Web Stories
Chandravalli News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ತ್ಯಾಗ ಮತ್ತು ದೇಶಪ್ರೇಮದಿಂದ ಅಮರತ್ವ ಪಡೆದ ಭಗತ್ ಸಿಂಗ್ ,ರಾಜಗುರು ಸುಖದೇವ್

Advertisement
ಚಂದ್ರವಳ್ಳಿ ನ್ಯೂಸ್, ಚಾಮರಾಜನಗರ:
ಸ್ವಾರ್ಥ ರಹಿತ ತ್ಯಾಗ ಮತ್ತು ದೇಶಪ್ರೇಮದಿಂದ ಭಗತ್ ಸಿಂಗ್ ,ರಾಜಗುರು ಸುಖದೇವ್ ರವರು ಅಮರತ್ವವನ್ನು ಪಡೆದಿದ್ದಾರೆ. ದೇಶಕ್ಕಾಗಿ ತ್ಯಾಗ, ಬಲಿದಾನವನ್ನು ಮಾಡಿದ ಮೂವರು ಕೋಟಿ ಕೋಟಿ ಭಾರತೀಯರಲ್ಲಿ ಸ್ವಾತಂತ್ರ್ಯದ ಕಿಚ್ಚನ್ನು ಬಡಿದಬ್ಬಿಸಿ ಇಂದಿಗೂ ಯುವಕರಲ್ಲಿ ಸ್ಪೂರ್ತಿ ಚೈತನ್ಯದ ಶಕ್ತಿಯಾಗಿದ್ದಾರೆ ಎಂದು ಸಂಸ್ಕೃತಿ ಚಿಂತಕ , ಜೈ ಹಿಂದ್ ಪ್ರತಿಷ್ಠಾನದ ಅಧ್ಯಕ್ಷರಾದ ಸುರೇಶ್ ಎನ್ ಋಗ್ವೇದಿ ತಿಳಿಸಿದರು.

ಅವರು ನಗರದ ಋಗ್ವೇದಿ  ಕುಟೀರದ ಜೈಹಿಂದ್ ಕಟ್ಟೆಯಲ್ಲಿ ಜೈ ಹಿಂದ್ ಪ್ರತಿಷ್ಠಾನ ಮತ್ತು  ಋಗ್ವೇದಿ  ಯೂತ್ ಕ್ಲಬ್ ಹಮ್ಮಿಕೊಂಡಿದ್ದ ಹುತಾತ್ಮ ದಿನ, ವೀರ ನಮನ ಕಾರ್ಯಕ್ರಮದಲ್ಲಿ ಜ್ಯೋತಿ ಬೆಳಗಿಸುವ ಮೂಲಕ ಸ್ವಾತಂತ್ರ್ಯದ ಚಳುವಳಿಯಲ್ಲಿ ಬ್ರಿಟಿಷರಿಂದ ನೇಣು ಕಂಬಕ್ಕೆ ಏರಿಸಲ್ಪಟ್ಟ ಭಗತ್ ಸಿಂಗ್ ,ರಾಜಗುರು ಸುಖದೇವ ಅವರ ಆತ್ಮಕ್ಕೆ ಶಾಂತಿ ಕೋರಿ ಮಾತನಾಡುತ್ತಾ ಭಗತ್ ಸಿಂಗ್ ರಾಜಗುರು ಯುವಶಕ್ತಿಯ ಪ್ರತೀಕವಾಗಿದ್ದು ಭಾರತದ ಸ್ವಾತಂತ್ರ್ಯ ಚಳುವಳಿಯಲ್ಲಿ ನೌ ಜವಾನ್ ಭಾರತ ಸಭಾ ವನ್ನು ಸ್ಥಾಪಿಸಿ, ಬ್ರಿಟಿಷ್ ಅಧಿಕಾರಿ ಸ್ಯಾo ಡರ್ಸ್ ನನ್ನು ಹತ್ಯೆ ಮಾಡುವ ಮೂಲಕ ಬ್ರಿಟಿಷರಲ್ಲಿ  ಭಯಉಂಟು ಮಾಡಿದವರು.

ಇಂಕ್ವಿಲಾಬ್ ಜಿಂದಾಬಾದ್, ಕ್ರಾಂತಿ ಚಿರಾಯುವಾಗಲಿ ಎಂಬ ಘೋಷಣೆಯನ್ನು ಜಗತ್ತಿಗೆ ನೀಡಿದ ಮಹಾನ್ ಧೈರ್ಯಶಾಲಿ ಹೋರಾಟಗಾರರು. ಕೇವಲ 23 ವರ್ಷದಲ್ಲಿ ತಮ್ಮ ಪ್ರಾಣವನ್ನು  ರಾಷ್ಟ್ರಕ್ಕಾಗಿ ಮುಡಿಪಾಗಿಟ್ಟ   ಭಗತ್ ಸಿಂಗ್  , ರಾಜಗುರು ಸುಖದೇವ ರವರ ದೇಶಪ್ರೇಮ ಮಾದರಿಯಾದದ್ದು. ರಾಜಕೀಯ ಕೈದಿಗಳಿಗೆ ಉತ್ತಮವಾದ ಹಕ್ಕು ಮತ್ತು ಸೌಲಭ್ಯ ನೀಡಲು ಜೈಲಿನಲ್ಲಿ ಉಪವಾಸ ಮಾಡುವ ಮೂಲಕ ಸ್ವಾತಂತ್ರ್ಯ ಹೋರಾಟಗಾರರಿಗೆ ಧೈರ್ಯ  ತುಂಬಿದರು.ಭಾರತೀಯರ ಬೇಡಿಕೆಗಳನ್ನು ಗಮನ ಹರಿಸಲು ಸೆಂಟ್ರಲ್ ಅಸೆಂಬ್ಲಿ ಹಾಲ್ ಮೇಲೆ ಬಾಂಬ ದಾಳಿಯನ್ನು ಮಾಡುವ ಮೂಲಕ ಬ್ರಿಟಿಷರಿಗೆ ಎಚ್ಚರಿಕೆ ನೀಡಿದ ಮಹಾನ್ ವ್ಯಕ್ತಿಗಳು ಭಗತ್ ಸಿಂಗ್ ರಾಜಗುರು ಸುಖದೇವ್ ಎಂದು ಸ್ಮರಿಸಿ, ಯುವಕರು ಭಾರತಕ್ಕಾಗಿ ತಮ್ಮ ಸೇವೆಯನ್ನು ಸಲ್ಲಿಸಬೇಕು. ಸಮಾಜಮುಖಿಯಾಗಿ ಕಾರ್ಯವನ್ನು ಮಾಡಬೇಕು ಎಂದರು.

ಅಖಿಲ ಭಾರತೀಯ ಸಾಹಿತ್ಯ ಪರಿಷತ್ತಿನ ಪತ್ರಿಕಾ ಕಾರ್ಯದರ್ಶಿಗಳಾದ ಬಿಕೆ ಆರಾಧ್ಯ ಮಾತನಾಡಿ ಭಗತ್ ಸಿಂಗ್ ರಾಜಗುರು ಸುಖದೇವ್  ದೇಶದ ಸ್ವಾತಂತ್ರ್ಯ ಹೋರಾಟದ ಕ್ರಾಂತಿಕಾರಿಗಳಾಗಿ ರೂಪುಗೊಂಡು ಬ್ರಿಟಿಷರಿಗೆ ಸಿಂಹ ಸ್ವಪ್ನರಾಗಿ ಹೋರಾಟ ನಡೆಸಿದವರು. ಜೈ ಹಿಂದ್ ಪ್ರತಿಷ್ಠಾನ ಸಾವಿರಾರು ರಾಷ್ಟ್ರವೀರರ ಸ್ಮರಣೆಯ ಕಾರ್ಯಕ್ರಮವನ್ನು ಪ್ರತಿದಿನ ನಡೆಸಿಕೊಂಡು ಬರುತ್ತಿರುವುದು ಹೆಮ್ಮೆಯಾಗಿದೆ .ಜನರಲ್ಲಿ ರಾಷ್ಟ್ರೀಯ ಪ್ರಜ್ಞೆ ಮೂಡಿಸುವ ದಿಕ್ಕಿನಲ್ಲಿ ಜೈ ಹಿಂದ್ ಕಟ್ಟೆ ಯಶಸ್ವಿಯಾಗಿದೆ. ಮೂರು ಸಾವಿರಕ್ಕೂ ಹೆಚ್ಚು ಕಾರ್ಯಕ್ರಮಗಳನ್ನು ಜೈಹಿಂದ್ ಕಟ್ಟೆಯಲ್ಲಿ ಸರಳವಾಗಿ ಆಚರಿಸುವ ಮೂಲಕ ಸದಾ ಕಾಲ ಕ್ರಿಯಾಶೀಲರಾಗಿರುವುದು, ದೇಶಭಕ್ತರಿಗೆ ನೀಡುವ ಗೌರವದ ಪ್ರತೀಕವಾಗಿದೆ ಎಂದರು.

 ಭಗತ್ ಸಿಂಗ್, ರಾಜಗುರು ಸುಖದೇವ್ ಹಾಗೂ ನೂರಾರು ಕ್ರಾಂತಿಕಾರಿ ಆತ್ಮಗಳಿಗೆ  ಶಾಂತಿ ಕೋರಲಾಯಿತು. ಕಾರ್ಯಕ್ರಮದಲ್ಲಿ ಮಣಿಕಂಠ, ಆನಂದ, ಗೋವಿಂದ ನಾಯಕ್ ಶ್ರಾವ್ಯ, ಪೂಜಾ, ಲೇಖನ, ಆಕಾಶ್ ಇದ್ದರು.
Advertisement
Advertisement

Author
Chandravalli News
Regional Kannada Daily is a leading news paper in (Karnataka state). Which is having large number of circulation in the districts of Chitradurga, Davanagere, Bellary, Vijayanagara, Shimoga, Chikmagalur, Tumkur, Bangalore, Simultaneously published in rural districts of Bangalore
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಸತ್ಯ ಧರ್ಮದ ದೀಪಗಳು ಹೊಳೆದಂತೆ ಅಬ್ದುಲ್ ಜಬ್ಬಾರ್ ಅಮಾನತು ಹಿಂಪಡೆಯುವ ಬಗ್ಗೆ ಚರ್ಚೆ: ಸಚಿವ ಸತೀಶ್ ಜಾರಕಿಹೊಳಿಸಿದ್ದರಾಮಯ್ಯ ಅಸಹಾಯಕರಾಗಿದ್ದಾರೆ; ಸಿಎಂ ವಿರುದ್ಧ ಕೆ.ಎನ್. ರಾಜಣ್ಣ ಅಸಮಾಧಾನದ ಸ್ಫೋಟ!ಶಾಖಾಧಿಕಾರಿ ಹಾಗೂ ಸಿವಿಲ್ ನ್ಯಾಯಾಧೀಶರ ಹುದ್ದೆಗಳಿಗೆ ಅರ್ಜಿ ಆಹ್ವಾನ ಮೂರೇ ನಿಮಿಷದಲ್ಲಿ ಜ್ಯುವೆಲರಿ ಶಾಪ್ ದರೋಡೆ; ಮಾಲೀಕ ಶೌಚಾಲಯಕ್ಕೆ ಹೋದಾಗ ಕೈಚಳಕ ತೋರಿದ ಖದೀಮರು!ಮನೆಯೊಳಗೆ ನುಗ್ಗಿದ ಚಿರತೆ; ಮಂಚದ ಕೆಳಗೆ ಅವಿತಿದ್ದ ಕಿರಾತಕನಿಂದ ವೃದ್ಧೆ ಪಾರು!"ನಮಗೂ ಪ್ರಧಾನಿಗೂ ಹೆಂಡತಿ ಸಮಸ್ಯೆ ಇಲ್ಲ": ಸಂಸತ್ತಿನಲ್ಲಿ ರಾಹುಲ್ ಗಾಂಧಿ ಲಘು ಧಾಟಿಯ ವಾಗ್ದಾಳಿಮುಖಾಮುಖಿ ಡಿಕ್ಕಿ: ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡು ಒಂದೇ ಕುಟುಂಬದ ಆರು ಮಂದಿ ದುರ್ಮರಣಜಬ್ಬಾರ್ ಅಮಾನತು ಹಿಂಪಡೆಯುವಂತೆ ಜಾರಕಿಹೊಳಿ ಮನವಿ: ಪಕ್ಷದಲ್ಲಿ ಯಾವುದೇ ಗುಂಪುಗಾರಿಕೆ ಇಲ್ಲ-ಶಿವಕುಮಾರ್ ಮಹಿಳಾ ಮೀಸಲಾತಿ ಕಾಯ್ದೆ-2023 ಅಧಿಕೃತ ಜಾರಿ: ಕೇಂದ್ರ ಸರ್ಕಾರದಿಂದ ಅಧಿಸೂಚನೆ ಪ್ರಕಟ