LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಜಿಂಕೆಯನ್ನು ಜೀವಂತವಾಗಿ ನುಂಗಿದ್ದ ಬೃಹತ್ ಗಾತ್ರದ ಹೆಬ್ಬಾವು ಸೆರೆ

Advertisement
Advertisement

 ಚಂದ್ರವಳ್ಳಿ ನ್ಯೂಸ್, ಮಂಡ್ಯ:
ಜಿಲ್ಲೆಯ ಮಳವಳ್ಳಿ ತಾಲೂಕಿನ ನೆಟ್ಕಲ್ ಗ್ರಾಮದಲ್ಲಿ ಜಿಂಕೆಯೊಂದನ್ನು ಜೀವಂತವಾಗಿ ನುಂಗಿದ್ದ ಬೃಹತ್ ಗಾತ್ರದ ಹೆಬ್ಬಾವನ್ನು ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ ಉರಗ ತಜ್ಞರು ಯಶಸ್ವಿಯಾಗಿ ಸೆರೆಹಿಡಿದಿದ್ದಾರೆ.

ಬೆಂಗಳೂರು ಜಲಮಂಡಳಿಯ ನೀರು ಸರಬರಾಜು ಮಾಡುವ ಮುಖ್ಯ ಪೈಪ್‌ಲೈನ್ ಬಳಿ ಈ ರೋಮಾಂಚನಕಾರಿ ಘಟನೆ ನಡೆದಿದೆ.

ಜಿಂಕೆ ನುಂಗಿ ಕದಲಲಾಗದೆ ಬಿದ್ದಿದ್ದ ಹೆಬ್ಬಾವು!
ನೆಟ್ಕಲ್ ಗ್ರಾಮದ ಜಲಮಂಡಳಿ ಪೈಪ್‌ಲೈನ್ ಬಳಿ ಸುಮಾರು
10 ಅಡಿ ಉದ್ದ ಹಾಗೂ 30 ಕೆಜಿಗೂ ಹೆಚ್ಚು ತೂಕವಿದ್ದ ಬೃಹತ್ ಹೆಬ್ಬಾವೊಂದು ಪ್ರತ್ಯಕ್ಷವಾಗಿತ್ತು. ಹತ್ತಿರದ ಕಾಡಿನಿಂದ ಬಂದಿದ್ದ ಈ ಹೆಬ್ಬಾವು, ಅಲ್ಲಿ ಸಿಕ್ಕ ದೊಡ್ಡ ಜಿಂಕೆಯೊಂದನ್ನು ಸಂಪೂರ್ಣವಾಗಿ ನುಂಗಿ ಹಾಕಿತ್ತು. ಜಿಂಕೆಯನ್ನು ತಿಂದಿದ್ದರಿಂದ ಭಾರ ಹೆಚ್ಚಾಗಿ, ಮುಂದೆ ಸಾಗಲು ಸಾಧ್ಯವಾಗದೆ ಹೆಬ್ಬಾವು ಒಂದೇ ಕಡೆ ಮಲಗಿತ್ತು.

ಕಾಡಿಗೆ ಸೇರಿದ ಅತಿಥಿ-
ಪೈಪ್‌ಲೈನ್ ಬಳಿ ದೈತ್ಯ ಹಾವನ್ನು ಕಂಡು ಆತಂಕಗೊಂಡ ಸ್ಥಳೀಯ ಗ್ರಾಮಸ್ಥರು
, ತಕ್ಷಣವೇ ಅರಣ್ಯ ಇಲಾಖೆಗೆ ವಿಷಯ ಮುಟ್ಟಿಸಿದ್ದಾರೆ.

ಸುರಕ್ಷಿತ ಕಾರ್ಯಾಚರಣೆ: ಮಾಹಿತಿ ಸಿಗುತ್ತಿದ್ದಂತೆಯೇ ಸ್ಥಳಕ್ಕೆ ಧಾವಿಸಿದ ಅರಣ್ಯ ಇಲಾಖೆಯ ಸಿಬ್ಬಂದಿ ಮತ್ತು ಉರಗ ತಜ್ಞರು ಜಂಟಿ ಕಾರ್ಯಾಚರಣೆ ನಡೆಸಿದರು. ಜಿಂಕೆ ನುಂಗಿ ಜಾಗ ಬಿಟ್ಟು ಕದಲದಿದ್ದ ಹಾವನ್ನು ಅತ್ಯಂತ ಸೂಕ್ಷ್ಮವಾಗಿ ಮತ್ತು ಸುರಕ್ಷಿತವಾಗಿ ಸೆರೆಹಿಡಿಯಲಾಯಿತು.

ಬಳಿಕ ಸಾರ್ವಜನಿಕರ ಆತಂಕ ದೂರ ಮಾಡಿದ ತಜ್ಞರು, ಸೆರೆಸಿಕ್ಕ ಹೆಬ್ಬಾವನ್ನು ಸುರಕ್ಷಿತವಾಗಿ ಸಮೀಪದ ಮುತ್ತತ್ತಿ ಅರಣ್ಯ ಪ್ರದೇಶಕ್ಕೆ ಕೊಂಡೊಯ್ದು ಕಾಡಿನ ಮಧ್ಯೆ ಮುಕ್ತವಾಗಿ ಬಿಟ್ಟಿದ್ದಾರೆ. ಹಾವನ್ನು ಕಾಡಿಗೆ ಬಿಟ್ಟ ನಂತರವೇ ಗ್ರಾಮಸ್ಥರು ನಿಟ್ಟುಸಿರು ಬಿಟ್ಟಿದ್ದಾರೆ.

 

 

Advertisement
Advertisement

Author
Chandravalli News
Regional Kannada Daily is a leading news paper in (Karnataka state). Which is having large number of circulation in the districts of Chitradurga, Davanagere, Bellary, Vijayanagara, Shimoga, Chikmagalur, Tumkur, Bangalore, Simultaneously published in rural districts of Bangalore
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಹಿರಿಯೂರಿನ ನಿಸ್ವಾರ್ಥ ಸೇವಕ – ಕೆಪಿಸಿಸಿ ಸದಸ್ಯ ಅಮೃತೇಶ್ವರಸ್ವಾಮಿ ಅವರ ದೂರದೃಷ್ಟಿಗೆ ಒಲಿದ ಜಲಭಾಗ್ಯಹಿರಿಯೂರು ಬರದ ನಾಡಿಗೆ ಜಲಸಂಜೀವಿನಿ: ಸಿಎಂ ಡಿ.ಕೆ ಶಿವಕುಮಾರ್ ಅವರ ಭರವಸೆಗೆ ಒಲಿದ 244 ಕೋಟಿಯ ಬೃಹತ್ ಜಲ ಯೋಜನೆ!ಕೋಟಿ ಕೋಟಿ ಅನುದಾನದ ಶಂಕುಸ್ಥಾಪನೆಗೆ 'ರಾಜಕಾಲುವೆ' ಕಂಟಕ: ಶೀಲೆಯಾಗದ ಚಿತ್ರದುರ್ಗದ ಹೈಟೆಕ್ ಬಸ್ ನಿಲ್ದಾಣದ ಕನಸು!ವರುಣನ ಕೃಪೆಗಾಗಿ ಇಪ್ಪೆಕಣಿವೆ ಭೂತರಾಯ ಸ್ವಾಮಿಗೆ ಕಾತ್ರಿಕೇನಹಳ್ಳಿ ರೈತರಿಂದ ಪೂಜೆಜಿಲ್ಲಾವಾರು ಜಿಡಿಪಿ ಪ್ರಗತಿಗೆ ವೇಗ: ನೀತಿ ಆಯೋಗದ ಸದಸ್ಯರೊಂದಿಗೆ ಸಿಎಂ ಸುದೀರ್ಘ ಚರ್ಚೆ– ಸಚಿವ ಪ್ರಿಯಾಂಕ್ ಖರ್ಗೆರಾಜ್ಯದ ಜಿಲ್ಲಾ ಜಿಡಿಪಿ ವೃದ್ಧಿಗೆ 'ಲೀಪ್' ಯೋಜನೆ: ಸಿಎಂ ಡಿ ಕೆ ಶಿವಕುಮಾರ್ ಜತೆ ನೀತಿ ಆಯೋಗದ ಸದಸ್ಯ ಕೆ.ವಿ. ರಾಜು ಚರ್ಚೆಕಾಂಗ್ರೆಸ್‌ನದ್ದು ಕೇವಲ 'ಕ್ಯಾಮೆರಾ ರಾಜಕಾರಣ', ಪ್ರಚಾರಕ್ಕಾಗಿ ಪ್ರತಿಭಟನೆ: ವಿಜಯೇಂದ್ರ ವಾಗ್ದಾಳಿಗೃಹ ಕಚೇರಿ ಕೃಷ್ಣಾದಲ್ಲಿ ಸಾರ್ವಜನಿಕರ ಅಹವಾಲು ಆಲಿಸಿದ ಡಿ.ಕೆ. ಶಿವಕುಮಾರ್ಬೆಂಗ‌ಳೂರು ಟೆಕ್ ಸಮ್ಮಿಟ್ 2026: 'ಎಐ & ಬಿಯಾಂಡ್' ಥೀಮ್ ಅನಾವರಣಗೊಳಿಸಿದ ಡಿ.ಕೆ. ಶಿವಕುಮಾರ್ಕರಾರುಗಳಿಂದ ಶೇ. 75ರಷ್ಟು ಹೂಡಿಕೆ ಸಾಕಾರಗೊಳಿಸುವುದು ನಮ್ಮ ಗುರಿ – ಸಚಿವ ಎಂ.ಬಿ. ಪಾಟೀಲ್