ಸತ್ಯ ಧರ್ಮದ ದೀಪಗಳು ಹೊಳೆದಂತೆ
ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಬಸವ ಜಯಂತಿಯ ಬೆಳಕು ಹರಡಿದೆ
ಸತ್ಯ ಧರ್ಮದ ದೀಪಗಳು ಹೊಳೆದಂತೆ
ಕರ್ಮವೆ ಭಕ್ತಿಯ ರೂಪದಲ್ಲಿ ಹಾಡದೆ
ಅವರ ವಚನಗಳು ನಮ್ಮ ಬದುಕಿಗೆ ಬೆಳಕಿನಂತೆ..
ಜಾತಿ ಬಡತನ ಭೇದವೇಕೆ ಇಲ್ಲಿ
ದಯೆಯೇ ನಮ್ಮ ಧರ್ಮ ದಾರಿಯಾಗಲಿ
ನಮ್ಮಲ್ಲಿ ನೀತಿವಂತಿಕೆ ಬೆಳೆಯುತ್ತೆ
ಬಸವಣ್ಣವರ ಆ ಸತ್ಯ ದರ್ಶನವಾಗಲಿ..
ಮಂದಿರವಲ್ಲ ದೇಹವೇ ದೇವಾಲಯ
ಕರ್ಮವೇ ಪೂಜೆ ನಿಷ್ಠೆಯೇ ಕಾಯಕ
ಸಮತೆಯೇ ಸತ್ಯ ಶ್ರದ್ಧೆಯ ಹಾದಿಯಲ್ಲಿ
ಬಸವಣ್ಣನವರ ಮಾತುಗಳು ಸದಾ ಪ್ರೇರಣೆ..
ಬಸವ ಜಯಂತಿಯು ನೆನಪಿಸಿದರೆ ಸಾಲದು
ಅವರ ತತ್ವಗಳು ಅನುಷ್ಠಾನವಾಗಬೇಕು
ಬಸವಣ್ಣವರು ನಡೆದ ದಾರಿಯಲ್ಲಿ ನಿರಂತರ ಸಾಗೋಣ..
ಕವಿತೆ: ಅಮೃತಾ ಸಿದ್ದಪಾ ಚೌಧರಿ, ವಿಜಯಪುರ.


