ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ನಗರದ ವಿವಾದಿತ ಕೆಮ್ಮಣ್ಣು ಗುಂಡಿ ಸ್ಮಶಾನ ರಸ್ತೆಯನ್ನು ಪ್ರಭಾವಿಯೊಬ್ಬರು ಅತಿಕ್ರಮಿಸಿ ನಿರ್ಮಿಸಿರುವ ಒತ್ತುವರಿದಾರರ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಕೆಮ್ಮಣ್ಣುಗುಂಡಿ ಸಾರ್ವಜನಿಕ ಸ್ಮಶಾನ ಹೋರಾಟ ಸಮಿತಿ ತಾಲೂಕು ಆಡಳಿತಕ್ಕೆ ನೀಡಿದ ದೂರಿನನ್ವಯ ವರ್ಷಗಳು ಕಳೆದರೂ ಸಂಬಂಧ ಪಟ್ಟ ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳದೆ ನಿರ್ಲಕ್ಷ್ಯ ವಹಿಸಿರುವುದನ್ನು ವಿರೋಧಿಸಿ ಹೋರಾಟ ಸಮಿತಿ ವತಿಯಿಂದ ನ. 25 ರಂದು ನಿರಶನವನ್ನು ನಡೆಸಲು ತೀರ್ಮಾನಿಸಿದೆ.
ನಗರದ ಕನಕ ಭವನದಲ್ಲಿ ಕೆಮ್ಮಣ್ಣುಗುಂಡಿ ಸಾರ್ವಜನಿಕ ಸ್ಮಶಾನ ಹೋರಾಟ ಸಮಿತಿಯಿಂದ ನಡೆದ ಸಭೆಯಲ್ಲಿ ಅನಿರ್ದಿಷ್ಟಾವದಿ ನಿರಶನದ ಬಗ್ಗೆ ನಿರ್ಧಾರ ಕೈಗೊಳ್ಳಲಾಯಿತು.
ಈ ಬಗ್ಗೆ ಹೋರಾಟ ಸಮಿತಿ ಮುಖಂಡರಾದ ಸಂಜೀವ್ ನಾಯಕ್, ಸು. ನರಸಿಂಹ ಮೂರ್ತಿ, ಡಿ. ಪಿ. ಆಂಜನೇಯ, ರವಿಕುಮಾರ್ ಮಾತನಾಡಿ ಕೆಲವು ವರ್ಷಗಳಿಂದ ಒತ್ತುವರಿ ಯಾಗಿರುವ ಸ್ಮಶಾನದ ದಾರಿಯನ್ನು ತೆರವು ಗೊಳಿಸುವಂತೆ ಕೋರಿ ತಾಲೂಕು ಆಡಳಿತ ಹಾಗೂ ಪೊಲೀಸ್ ಇಲಾಖೆಗೆ ದೂರು ನೀಡಿದ್ದು ಜೊತೆಗೆ ಪ್ರತಿಭಟನೆಗಳು ನಡೆದಿದ್ದು ಸ್ಥಳೀಯ ಆಡಳಿತ ಸ್ಮಶಾನ ಜಾಗದ ರಸ್ತೆ ಒತ್ತುವರಿದಾರರ ಕ್ರಮ ಕೈಗೊಳ್ಳದೆ ನಿರ್ಲಕ್ಷ್ಯ ವಹಿಸಿದೆ.
ಕಂದಾಯ ಇಲಾಖೆ ಅಧಿಕಾರಿಗಳು ಹೋರಾಟ ಸಮಿತಿ ನೀಡಿದ ದೂರಿನ ಅರ್ಜಿಗೆ ಯಾವುದೇ ಕಿಮ್ಮತ್ತು ನೀಡದೆ ದಿಕ್ಕು ತಪ್ಪಿಸುವ ಕೆಲಸ ಮಾಡಿದ್ದಾರೆ. ಈ ವಿಚಾರದಲ್ಲಿ ಅಧಿಕಾರಿಗಳು ಒತ್ತುವರಿ ದಾರರ ಜೊತೆ ಶಾಮಿಲಾಗಿರುವ ಅನುಮಾನವಿದೆ.
ಈಗಾಗಲೇ ಜಿಲ್ಲಾ ಉಸ್ತುವಾರಿ ಸಚಿವರು, ಜಿಲ್ಲಾಧಿಕಾರಿ, ಶಾಸಕರು ಸೇರಿದಂತೆ ಎಲ್ಲಾ ಪ್ರಮುಖರ ಗಮನಕ್ಕೆ ತಂದರೂ ಯಾವುದೇ ಪ್ರಯೋಜನ ವಾಗಿಲ್ಲ. ಇದನ್ನು ಖಂಡಿಸಿ ಜಿಲ್ಲಾ ಹಾಗೂ ತಾಲೂಕು ಆಡಳಿತದ ವಿರುದ್ಧ ನ. 25ರಂದು ಅನಿರ್ದಿಷ್ಟಾವದಿ ನಿರಶನವನ್ನು ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.
ಸಭೆಯಲ್ಲಿ ಹೋರಾಟ ಸಮಿತಿಯ ಮುಖಂಡರಾದ ಅರುಣ್ ಕುಮಾರ್, ನವೀನ್ ಕುಮಾರ್,ಮುದ್ದುಕೃಷ್ಣ, ಶ್ರೀನಿವಾಸ್, ಮಂಜುನಾಥ್, ಗಜೇಂದ್ರ, ರಮೇಶ್, ಸತೀಶ್, ಮುನಿರಾಜ್, ಮುತ್ತುರಾಜ್, ಪುಟ್ಟರಾಜು, ಆನಂದ್, ಸಿದ್ದರಾಜು, ರಾಜಣ್ಣ, ನಂಜುಂಡಿ, aಸೇರಿದಂತೆ ಹಲವು ಸಮುದಾಯದ ಮುಖಂಡರು ಭಾಗವಹಿಸಿದ್ದರು.




