ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ :
ದೇಶದ ೮೦ ನೇ ಸ್ವಾತಂತ್ರ್ಯ ದಿನಾಚರಣೆಯಂದು ವಂದೆ ಮಾತರಂ ಗೀತೆಗೆ ಕಾಂಗ್ರೆಸ್ ಅಧಿನಾಯಕಿ ಸೋನಿಯಾಗಾಂಧಿ ಅವಮಾನಿಸಿರುವುದನ್ನು ಖಂಡಿಸಿ ಭಾರತೀಯ ಜನತಾಪಾರ್ಟಿ ಯುವ ಮೋರ್ಚಾದಿಂದ ಒನಕೆ ಓಬವ್ವ ವೃತ್ತದಲ್ಲಿ ಭಾನುವಾರ ಸಂಜೆ ಪ್ರತಿಭಟಿಸಲಾಯಿತು.
ಯುವ ಮೋರ್ಚಾ ಜಿಲ್ಲಾಧ್ಯಕ್ಷ ಅರುಣ್‌ಕುಮಾರ್ ಮಾತನಾಡಿ ದೆಹಲಿಯ ಎಐಸಿಸಿ. ಕಚೇರಿಯಲ್ಲಿ ಸ್ವಾತಂತ್ರ್ಯ ದಿನದಂದು ಹಾಡಲಾದ ವಂದೆ ಮಾತರಂ ಗೀತೆಯನ್ನು ಅರ್ಧಕ್ಕೆ ಮೊಟಕುಗೊಳಿಸುವಂತೆ ಸೋನಿಯಾಗಾಂಧಿ ಸೂಚಿಸಿರುವುದು ಅತ್ಯಂತ ಅಮಾನವೀಯ ಘಟನೆ. ಕೂಡಲೆ ಅವರು ದೇಶದ ಜನರ ಮುಂದೆ ಕ್ಷಮೆ ಕೇಳಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸಲಾಗುವುದೆಂದು ಎಚ್ಚರಿಸಿದರು.
ಬಿಜೆಪಿ.ಯುವ ಮೋರ್ಚಾ ರಾಜ್ಯ ಕಾರ್ಯದರ್ಶಿ ಭಾರ್ಗವಿ ದ್ರಾವಿಡ್ ಮಾತನಾಡಿ ಭಂಕಿಮ್ ಚಂದ್ರ ಚಟರ್ಜಿರವರು ರಚಿಸಿರುವ ವಂದೆ ಮಾತರಂ ಗೀತೆ ಹಾಡುವಾಗ ಅರ್ಧದಲ್ಲಿಯೇ ಸ್ಟಾಪ್ ಸ್ಟಾಪ್ ಎಂದು ಹೇಳಿರುವುದು ಎಲ್ಲೆಡೆ ವೈರಲ್ ಆಗಿದೆ. ಮೊದಲಿನಿಂದಲೂ ದೇಶ ವಿರೋಧಿಗಳಿಗೆ ಬೆಂಬಲಿಸುತ್ತಾ ಬರುತ್ತಿರುವ ಇವರಿಂದ
ಏನನ್ನು ನಿರೀಕ್ಷಸಲು ಆಗುವುದಿಲ್ಲ. ಪ್ರಿಯಾಂಕಾಗಾಂಧಿ ಪಾರ್ಲಿಮೆಂಟ್‌ನಲ್ಲಿ ಐ.ಲವ್ ಪ್ಯಾಲೆಸ್ತೀನ್ ಎನ್ನುತ್ತಿರುವುದನ್ನು ನೋಡಿದರೆ ಭಾರತಕ್ಕೆ ಅಗೌರವ ಸೂಚಿಸಿದಂತೆ ಕಾಣುತ್ತದೆ ಎಂದು ಹೇಳಿದರು.
ವಂದೆ ಮಾತರಂ ಗೀತೆಯಲ್ಲಿ ಹೆಣ್ಣು ಮಕ್ಕಳನ್ನು ವರ್ಣಿಸಿರುವ ಸಾಲನ್ನು ಕೇಳಲು ಆಗದೆ ಸೋನಿಯಾಗಾಂಧಿ ಅರ್ಧದಲ್ಲಿಯೇ ನಿಲ್ಲಿಸುವಂತೆ ಸೂಚಿಸಿರುವುದು ಕೀಳು ಮನಸ್ಥಿತಿಯನ್ನು ತೋರಿಸುತ್ತದೆ. ಪ್ರಧಾನಿ ನರೇಂದ್ರಮೋದಿ ಆಡಳಿದಲ್ಲಿ ಭಾರತ ವಿಶ್ವಗುರು ಆಗುತ್ತಿರುವುದು ಸಹಿಸಲು ಆಗುತ್ತಿಲ್ಲ. ಇಂತಹ ದೇಶದ್ರೋಹದ ಬದಲು ಭಾರತವನ್ನು ಬಿಟ್ಟು ತೊರೆಯಲಿ ಎಂದು ಎಚ್ಚರಿಸಿದರು.
ಬಿಜೆಪಿ.ಯುವ ಮೋರ್ಚಾ ನಗರಾಧ್ಯಕ್ಷ ವಸಂತ ಆಚಾರ್ ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡುತ್ತ ಮೂರು ನಿಮಿಷ ಹತ್ತು ಸೆಂಕಡ್‌ಗಳ ಅವಧಿಯಲ್ಲಿರುವ ವಂದೆ ಮಾತರಂ ಗೀತೆಯನ್ನು ಪೂರ್ಣವಾಗಿ ಹಾಡಲು ಬಿಡದ ಸೋನಿಯಾಗಾಂಧಿ ಅರ್ಧದಲ್ಲಿಯೇ ಮೊಟಕುಗೊಳಿಸುವಂತೆ ಹೇಳಿ ಸಂವಿಧಾನಕ್ಕೆ ಅಪಮಾನವೆಸಗಿದ್ದಾರೆ. ಬೇಷರತ್ತಾಗಿ ದೇಶದ ಜನತೆಯ ಕ್ಷಮೆ ಕೇಳಬೇಕೆಂದು ಒತ್ತಾಯಿಸಿದರು.
ಬಿಜೆಪಿ.ಜಿಲ್ಲಾಧ್ಯಕ್ಷ ಕೆ.ಟಿ.ಕುಮಾರಸ್ವಾಮಿ ಮಾತನಾಡಿ ಭಂಕಿಮ್ ಚಂದ್ರಚಟರ್ಜಿರವರು ರಚಿಸಿರುವ ವಂದೆ ಮಾತರಂ ಗೀತೆಯನ್ನು ಪೂರ್ಣವಾಗಿ ಕೇಳುವಷ್ಟು ಸಮಾಧಾನವಿಲ್ಲದ ಸೋನಿಯಾಗಾಂಧಿಗೆ ನಮ್ಮ ದೇಶದ ಮೇಲೆ ಗೌರವವಿಲ್ಲ. ಅದಕ್ಕಾಗಿ ಇಷ್ಟು ಕೆಟ್ಟದಾಗಿ ನಡೆದುಕೊಳ್ಳುತ್ತಿದ್ದಾರೆ. ಆ.೧೫ ರ ಸ್ವಾತಂತ್ರ್ಯ ದಿನಾಚರಣೆಯಂದು ಇಡಿ ದೇಶವೇ ಗೌರವ ಕೊಡುವಾಗ ಇವರಿಗೇಕೆ ಇಂತಹ ಕೇಡು ಬುದ್ದಿ. ಈಗಲಾದರೂ ಮಾಡಿರುವ ತಪ್ಪಿಗೆ ಕ್ಷಮೆ ಕೇಳಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಹೋರಾಟ ಮಾಡಲಾಗುವುದೆಂದು ಎಚ್ಚರಿಸಿದರು.
ಯುವ ಮೋರ್ಚಾ ಹೊಳಲ್ಕೆರೆ ಮಂಡಲದ ಪ್ರತಾಪ್ ಸಿ.ಎಲ್, ಗ್ರಾಮಾಂತರ ಮಂಡಲ ಅಧ್ಯಕ್ಷ ನಾಗರಾಜ್, ಜಿಲ್ಲಾ ಉಪಾಧ್ಯಕ್ಷ ಲಿಂಗರಾಜ್, ವಕ್ತಾರ ನಾಗರಾಜ್‌ಬೇದ್ರೆ, ನಗರ ಪ್ರಧಾನ ಕಾರ್ಯದರ್ಶಿ ಬಸವೇಶ್, ಎಸ್ಸಿ. ಮೋರ್ಚಾ ಪ್ರಧಾನ ಕಾರ್ಯದರ್ಶಿ ಚೇತನ್, ಬಸಮ್ಮ, ಸುಮ, ನಾಗರಾಜ್, ಸತೀಶ್ ಆಚಾರ್, ನಿತೀಶ್, ಆಕಾಶ್ ಪಾಪು, ರವಿ, ಮಹಾಂತೇಶ್, ಚಂದ್ರಶೇಖರ್, ಧನಂಜಯ್, ಅಖಿಲೇಶ್, ಬಾಲಾಜಿ, ಚಂದ್ರ, ಧನುಷ್, ವಿನಯ್, ವಿಜಯ್, ಕೀರ್ತಿ, ಅರುಣ ಇನ್ನು ಅನೇಕರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.



