Web Stories
Chandravalli News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಭಗವಂತನಿಗೆ ಸಮರ್ಪಿತವಾದ- ಅಧಿಕ ಫಲ ಪಡೆಯುವ ಅಧಿಕ ಮಾಸ: ವೈ ರಾಜಾರಾಮ್

Advertisement
Advertisement

ಚಂದ್ರವಳ್ಳಿ ನ್ಯೂಸ್, ಚಳ್ಳಕೆರೆ:
ಜ್ಯೇಷ್ಠ ಅಧಿಕ ಮಾಸವು ಭಗವಂತನಿಗೆ ‌ಸಮರ್ಪಿತವಾದ-ಆಧ್ಯಾತ್ಮಿಕ ಸಾಧನೆಗಳಿಗೆ ಅಧಿಕವಾದ ಫಲ ಪಡೆಯುವ ಕಾಲ ಎಂದು ಚಳ್ಳಕೆರೆಯ ನರಹರಿನಗರದ ಶ್ರೀನರಹರಿ ಸದ್ಗುರು ಆಶ್ರಮದ ಪೀಠಾಧ್ಯಕ್ಷರಾದ ಪೂಜ್ಯ ಡಾ.ವೈ ರಾಜಾರಾಮ್ ಗುರುಗಳು ತಿಳಿಸಿದರು.

ನಗರದ ತ್ಯಾಗರಾಜನಗರದ ಸದ್ಭಕ್ತರಾದ ಶ್ರೀಮತಿ ನಂಜಮ್ಮ ಕೆಂಚಪ್ಪ ಶಿಕ್ಷಕರ ಸವಿತಾ ನಿವಾಸದಲ್ಲಿ "ಅಧಿಕ ಮಾಸ"ದ ಪ್ರಯುಕ್ತ ಶ್ರೀಶಾರದಾದೇವಿ ಸತ್ಸಂಗ ಕೇಂದ್ರದ ಸಹಯೋಗದಲ್ಲಿ ಆಯೋಜಿಸಿದ್ದ ವಿಶೇಷ ಸತ್ಸಂಗ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಭಜನೆ ನಡೆಸಿಕೊಟ್ಟ ಅವರು "ಅಧಿಕ ಮಾಸದ ವೈಶಿಷ್ಟ್ಯ"ಎಂಬ ವಿಷಯವಾಗಿ ವಿಶೇಷ ಪ್ರವಚನ ನೀಡುತ್ತಾ ಮಾತನಾಡುತ್ತಿದ್ದರು.

ಅಧಿಕ ಮಾಸವು 33 ದಿನಗಳ ಕಾಲ ಇರುತ್ತದೆ. ಈ ಮಾಸದಲ್ಲಿ ಹೆಚ್ಚು ಹೆಚ್ಚು ಯಾಜ್ಞ, ದಾನ, ತಪಸ್ಸು, ಸತ್ಕರ್ಮಗಳನ್ನು ಮಾಡುವುದರಿಂದ ಅಧಿಕವಾದ ಫಲ ಪಡೆಯಬಹುದು ಎಂದು ತಿಳಿಸಿದ ಅವರು "ವಟ ಸಾವಿತ್ರಿ ಸತ್ಯವಾನ್" ಕಥೆಯನ್ನು ಹೇಳಿ ಆಕೆಯ ಪಾತಿವ್ರತ್ಯದ ಮಹಿಮೆಯನ್ನು ವಿವರಿಸಿದರು.   

                  ಅಧಿಕ ಮಾಸದ ಪ್ರಯುಕ್ತ ಸತ್ಸಂಗ ಕೇಂದ್ರದ ಸದ್ಭಕ್ತರಿಂದ ಸಾಮೂಹಿಕ ಶ್ರೀವಿಷ್ಣು ಸಹಸ್ರನಾಮ ಪಾರಾಯಣ, ಸುನೀತಾ ಗೋಪಾಲಕೃಷ್ಣ, ಮಾಕಂಸ್ ಲಕ್ಷ್ಮೀ ಬಾಲಾಜೀ, ಗೀತಾ ಪ್ರಕಾಶ್, ವನಜಾಕ್ಷಿ ಮೋಹನ್, ಪಿ.ಎಸ್.ಮಾಣಿಕ್ಯ ಸತ್ಯನಾರಾಯಣ, ನಾಗರತ್ನಮ್ಮ ಅವರ ವಿಶೇಷ ಭಜನೆಗೆ ಶ್ರೀನಿವಾಸ ಅವರು ಡೊಲಕ್ ಸಾಥ್ ನೀಡಿದರು.

ಕುಮಾರಿ ಆರ್ ಕೀರ್ತನ ಅವರಿಂದ ಶ್ರೀಮದ್ ಭಗವದ್ಗೀತೆಯ ಜ್ಞಾನಯೋಗದ ಮೊದಲ ಹತ್ತು ಶ್ಲೋಕಗಳ ಪಠಣ ನಡೆದರೆ ಸತ್ಸಂಗದ  ಸ್ವಾಗತ-ಪರಿಚಯ ಶೋಭಾ ರಮೇಶ್ ನಡೆಸಿಕೊಟ್ಟರೆ, ಯತೀಶ್ ಎಂ ಸಿದ್ದಾಪುರ ನಿರೂಪಿಸಿದರು. ವಂದನಾರ್ಪಣೆಯನ್ನು ಗೀತಾ ಪ್ರಕಾಶ್ ಮಾಡಿದರು.

ಸತ್ಸಂಗ ಸಭೆಯಲ್ಲಿ ಎಚ್ ಲಕ್ಷ್ಮೀದೇವಮ್ಮ, ನಂಜಮ್ಮ, ಜಯಲಕ್ಷ್ಮೀ ತಿಪ್ಪಾರೆಡ್ಡಿ , ಗೀತಾ ಸತ್ಯನಾರಾಯಣರೆಡ್ಡಿ, ಸರಸ್ವತಮ್ಮ , ಗೋವಿಂದರಾಜು, ಹೃತಿಕ್, ತಿಪ್ಪಮ್ಮ , ಜಯಮ್ಮ ,ಶುಭಾ, ಪ್ರೇಮಾ, ಅನುಸೂಯ , ರಾಘವೇಂದ್ರ, ಜಿ ಯಶೋಧಾ, ಶಾಂತಮ್ಮ,ಎಂ ಲಕ್ಷ್ಮೀದೇವಮ್ಮ, ಕವಿತಾ, ಅಂಬುಜಾ, ಸುನೀತಾ, ಸರಸ್ವತಿ ರಾಜು, ವಿಶಾಲಾಕ್ಷಿ, ಸೌಮ್ಯ, ಸಂಗೀತ, ವಿಜಯಾಗುರು, ಪ್ರೇಮಲೀಲಾ, ದ್ರಾಕ್ಷಾಯಣಿ, ಮಮತಾ, ಗೀತಾ ವೆಂಕಟೇಶ್, ಅಂಬಿಕಾ ಪರಮೇಶ್ವರ್, ಸೇರಿದಂತೆ ಸಾಕಷ್ಟು ಸಂಖ್ಯೆಯಲ್ಲಿ ಸದ್ಭಕ್ತರು ಭಾಗವಹಿಸಿದ್ದರು.

 

Advertisement
Advertisement

Author
Chandravalli News
Regional Kannada Daily is a leading news paper in (Karnataka state). Which is having large number of circulation in the districts of Chitradurga, Davanagere, Bellary, Vijayanagara, Shimoga, Chikmagalur, Tumkur, Bangalore, Simultaneously published in rural districts of Bangalore
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಡಿಕೆಶಿ ಸಾಮಾಜಿಕ ನ್ಯಾಯ ಪಾಲಿಸಲಿ ಅಹಿಂದ ವರ್ಗಕ್ಕೆ ರಾಜಕೀಯ ಮನ್ನಣೆ ನೀಡಲಿ-ಎಮ್ಮೆಹಟ್ಟಿ ಹನುಮಂತಪ್ಪಸಿಎಂ ಆಗಿ ಹುಟ್ಟೂರಿಗೆ ಮೊದಲ ಭೇಟಿ: ಕನಕಪುರದಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಭವ್ಯ ಸ್ವಾಗತ, ಮೆಡಿಕಲ್ ಕಾಲೇಜಿಗೆ ಭೂಮಿಪೂಜೆ! 3,395 ಸಿವಿಲ್ ಪೊಲೀಸ್ ಕಾನ್ಸ್‌ಟೇಬಲ್ ಹುದ್ದೆಗಳ ನೇಮಕಾತಿ; ವಯೋಮಿತಿ 5 ವರ್ಷ ಸಡಿಲಿಕೆ!ಮತ್ತೆ ದುಬಾರಿಯಾದ ಅಡುಗೆ ಅನಿಲ; ಸಿಲಿಂಡರ್ ಬೆಲೆ 29 ಏರಿಕೆ!ಆನ್‌ಲೈನ್ ಗೇಮಿಂಗ್ ವ್ಯಸನ; 18 ವರ್ಷದ ಕಾಲೇಜು ವಿದ್ಯಾರ್ಥಿಯಿಂದ ಹತ್ಯೆಭಾರಿ ಮಳೆಗೆ ತುಂಬಿ ಹರಿದ ಹಳ್ಳ; ಅಪರಿಚಿತ ಮಹಿಳೆ ಶವ ಪತ್ತೆಭಗವಂತನಿಗೆ ಸಮರ್ಪಿತವಾದ- ಅಧಿಕ ಫಲ ಪಡೆಯುವ ಅಧಿಕ ಮಾಸ: ವೈ ರಾಜಾರಾಮ್ಪ್ರಿಯಾಂಕ್ ಖರ್ಗೆಗೆ ಸಿ.ಟಿ. ರವಿ ತಿರುಗೇಟು: ರಾಜ್ಯ ಸರ್ಕಾರದ ವೈಫಲ್ಯಗಳ ಪಟ್ಟಿ ಬಿಡುಗಡೆಬಿಡದಿ ಟೌನ್‌ಶಿಪ್‌ಗೆ ಭೂಮಿ ನೀಡಲ್ಲ, ಪ್ರಾಣ ಬೇಕಾದರೂ ಬಿಡ್ತೀವಿ: ರೈತರ ಪರ ಜೆಡಿಎಸ್ ಉಗ್ರ ಹೋರಾಟದ ಎಚ್ಚರಿಕೆಮೆಟ್ರೋದಲ್ಲಿ ಸಿಎಂ ಡಿ.ಕೆ. ಶಿವಕುಮಾರ್ ಸಾಮಾನ್ಯರಂತೆ ಪ್ರಯಾಣ: ಸಾರ್ವಜನಿಕರೊಂದಿಗೆ ಸಂವಾದ!