E-PAPER
27 Nov 2026, 07:23:49 AM|
Gold₹12128/gGold24K ₹12,128/g - 22K ₹11,107/gTap for full details
Press ID & Credential Portal
Apply / Verify  ➔
Advertisement
LIVE TV LocalCrimeNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
State News

ಬೆರಳ ತುದಿಯಲ್ಲೇ ಇ-ಖಾತಾ: 24 ಲಕ್ಷ ಆಸ್ತಿ ಮಾಲೀಕರಿಗೆ ವಾಟ್ಸಾಪ್‌ನಲ್ಲೇ ಉಚಿತ ವಿತರಣೆ!

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಸಾರ್ವಜನಿಕರು ಸರ್ಕಾರಿ ಕಚೇರಿಗಳಿಗೆ ಅಲೆಯುವುದನ್ನು ತಪ್ಪಿಸಲು ಮತ್ತು ಮಧ್ಯವರ್ತಿಗಳ ಹಾವಳಿಗೆ ಕಡಿವಾಣ ಹಾಕಲು ರಾಜ್ಯ ಸರ್ಕಾರ ಮಹತ್ವದ ಹೆಜ್ಜೆಯಿಟ್ಟಿದೆ.

ಗ್ರೇಟರ್ ಬೆಂಗಳೂರು ಪ್ರಾಧಿಕಾರ ವ್ಯಾಪ್ತಿಯ 5 ನಗರ ಪಾಲಿಕೆಗಳ ಸುಮಾರು 24 ಲಕ್ಷ ಆಸ್ತಿ ಮಾಲೀಕರಿಗೆ ಇನ್ನು ಮುಂದೆ ನೇರವಾಗಿ ವಾಟ್ಸಾಪ್ ಮೂಲಕವೇ ಉಚಿತವಾಗಿ ಇ-ಖಾತಾ ಪ್ರಮಾಣಪತ್ರಗಳನ್ನು ತಲುಪಿಸಲಾಗುತ್ತಿದೆ ಎಂದು ಮುಖ್ಯ ಆಯುಕ್ತ ಮಹೇಶ್ವರ್ ರಾವ್ ತಿಳಿಸಿದ್ದಾರೆ.

ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ 6ನೇ ಗ್ಯಾರಂಟಿಯಾದ ‘ಭೂ-ಗ್ಯಾರಂಟಿ – ನನ್ನ ಖಾತಾ, ನನ್ನ ಹಕ್ಕು’ ಅಭಿಯಾನದಡಿ, ಸಿಎಂ ಡಿ.ಕೆ. ಶಿವಕುಮಾರ್ ಅವರ ಆಶಯ ಹಾಗೂ ಬೆಂಗಳೂರು ನಗರಾಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಅವರ ಮಾರ್ಗದರ್ಶನದಲ್ಲಿ ಈ ವಿನೂತನ ಯೋಜನೆಯನ್ನು ಜಾರಿಗೊಳಿಸಲಾಗಿದೆ.

ಈ ಸೇವೆಯ ಪ್ರಮುಖ ವಿಶೇಷತೆಗಳು: ನೇರವಾಗಿ ವಾಟ್ಸಾಪ್‌ಗೆ PDF: ಆಸ್ತಿ ಮಾಲೀಕರು ತಮ್ಮ ವಿಶಿಷ್ಟ ePID ಸಂಖ್ಯೆಯೊಂದಿಗೆ ಇ-ಖಾತಾ ಪ್ರಮಾಣಪತ್ರವನ್ನು PDF ರೂಪದಲ್ಲಿ ನೇರವಾಗಿ ವಾಟ್ಸಾಪ್‌ನಲ್ಲಿ ಪಡೆಯಲಿದ್ದಾರೆ.

ಸಂಪೂರ್ಣ ಉಚಿತ ಸೇವೆ: ಈ ಪ್ರಕ್ರಿಯೆ ಸಂಪೂರ್ಣ ಉಚಿತವಾಗಿದ್ದು, ಸಾರ್ವಜನಿಕರು ಯಾರಿಗೂ ಒಂದು ರೂಪಾಯಿ ಹಣ ನೀಡುವ ಅಗತ್ಯವಿಲ್ಲ.

ಆನ್‌ಲೈನ್ ತಿದ್ದುಪಡಿಗೂ ಅವಕಾಶ: ವಾಟ್ಸಾಪ್ ಸಂದೇಶದೊಂದಿಗೆ ಜಿಬಿಎಯ ಅಧಿಕೃತ ಪೋರ್ಟಲ್ ಲಿಂಕ್ (https://GBAeAasthi.karnataka.gov.in) ನೀಡಲಾಗಿದ್ದು, ಮಾಲೀಕರು ತಮ್ಮ ePID ಸಂಖ್ಯೆ ಬಳಸಿ ಆನ್‌ಲೈನ್ ಮೂಲಕವೇ ಖಾತಾ ತಿದ್ದುಪಡಿ ಅಥವಾ ಮಾಲೀಕತ್ವ ಬದಲಾವಣೆಗೆ (ಮ್ಯುಟೇಷನ್) ಅರ್ಜಿ ಸಲ್ಲಿಸಬಹುದು.

ಪಾರದರ್ಶಕ ಮತ್ತು ನಾಗರಿಕ ಸ್ನೇಹಿ ಆಡಳಿತ ನೀಡುವ ನಿಟ್ಟಿನಲ್ಲಿ ಸರ್ಕಾರಿ ಸೇವೆಯನ್ನು ಮನೆಬಾಗಿಲಿಗೆ ತಲುಪಿಸಲಾಗುತ್ತಿದ್ದು, ಎಲ್ಲಾ ಆಸ್ತಿ ಮಾಲೀಕರು ತಮ್ಮ ವಾಟ್ಸಾಪ್ ಸಂದೇಶಗಳನ್ನು ಪರಿಶೀಲಿಸಿ ಇ-ಖಾತಾ ಪ್ರಮಾಣಪತ್ರವನ್ನು ಡೌನ್‌ಲೋಡ್ ಮಾಡಿಕೊಳ್ಳುವಂತೆ ಪ್ರಕಟಣೆಯಲ್ಲಿ ಕೋರಲಾಗಿದೆ.

 

 

Author
Chandravalli News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಸಂವಿಧಾನ ದಿನ – ನ್ಯಾಯದ ನೆಲೆ, ಸಮಾನತೆಯ ಸೆಲೆಸಂತ್ರಸ್ತೆಯ ಗುರುತು ಬಹಿರಂಗ ಮತ್ತು ಬೆದರಿಕೆ ಆರೋಪ: ಶಾಸಕ ಮುನಿರತ್ನ ವಿರುದ್ಧ ಮತ್ತೊಂದು ಎಫ್‌ಐಆರ್ಕುವೆಂಪು ಆಶಯದ 'ಮಂತ್ರಮಾಂಗಲ್ಯ'ದ ಮೂಲಕ ದಾಂಪತ್ಯಕ್ಕೆ ಕಾಲಿಟ್ಟ ಶಾಸಕ ದರ್ಶನ್ ಧ್ರುವನಾರಾಯಣ್! ಬೆರಳ ತುದಿಯಲ್ಲೇ ಇ-ಖಾತಾ: 24 ಲಕ್ಷ ಆಸ್ತಿ ಮಾಲೀಕರಿಗೆ ವಾಟ್ಸಾಪ್‌ನಲ್ಲೇ ಉಚಿತ ವಿತರಣೆ!ಪೊಲೀಸ್ ಠಾಣೆ ಕೂಗಳತೆ ದೂರದಲ್ಲೇ ಭೀಕರ ಶೂಟೌಟ್: ಊಟ ಮಾಡುತ್ತಿದ್ದ ನಾಲ್ವರು ಯುವಕರ ಗುಂಡಿಕ್ಕಿ ಹತ್ಯೆಪ್ರತಿಷ್ಠೆ ಬಿಟ್ಟು ಪ್ರತಿಭಟನೆ ಹಿಂಪಡೆಯಿರಿ; ಆಶಾ ಸಮಸ್ಯೆಗೆ ಸೂಕ್ತ ಪರಿಹಾರ ನೀಡುತ್ತೇವೆ: ಡಿಕೆ ಶಿವಕುಮಾರ್ ಮನವಿಪ್ರತ್ಯೇಕ ರಾಜ್ಯದ ಬೇಡಿಕೆಗೆ ಸಹಮತವಿಲ್ಲ; ಅಖಂಡ ಕರ್ನಾಟಕವೇ ನಮ್ಮ ಆಶಯ: ಸಚಿವ ಜಾರಕಿಹೊಳಿಎಕ್ಸಾಸ್ಟ್ ಫ್ಯಾನ್‌ನಲ್ಲಿ ಮೊಬೈಲ್ ಇರಿಸಿ ಯುವತಿ ಸ್ನಾನ ಮಾಡುತ್ತಿದ್ದ ವೀಡಿಯೊ ಚಿತ್ರೀಕರಣ ಯತ್ನಭರ್ಜರಿ ಬೇಟೆ: 3.77 ಕೋಟಿ ಚಿನ್ನ, 73 ಲಕ್ಷ ನಗದು ಹಾಗೂ 1.33 ಕೆ.ಜಿ ಸಿಂಥೆಟಿಕ್ ಡ್ರಗ್ಸ್ ಜಪ್ತಿ; ಏಳು ಮಂದಿ ಬಂಧನನಾಗೇಂದ್ರ ಸಂಪುಟ ಸೇರ್ಪಡೆ ಕುರಿತು ಪ್ರತಿಕ್ರಿಯಿಸಲು ಸಿಎಂ ನಕಾರ; ತನಿಖೆಯಲ್ಲಿ ಹಸ್ತಕ್ಷೇಪವಿಲ್ಲ ಎಂದ ಡಿಕೆಶಿ