Press ID & Credential Portal
Apply / Verify  ➔
LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Press & Media Credential Portal
1. Apply for Press ID Card
Register official reporter application with Email OTP.
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
State News

ಮಾಲ್‌ಗಳ ಡಿ.ಜಿ ಸೆಟ್‌ಗಳಿಗೆ ವಾರ್ಷಿಕ ಟ್ರೇಡ್‌ ಲೈಸೆನ್ಸ್‌ ಅಗತ್ಯವಿಲ್ಲ!-ಹೈಕೋರ್ಟ್

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
 ಶಾಪಿಂಗ್‌ಮಾಲ್‌ಗಳ ಮಾಲೀಕರು ಹೊಂದಿರುವ ಮತ್ತು ನಿರ್ವಹಿಸುತ್ತಿರುವ ಡೀಸೆಲ್‌ಜನರೇಟರ್‌ಸೆಟ್‌ಗಳಿಗೆ (ಡಿ.ಜಿ. ಸೆಟ್) ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಿಂದ ವಾರ್ಷಿಕ ಟ್ರೇಡ್‌ಲೈಸೆನ್ಸ್‌ಪಡೆಯುವ ಅಥವಾ ನವೀಕರಿಸುವ ಅಗತ್ಯವಿಲ್ಲ ಎಂದು ಕರ್ನಾಟಕ ಹೈಕೋರ್ಟ್ ಸ್ಪಷ್ಟಪಡಿಸಿದೆ.

ಏಕಸದಸ್ಯ ಪೀಠದ ಆದೇಶವನ್ನು ಎತ್ತಿಹಿಡಿಯಲು ನಿರಾಕರಿಸಿರುವ ನ್ಯಾಯಮೂರ್ತಿ ಅನು ಸಿವರಾಮನ್‌ಮತ್ತು ಟಿ.ಪಿ.ವಿವೇಕಾನಂದ ಅವರಿದ್ದ ವಿಭಾಗೀಯ ಪೀಠ ಈ ಮಹತ್ವದ ತೀರ್ಪು ನೀಡಿದೆ.

Advertisement

ಪ್ರಕರಣದ ಹಿನ್ನೆಲೆ: ಬೆಂಗಳೂರಿನ ದೇವಸಂದ್ರ ಕೈಗಾರಿಕಾ ಪ್ರದೇಶದಲ್ಲಿರುವ ಫೀನಿಕ್ಸ್‌ಮಾರ್ಕೆಟ್‌ಸಿಟಿ ಮಾಲ್‌ನಿರ್ವಹಿಸುತ್ತಿರುವ 'ಐಲ್ಯಾಂಡ್‌ ಸ್ಟಾರ್‌ಮಾಲ್‌ ಡೆವಲಪರ್ಸ್‌ ಪ್ರೈವೇಟ್ ಲಿಮಿಟೆಡ್' ಕಂಪನಿಯು ಡಿ.ಜಿ. ಸೆಟ್‌ಗಳ ಅಳವಡಿಕೆಗಾಗಿ ಬಿಬಿಎಂಪಿಗೆ ಭಾರೀ ಮೊತ್ತದ ಪರವಾನಗಿ ಶುಲ್ಕ ಹಾಗೂ ದಂಡವನ್ನು ಪಾವತಿಸುವಂತೆ ಬಂದ ನೋಟಿಸ್ ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಿತ್ತು.

ಈ ಹಿಂದೆ ಏಕಸದಸ್ಯ ಪೀಠವು ಬಿಬಿಎಂಪಿ ಕಾಯಿದೆಯಡಿ ಶುಲ್ಕ ವಿಧಿಸಬಹುದು ಎಂದು ಅರ್ಜಿ ವಜಾಗೊಳಿಸಿತ್ತು. ಇದನ್ನು ಪ್ರಶ್ನಿಸಿ ಕಂಪನಿಯು ವಿಭಾಗೀಯ ಪೀಠಕ್ಕೆ ಮೇಲ್ಮನವಿ ಸಲ್ಲಿಸಿತ್ತು.

ಹೈಕೋರ್ಟ್‌ನ ಪ್ರಮುಖ ವೀಕ್ಷಣೆಗಳು:
ಅನಗತ್ಯ ಶುಲ್ಕ ವಸೂಲಿ ಸಮರ್ಥನೀಯವಲ್ಲ: ಜನರೇಟರ್‌ಸೆಟ್‌ಗಳಿಗೆ ಅಗತ್ಯವಾದ ತಪಾಸಣೆ ಹಾಗೂ ಪ್ರಮಾಣೀಕರಣವನ್ನು
'ವಿದ್ಯುತ್‌ನಿರೀಕ್ಷಕರು' ಮತ್ತು 'ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ' ಮಾಡುತ್ತಿವೆ. ಬಿಬಿಎಂಪಿ ಯಾವುದೇ ತಾಂತ್ರಿಕ ಸೇವೆ ಒದಗಿಸದೆ ಕೇವಲ ಕಾಗದಪತ್ರದ ಕೆಲಸಕ್ಕೆ ವಾರ್ಷಿಕ ಭಾರಿ ನವೀಕರಣ ಶುಲ್ಕ ವಿಧಿಸುವುದು ಸಮರ್ಥನೀಯವಲ್ಲ.

ವ್ಯಾಪಾರದ ವ್ಯಾಖ್ಯಾನ: ಮಾಲ್‌ ಒಳಗೆ ಕಾರ್ಯನಿರ್ವಹಿಸುವ ಪ್ರತ್ಯೇಕ ಅಂಗಡಿಗಳು ಹಾಗೂ ವಾಣಿಜ್ಯ ಸಂಸ್ಥೆಗಳು ತಮ್ಮದೇ ಆದ ಟ್ರೇಡ್‌ ಲೈಸೆನ್ಸ್‌ ಕಡ್ಡಾಯವಾಗಿ ಪಡೆಯಬೇಕು. ಆದರೆ, ಮಾಲ್‌ ಮಾಲೀಕರು ಕಟ್ಟಡದ ಆಂತರಿಕ ಬಳಕೆಗಾಗಿ ಇರಿಸಿಕೊಂಡಿರುವ ಜನರೇಟರ್‌ಗೆ ಪ್ರತ್ಯೇಕ ಪರವಾನಗಿ ಬೇಕಿಲ್ಲ.

ಆಸ್ತಿ ತೆರಿಗೆ ಕಡ್ಡಾಯ: ಮಾಲ್‌, ವಾಣಿಜ್ಯ ಸಂಕೀರ್ಣ ಅಥವಾ ವ್ಯವಹಾರ ಸಂಸ್ಥೆಗಳ ಮಾಲೀಕರು ಬಿಬಿಎಂಪಿ ಕಾಯಿದೆಯ ನಿಯಮಗಳ ಪ್ರಕಾರ ಎಂದಿನಂತೆ ವಾರ್ಷಿಕ 'ಆಸ್ತಿ ತೆರಿಗೆ'ಯನ್ನು ತಪ್ಪದೆ ಪಾವತಿಸಬೇಕು ಎಂದು ನ್ಯಾಯಪೀಠ ತಿಳಿಸಿದೆ.

ತೀರ್ಪಿನ ಸ್ಪಷ್ಟನೆಗಳು ಹಾಗೂ ವಿನಾಯಿತಿ: ಮಾಲ್‌ಮಾಲೀಕರಲ್ಲದೆ, ಬೇರೊಬ್ಬ ಹೊರಗಿನ ವ್ಯಕ್ತಿ ಅಥವಾ ಸಂಸ್ಥೆಯು ವಾಣಿಜ್ಯ ಉದ್ದೇಶಕ್ಕಾಗಿ ಡೀಸೆಲ್‌ಜನರೇಟರ್‌ಅಳವಡಿಸಿ ಪ್ರತ್ಯೇಕವಾಗಿ ನಿರ್ವಹಿಸುತ್ತಿದ್ದರೆ ಈ ತೀರ್ಪು ಅನ್ವಯಿಸುವುದಿಲ್ಲ. ಅಂತಹ ಸಂದರ್ಭಗಳಲ್ಲಿ ಅದು ಪ್ರತ್ಯೇಕ ವ್ಯವಹಾರವಾಗುವುದರಿಂದ ಟ್ರೇಡ್‌ಲೈಸೆನ್ಸ್‌ಪಡೆಯಬೇಕಾಗುತ್ತದೆ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.

ಕಂಪನಿಯ ಮೇಲ್ಮನವಿಯನ್ನು ಪುರಸ್ಕರಿಸಿದ ನ್ಯಾಯಾಲಯವು, ಈ ಹಿಂದೆ ಪಾವತಿಸಿರುವ ಪರವಾನಗಿ ಶುಲ್ಕವನ್ನು ಮರುಪಾವತಿಸಬೇಕೆಂಬ ಮನವಿಯನ್ನು ಮಾತ್ರ ತಿರಸ್ಕರಿಸಿದೆ.

 

 

 

Author
ಸಿ.ಹೆಂಜಾರಪ್ಪ
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಹರಿಯಬ್ಬೆ ಗ್ರಾಮದ ‘ಕಾನಿ ಬಟ್ರು’ ಹನುಮಂತರಾಯಪ್ಪ ವಿಧಿವಶಫುಟ್‌ಬಾಲ್ ಪಂದ್ಯಾವಳಿಯಲ್ಲಿ ಪ್ರಥಮ ಮತ್ತು ದ್ವಿತೀಯ ಸ್ಥಾನ ಗಳಿಸಿದ   ಬಾಲಕಿಯರು ಎಎಫ್‌ವೈ ವಿದ್ಯಾರ್ಥಿ ವಿಭಾಗ ಉದ್ಘಾಟನೆಯಲ್ಲಿ ಭಾಗವಹಿಸಿ ಮಮತ ನೇರ್ಲಗಿ ಮಾತನಾಡಿದರುಚಿತ್ರದುರ್ಗದಲ್ಲಿಂದು ಪ್ರಾಜೆಕ್ಟ್ ಪಂಚತಂತ್ರ ನಾಟಕ ಪ್ರದರ್ಶನಸರ್ವ ಸಮುದಾಯಗಳ ಏಳಿಗೆಗೆ ಶ್ರಮಿಸುವೆ:ಧೀರಜ್ ಮುನಿರಾಜ್ಕುಡಿಯುವ ನೀರಿನ ಕೊರತೆ: ಖಾಸಗಿ ಲೇಔಟ್‌ಗೆ ನೀರು ಪೂರೈಕೆ, ಕೆರೆಗೆ ಕೊಳಚೆ ನೀರು ಆರೋಪತೂಬಗೆರೆ ಗ್ರಾಮದಲ್ಲಿ ಚಾವಡಿ ಗಣೇಶೋತ್ಸವ ಸಂಪನ್ನರಾಜ್ಯ ಸರ್ಕಾರಿ ನೌಕರರಿಗೆ ಶೀಘ್ರದಲ್ಲೇ ‘ಒಪಿಎಸ್’ ಜಾರಿ: ಶಶಿ ಹುಲಿಕುಂಟೆಚಿತ್ರದುರ್ಗ ಸಿಟಿ ಇನ್‌ಸ್ಟಿಟ್ಯೂಟ್‌ನಲ್ಲಿ ಆಡಳಿತ ಲೋಪ ಆರೋಪ: ನಿರ್ದೇಶಕ ಹೆಚ್.ಎನ್. ಲೋಕೇಶ್ ರಾಜೀನಾಮೆಭದ್ರಾ ಕಾಲುವೆ ಹಾಳು, ಸಾರ್ವಜನಿಕ ಆಸ್ತಿ ಹಾಳುಗೆಡವಿದವರ ವಿರುದ್ಧ ಕಠಿಣ ಕ್ರಮ: ಪೊಲೀಸರ ಗಂಭೀರ ಎಚ್ಚರಿಕೆ!