ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ತಾಲೂಕಿನಲ್ಲಿ 50 ರಿಂದ 55 ಸಮುದಾಯಗಳ ಜನರು ಇಲ್ಲಿದ್ದಾರೆ. ಎಲ್ಲಾ ಸಮುದಾಯಗಳ ಪರವಾಗಿ ಕೆಲಸ ಮಾಡುತ್ತೇನೆ ಎಂದು ಶಾಸಕ ಧೀರಜ್ ಮುನಿರಾಜು ತಿಳಿಸಿದರು.
ತಾಲೂಕಿನ ಕನಸವಾಡಿ ಕಾಲೋನಿಯಲ್ಲಿ ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭಾ ಮಧುರೆ ಹೋಬಳಿ ಘಟಕದಿಂದ ಹಮ್ಮಿಕೊಂಡಿದ್ದ ವಿಶ್ವಕರ್ಮ ಜಯಂತೋತ್ಸವ ಸಮಾರಂಭದಲ್ಲಿ ಅವರು ಮಾತನಾಡಿ
ವಿಶ್ವಕರ್ಮ ಸಮುದಾಯವೂ 5 ವಿವಿಧ ಕುಲಕಸುಬು ಮಾಡುವ ಸಮಾಜವಾಗಿದೆ. ವಿಶೇಷವಾಗಿ ರೈತರಿಗೆ ಸಹಕಾರ ನೀಡುತ್ತಾ ಗ್ರಾಮೀಣ ಬದುಕಿನೊಂದಿಗೆ ಬೆರೆತುಕೊಂಡು ಬಂದಿದೆ. ದೇಶದಲ್ಲಿ ಪಿಎಂ ವಿಶ್ವಕರ್ಮ ಯೋಜನೆಯಡಿಯಲ್ಲಿ ವಿಶೇಷ ಕೌಶಲ್ಯಾಧರಿತ ಕಸುಬು ನೆಚ್ಚಿಕೊಂಡಿರುವವರಿಗೆ ಸಾಲಸೌಲಭ್ಯ, ವಿವಿಧ ಸೌಕರ್ಯಗಳನ್ನು ನೀಡಲಾಗುತ್ತಿದೆ. ಅಯೋಧ್ಯಯಲ್ಲಿನ ರಾಮನ ದೇವಾಲಯದ ರಾಮನ ವಿಗ್ರಹದ ಕೆತ್ತನೆಯನ್ನು ನಮ್ಮ ರಾಜ್ಯದ ಯುವಕನಿಗೆ ಮಾಡುವ ಅವಕಾಶ ದೊರೆತಿತ್ತು. ವಿಶ್ವಕರ್ಮ ಸಮುದಾಯದ ಅಭಿವೃದ್ದಿಗೆ ಕೆಲಸ ಮಾಡುವೆ ಎಂದರು.
ವಿಶ್ವಕರ್ಮ ಸಮುದಾಯದವರು ಕೌಶಲ್ಯಗಳ ಕಲಿಸಲು ತರಬೇತಿ ಕೇಂದ್ರದ ನಿವೇಶನಕ್ಕೆ ಪ್ರಯತ್ನಿಸುತ್ತೇನೆ.ವಿಶ್ವಕರ್ಮ ನಿಗಮದಡಿಯಲ್ಲಿ ಹೆಚ್ಚಿನ ಸೌಲಭ್ಯವನ್ನು ತಾಲೂಕಿನ ಜನತೆಗೆ ತಂದುಕೊಡುವ ಕೆಲಸ ಮಾಡುತ್ತೇನೆ. ವೃತ್ತಿ ಕೌಶಲ್ಯಗಳನ್ನು ಕಲಿಸಲು ನಿಗಮದಡಿಯಲ್ಲಿ ಟ್ರೈನಿಂಗ್ ಸೆಂಟರ್ ಮಾಡಲು ಪ್ರಯತ್ನಿಸಲಾಗುತ್ತದೆ. 10 ಗುಂಟೆ ಜಾಗವನ್ನು ಇದಕ್ಕಾಗಿ ನೀಡಲು ಪ್ರಯತ್ನಿಸಲಾಗುತ್ತದೆ ಎಂದರು. ವಿಶ್ವಕರ್ಮ ಸಮುದಾಯ ಉತ್ತಮವಾಗಿ ಸಂಘಟನೆ ಮಾಡಿಕೊಂಡು ಹೋಬಳಿ ಮಟ್ಟದಲ್ಲಿ ಕಾರ್ಯಕ್ರಮ ಮಾಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಹೆಚ್ಚಿನ ಕಾರ್ಯಕ್ರಮಗಳ ಜತೆಗ ಸಮುದಾಯ ವಿದ್ಯಾರ್ಥಿಗಳ ಶೈಕ್ಷಣಿಕ ನೆರವಿಗೂ ಮುಂದಾಗಲು ಪ್ರಯತ್ನಿಸಬೇಕು ಎಂದರು.
ಮುಖಂಡರಾದ ಹರೀಶ್ ಗೌಡ, ಕೆ.ವಿ ಪ್ರಕಾಶ್, ಟಿ ವಿಜಯ್ ಕುಮಾರ್ , ರಮೇಶ್, ಬಾಬಣ್ಣ, ಮಂಜುನಾಥಚಾರ್, ಪುಟ್ಟ ಹೊನ್ನಾಚಾರ್, ಶಿವರಾಜಚಾರ್, ವೆಂಕಟೇಶಚಾರ್, ಗೋಪಾಲಚಾರ್, ಆನಂದ್‌ಮೂರ್ತಿ, ರೂಪ, ನೇತ್ರಾವತಿ, ಮುರುಳಿ, ನಾಗರಾಜಚಾರ್, ಆನಂದಚಾರ್, ಲೋಕೇಶಚಾರ್ ಘಾಟಿ ಸುಬ್ರಮಣ್ಯ, ಚನ್ನಗಂಗಣ್ಣ, ಮಾರಸಂದ್ರ ರಮೇಶ್, ಮನು ಸೇರಿದಂತೆ ಅನೇಕರು ಕಾರ್ಯಕ್ರಮದಲ್ಲಿ ಹಾಜರಿದ್ದರು.




