ್ಲಿ ಶಿಕ್ಷಕರ ಪ್ರೋತ್ಸಾಹದ ಮಾತುಗಳು ಅವರಲ್ಲಿ ಹೊಸ ಭರವಸೆಯನ್ನು ಮೂಡಿಸುತ್ತವೆ. ಶಿಕ್ಷಕರು ನೀಡುವ ಒಂದು ಸಣ್ಣ ಸಲಹೆ ವಿದ್ಯಾರ್ಥಿಯ ಜೀವನದ ದಿಕ್ಕನ್ನೇ ಬದಲಾಯಿಸಬಹುದು. ಆದ್ದರಿಂದ ಶಿಕ್ಷಕರು ವಿದ್ಯಾರ್ಥಿಗಳ ಪಾಲಿಗೆ ಕೇವಲ ಪಾಠ ಹೇಳುವವರಲ್ಲ ಬದುಕಿನ ದಾರಿಯನ್ನು ತೋರಿಸುವ ಶೈಕ್ಷಣಿಕ ಬಂಧುಗಳಾಗಿದ್ದಾರೆ.

ಶಿಕ್ಷಣದ ನಿಜವಾದ ಉದ್ದೇಶ ಉತ್ತಮ ಅಂಕಗಳನ್ನು ಗಳಿಸುವುದಷ್ಟೇ ಅಲ್ಲ ಉತ್ತಮ ವ್ಯಕ್ತಿತ್ವವನ್ನು ರೂಪಿಸುವುದಾಗಿದೆ. ಪ್ರಾಮಾಣಿಕತೆ, ಶಿಸ್ತು, ಸಮಯಪ್ರಜ್ಞೆ, ಪರಸ್ಪರ ಗೌರವ, ಸಹನೆ, ಸೇವಾ ಮನೋಭಾವ ಮತ್ತು ದೇಶಪ್ರೇಮದಂತಹ ಮೌಲ್ಯಗಳನ್ನು ವಿದ್ಯಾರ್ಥಿಗಳಲ್ಲಿ ಬೆಳೆಸುವಲ್ಲಿ ಶಿಕ್ಷಕರ ಪಾತ್ರ ಮಹತ್ವದ್ದಾಗಿದೆ. ಶಾಲೆಯು ವಿದ್ಯಾರ್ಥಿಗಳ ಜ್ಞಾನವಿಕಾಸದ ಕೇಂದ್ರವಾಗಿದ್ದರೆ, ಶಿಕ್ಷಕರು ಅವರ ವ್ಯಕ್ತಿತ್ವ ವಿಕಾಸದ ಶಿಲ್ಪಿಗಳಾಗಿದ್ದಾರೆ. ವಿದ್ಯಾರ್ಥಿಗಳು ತಮ್ಮ ಶಿಕ್ಷಕರ ನಡೆ-ನುಡಿ, ಜೀವನಶೈಲಿ ಮತ್ತು ಕಾರ್ಯನಿಷ್ಠೆಯಿಂದ ಅನೇಕ ವಿಷಯಗಳನ್ನು ಕಲಿಯುತ್ತಾರೆ. ಹೀಗಾಗಿ ಶಿಕ್ಷಕರು ತಮ್ಮ ಮಾತು ಮತ್ತು ಕೃತಿಗಳಲ್ಲಿ ಆದರ್ಶಪ್ರಾಯರಾಗಿರುತ್ತಾರೆ.

ಒಂದು ಉತ್ತಮ ಸಮಾಜ ನಿರ್ಮಾಣವಾಗಬೇಕಾದರೆ ಉತ್ತಮ ನಾಗರಿಕರು ರೂಪುಗೊಳ್ಳಬೇಕು ಉತ್ತಮ ನಾಗರಿಕರನ್ನು ರೂಪಿಸುವ ಕಾರ್ಯದಲ್ಲಿ ಶಿಕ್ಷಕರ ಪಾತ್ರ ಅತ್ಯಂತ ಪ್ರಮುಖವಾಗಿದೆ. ವೈದ್ಯರು, ಇಂಜಿನಿಯರ್‌ಗಳು, ವಿಜ್ಞಾನಿಗಳು, ಅಧಿಕಾರಿಗಳು, ನ್ಯಾಯಾಧೀಶರು, ರಾಜಕಾರಣಿಗಳು ಮತ್ತು ವಿವಿಧ ಕ್ಷೇತ್ರಗಳ ಸಾಧಕರ ಹಿಂದೆ ಶಿಕ್ಷಕರ ಮಾರ್ಗದರ್ಶನ ಹಾಗೂ ಪರಿಶ್ರಮ ಅಡಗಿರುತ್ತದೆ.

ಸಮಾಜದಲ್ಲಿನ ಅಜ್ಞಾನ, ಮೂಢನಂಬಿಕೆ, ಅಸಮಾನತೆ ಮತ್ತು ಅನ್ಯಾಯಗಳನ್ನು ನಿವಾರಿಸಲು ಶಿಕ್ಷಣ ಪ್ರಮುಖ ಸಾಧನವಾಗಿದೆ. ಶಿಕ್ಷಣದ ಮೂಲಕ ಸಮಾನತೆ, ಸಹೋದರತ್ವ, ಮಾನವೀಯತೆ ಮತ್ತು ಸಾಮಾಜಿಕ ನ್ಯಾಯದ ಮೌಲ್ಯಗಳನ್ನು ಬೆಳೆಸುವ ಜವಾಬ್ದಾರಿ ಶಿಕ್ಷಕರ ಮೇಲಿದೆ.

ಗ್ರಾಮೀಣ ಪ್ರದೇಶಗಳಲ್ಲಿ ಶಿಕ್ಷಕರ ಪಾತ್ರ ಇನ್ನಷ್ಟು ಮಹತ್ವದ್ದಾಗಿದೆ. ಗ್ರಾಮೀಣ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಒದಗಿಸುವುದು, ಹೆಣ್ಣುಮಕ್ಕಳ ಶಿಕ್ಷಣಕ್ಕೆ ಪ್ರೋತ್ಸಾಹ ನೀಡುವುದು, ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಮತ್ತೆ ಶಿಕ್ಷಣದ ಮುಖ್ಯವಾಹಿನಿಗೆ ತರುವುದು, ಪೋಷಕರಲ್ಲಿ ಶಿಕ್ಷಣದ ಅರಿವು ಮೂಡಿಸುವುದು, ಮೂಲಸೌಕರ್ಯಗಳ ಕೊರತೆ, ಶಿಕ್ಷಕರ ಹುದ್ದೆಗಳ ಖಾಲಿತನ, ಕಲಿಕಾ ಸಾಮಗ್ರಿಗಳ ಅಭಾವ ಮತ್ತು ಡಿಜಿಟಲ್ ಸೌಲಭ್ಯಗಳ ಕೊರತೆ ಹೀಗೆ ಹಲವು ಸಮಸ್ಯೆಗಳು ಕಂಡುಬರುತ್ತದೆ ಇಂತಹ ಪರಿಸ್ಥಿತಿಗಳಲ್ಲಿಯೂ ಶಿಕ್ಷಕರು ತಮ್ಮ ಕರ್ತವ್ಯವನ್ನು ನಿಷ್ಠೆಯಿಂದ ನಿರ್ವಹಿಸುತ್ತಿದ್ದಾರೆ.

ಇಂದಿನ ಜಗತ್ತು ತಂತ್ರಜ್ಞಾನ ಮತ್ತು ಡಿಜಿಟಲ್ ಕ್ರಾಂತಿಯ ವೇಗದಲ್ಲಿ ಮುನ್ನಡೆಯುತ್ತಿದೆ ಸ್ಮಾರ್ಟ್‌ಫೋನ್, ಇಂಟರ್ನೆಟ್, ಕೃತಕ ಬುದ್ಧಿಮತ್ತೆ, ಡಿಜಿಟಲ್ ತರಗತಿಗಳು ಮತ್ತು ಆನ್‌ಲೈನ್ ಶಿಕ್ಷಣವು ಕಲಿಕೆಯ ವಿಧಾನಗಳಲ್ಲಿ ಮಹತ್ತರ ಬದಲಾವಣೆ ತಂದಿವೆ. ವಿದ್ಯಾರ್ಥಿಗಳಿಗೆ ಇಂದು ಮಾಹಿತಿ ಪಡೆಯಲು ಅನೇಕ ಅವಕಾಶಗಳಿವೆ ಆದರೆ ಮಾಹಿತಿಯನ್ನು ಸರಿಯಾಗಿ ಅರ್ಥಮಾಡಿಕೊಳ್ಳುವುದು, ಸತ್ಯಾಸತ್ಯತೆಯನ್ನು ಪರಿಶೀಲಿಸುವುದು ಮತ್ತು ಜ್ಞಾನವನ್ನು ಸದುಪಯೋಗಪಡಿಸಿಕೊಳ್ಳುವುದು ಹೇಗೆ ಎಂಬುದನ್ನು ಕಲಿಸುವ ಜವಾಬ್ದಾರಿ ಶಿಕ್ಷಕರ ಮೇಲಿದೆ. ತಂತ್ರಜ್ಞಾನವು ಶಿಕ್ಷಕರಿಗೆ ಪರ್ಯಾಯವಲ್ಲ ಬದಲಾಗಿ ಬೋಧನೆಯನ್ನು ಪರಿಣಾಮಕಾರಿಯಾಗಿಸುವ ಸಹಾಯಕ ಸಾಧನವಾಗಿದೆ. ತಂತ್ರಜ್ಞಾನದ ಜೊತೆಗೆ ಮಾನವೀಯ ಸ್ಪರ್ಶ ನೈತಿಕ ಮೌಲ್ಯಗಳು ಮತ್ತು ವೈಯಕ್ತಿಕ ಮಾರ್ಗದರ್ಶನವನ್ನು ನೀಡುವಲ್ಲಿ ಶಿಕ್ಷಕರ ಪಾತ್ರ ಸದಾ ಅನನ್ಯವಾಗಿರುತ್ತದೆ.

ಭಾರತದ ಭವಿಷ್ಯವು ತರಗತಿ ಕೋಣೆಗಳಲ್ಲಿ ರೂಪುಗೊಳ್ಳುತ್ತಿದೆ. ಇಂದಿನ ವಿದ್ಯಾರ್ಥಿಗಳೇ ನಾಳಿನ ವಿಜ್ಞಾನಿಗಳು, ಉದ್ಯಮಿಗಳು, ಆಡಳಿತಗಾರರು, ಕೃಷಿಕರು, ಸೈನಿಕರು ಮತ್ತು ರಾಷ್ಟ್ರದ ಜವಾಬ್ದಾರಿಯುತ ನಾಗರಿಕರಾಗುತ್ತಾರೆ. ಅವರಲ್ಲಿ ಜ್ಞಾನ, ಕೌಶಲ್ಯ, ನಾಯಕತ್ವ, ಸಂವಿಧಾನಾತ್ಮಕ ಮೌಲ್ಯಗಳು ಮತ್ತು ರಾಷ್ಟ್ರದ ಬಗ್ಗೆ ಜವಾಬ್ದಾರಿಯನ್ನು ಬೆಳೆಸುವವರು ಶಿಕ್ಷಕರು. ಭಾರತವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿ ರೂಪಿಸುವ ಕನಸಿನಲ್ಲಿ ಶಿಕ್ಷಕರ ಕೊಡುಗೆ ಅತ್ಯಂತ ಮಹತ್ವದ್ದಾಗಿದೆ. ಗುಣಮಟ್ಟದ ಶಿಕ್ಷಣ, ಕೌಶಲ್ಯಾಧಾರಿತ ಕಲಿಕೆ, ಸಂಶೋಧನಾ ಮನೋಭಾವ ಮತ್ತು ನವೀನ ಆಲೋಚನೆಗಳನ್ನು ಬೆಳೆಸುವ ಮೂಲಕ ಶಿಕ್ಷಕರು ರಾಷ್ಟ್ರದ ಪ್ರಗತಿಗೆ ಭದ್ರ ಬುನಾದಿ ಹಾಕುತ್ತಾರೆ.

ಶಿಕ್ಷಕರ ಗೌರವವು ಕೇವಲ ಶಿಕ್ಷಕರ ದಿನಾಚರಣೆಯಂದು ಶುಭಾಶಯ ಸಲ್ಲಿಸುವುದಕ್ಕೆ ಸೀಮಿತವಾಗಬಾರದು. ಪ್ರತಿದಿನವೂ ಅವರ ಸೇವೆಯನ್ನು ಗುರುತಿಸುವ ಮನೋಭಾವ ಸಮಾಜದಲ್ಲಿ ಬೆಳೆಯಬೇಕು. ಪೋಷಕರು, ವಿದ್ಯಾರ್ಥಿಗಳು, ಶಿಕ್ಷಣ ಸಂಸ್ಥೆಗಳು ಮತ್ತು ಸರ್ಕಾರ ಶಿಕ್ಷಕರನ್ನು ಗೌರವದಿಂದ ಕಾಣಬೇಕು. ಶಿಕ್ಷಕರ ವೃತ್ತಿ ಒಂದು ಉದ್ಯೋಗ ಮಾತ್ರವಲ್ಲ ಅದು ಸಮಾಜದ ಭವಿಷ್ಯವನ್ನು ರೂಪಿಸುವ ಮಹತ್ತರ ಸೇವೆಯಾಗಿದೆ. ಶಿಕ್ಷಕರ ಪರಿಶ್ರಮದಿಂದ ಒಬ್ಬ ವಿದ್ಯಾರ್ಥಿ ಸಾಧಕನಾಗುತ್ತಾನೆ. ಆ ಸಾಧಕನ ಯಶಸ್ಸಿನ ಹಿಂದೆ ಶಿಕ್ಷಕರ ಪ್ರೋತ್ಸಾಹ, ಮಾರ್ಗದರ್ಶನ ಮತ್ತು ತ್ಯಾಗ ಅಡಗಿರುತ್ತದೆ.

ಶಿಕ್ಷಕರೆಂಬ ಶೈಕ್ಷಣಿಕ ಬಂಧುಗಳು ಸಮಾಜದ ನಿಜವಾದ ಆಸ್ತಿ ಅವರು ಜ್ಞಾನದ ಬೀಜ ಬಿತ್ತಿ, ಸಂಸ್ಕಾರದ ನೀರೆರೆದು, ಸಾಧನೆಯ ಫಲವನ್ನು ಸಮಾಜಕ್ಕೆ ನೀಡುವ ಮಹಾನ್ ವ್ಯಕ್ತಿಗಳು. ಅವರ ಸೇವೆಗೆ ಯಾವುದೇ ಪ್ರತಿಫಲವೂ ಸಂಪೂರ್ಣ ಸಮಾನವಾಗಲಾರದು. ಒಬ್ಬ ಶಿಕ್ಷಕ ರೂಪಿಸುವ ಒಬ್ಬ ವಿದ್ಯಾರ್ಥಿ ಮುಂದೊಂದು ದಿನ ಸಾವಿರಾರು ಜನರಿಗೆ ಮಾದರಿಯಾಗಬಹುದು. ಆದ್ದರಿಂದ ಶಿಕ್ಷಕರನ್ನು ಗೌರವಿಸುವುದು ಎಂದರೆ ಶಿಕ್ಷಣವನ್ನು ಗೌರವಿಸಿದಂತೆ ಶಿಕ್ಷಣವನ್ನು ಗೌರವಿಸುವುದು ಎಂದರೆ ರಾಷ್ಟ್ರದ ಭವಿಷ್ಯವನ್ನು ಗೌರವಿಸಿದಂತೆ. ಶಿಕ್ಷಕರ ನಿಸ್ವಾರ್ಥ ಸೇವೆ, ತ್ಯಾಗ, ಸಮರ್ಪಣೆ ಮತ್ತು ಮಾರ್ಗದರ್ಶನಕ್ಕೆ ಸದಾ ಗೌರವ ಸಲ್ಲಿಸೋಣ. ಶಿಕ್ಷಕರನ್ನು ಗೌರವಿಸುವ ಸಮಾಜವೇ ಜ್ಞಾನವಂತ, ಸಂಸ್ಕಾರವಂತ ಮತ್ತು ಪ್ರಗತಿಪರ ಸಮಾಜವಾಗಿ ಬೆಳೆಯಬಲ್ಲದು.
ಲೇಖನ: ಡಾ. ಎಂ. ವಸಂತ್ ಆಚಾರ್, ಅಧ್ಯಕ್ಷರು, ಭಾರತೀಯ ಜನತಾ ಪಾರ್ಟಿ, ಚಿತ್ರದುರ್ಗ ನಗರ ಯುವ ಮೋರ್ಚಾ.

Author
Chandravalli News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಜನರ ಸಮಸ್ಯೆ ಬಗೆಹರಿಸುವ ನಾಯಕತ್ವ ಅಗತ್ಯ-ಸಚಿವ ಚಲುವರಾಯಸ್ವಾಮಿಭದ್ರಾ ಜಲಾಶಯದಿಂದ ತಕ್ಷಣವೇ 2 ಟಿಎಂಸಿ ನೀರು ಬಿಡುಗಡೆಗೆ ಸಚಿವ ರಘುಮೂರ್ತಿ ಮನವಿಜನರ ಸಂಕಷ್ಟ ಆಲಿಸಿ, ಸೇವೆ ಸಲ್ಲಿಸುವುದೇ ನಿಜವಾದ ಪ್ರಜಾಸೇವೆ-ಡಿ.ಕೆ ಶಿವಕುಮಾರ್ತುರುವನಹಳ್ಳಿ ಗ್ರಾಮದ ರಸ್ತೆ ಡಾಂಬರಿಕರಣಕ್ಕೆ ಚಾಲನೆನ. 25 ರಂದು ತಾಲೂಕು ಕಚೇರಿ ಮುಂದೆ ಅನಿರ್ದಿಷ್ಟಾವದಿ ನಿರಶನನವೆಂಬರ್. 27 ರಂದು ವೀರಶೈವ ಲಿಂಗಾಯತ ಸಮುದಾಯದ ವತಿಯಿಂದ ಪ್ರತಿಭಟನೆರಾಯಚೂರಿನಲ್ಲಿ ಪತ್ರಕರ್ತರ 41ನೇ ರಾಜ್ಯಮಟ್ಟದ ಸಮ್ಮೇಳನ ಯಶಸ್ವಿಯಾಗಿ ನಡೆಸೋಣ: ಸಚಿವ ಡಾ. ಅಜಯ್ ಸಿಂಗ್ಕೆಯುಡಬ್ಲ್ಯೂಜೆ ವಾರ್ಷಿಕ ಪ್ರಶಸ್ತಿಗಳಿಗಾಗಿ ಅರ್ಜಿ ಆಹ್ವಾನಶಿಕ್ಷಕರೆಂಬ ಶೈಕ್ಷಣಿಕ ಬಂಧುಹಿರಿಯೂರಿನಲ್ಲಿ ಪ್ರಜಾಸೇವಾ ಅಭಿಯಾನದ ಇಲಾಖಾ ವಸ್ತುಪ್ರದರ್ಶನ ಮಳಿಗೆಗಳಿಗೆ ಡಿ.ಕೆ. ಶಿವಕುಮಾರ್ ಚಾಲನೆ