LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ನ್ಯಾಯಾಲಯಗಳಲ್ಲಿ ಮೂಲಸೌಕರ್ಯಕ್ಕೆ ಆಗ್ರಹಿಸಿ ವಕೀಲರ ಬೃಹತ್ ಧರಣಿ

Advertisement
Advertisement

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ರಾಜಧಾನಿ ಬೆಂಗಳೂರಿನ ವಿವಿಧ ನ್ಯಾಯಾಲಯಗಳಲ್ಲಿ ಸೂಕ್ತ ಮೂಲಸೌಕರ್ಯಗಳನ್ನು ಒದಗಿಸುವುದು ಹಾಗೂ ಆಡಳಿತಾತ್ಮಕ ಸಮಸ್ಯೆಗಳನ್ನು ತಕ್ಷಣವೇ ಬಗೆಹರಿಸುವಂತೆ ಒತ್ತಾಯಿಸಿ ಬೆಂಗಳೂರು ವಕೀಲರ ಸಂಘದ ವತಿಯಿಂದ ಧರಣಿ ಸತ್ಯಾಗ್ರಹ ನಡೆಸಲಾಯಿತು.

ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಸಂಘದ ಅಧ್ಯಕ್ಷ ವಿವೇಕ್‌ಸುಬ್ಬಾರೆಡ್ಡಿ, "ನ್ಯಾಯಾಲಯಗಳ ಗಂಭೀರ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಹೈಕೋರ್ಟ್‌ರಿಜಿಸ್ಟ್ರಿ ಯಾವುದೇ ಸೂಕ್ತ ಕ್ರಮ ಕೈಗೊಂಡಿಲ್ಲ.

ಹೈಕೋರ್ಟ್‌ನಲ್ಲಿ ಹೊಸ ಪ್ರಕರಣಗಳ ವಿಚಾರಣೆಗೆ ಸರಿಯಾದ ದಿನಾಂಕಗಳು ಸಿಗದೆ ವಿಳಂಬವಾಗುತ್ತಿದ್ದು, ಇದರಿಂದ ದಾವೆದಾರರು ಮತ್ತು ಕಕ್ಷಿದಾರರು ತೀವ್ರ ಸಂಕಷ್ಟ ಎದುರಿಸುತ್ತಿದ್ದಾರೆ," ಎಂದು ಆಕ್ರೋಶ ಹೊರಹಾಕಿದರು.
ಖಾಲಿ ಇರುವ ನ್ಯಾಯಾಧೀಶರ ಹುದ್ದೆಗಳು:
ಬೆಂಗಳೂರು ನಗರ ಸಿವಿಲ್ ಕೋರ್ಟ್‌ನಲ್ಲಿ ಬರೋಬ್ಬರಿ 25 ನ್ಯಾಯಾಧೀಶರ ಹುದ್ದೆಗಳು ಖಾಲಿ ಇವೆ. ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ ನ್ಯಾಯಾಧೀಶರಿಗೇ ಹೆಚ್ಚುವರಿ ಉಸ್ತುವಾರಿ ನೀಡುತ್ತಿರುವುದರಿಂದ ಎರಡೂ ನ್ಯಾಯಾಲಯಗಳ ದೈನಂದಿನ ಕಲಾಪಗಳಿಗೆ ತೀವ್ರ ಅಡ್ಡಿಯಾಗುತ್ತಿದೆ.

ಮನವಿಗೆ ಸ್ಪಂದಿಸದ ರಿಜಿಸ್ಟ್ರಿ:
ಹೈಕೋರ್ಟ್, ಸಿಟಿ ಸಿವಿಲ್ ಕೋರ್ಟ್‌, ಮ್ಯಾಜಿಸ್ಟ್ರೇಟ್ ಹಾಗೂ ಮೇಯೊ ಹಾಲ್ ಕೋರ್ಟ್‌ಗಳ ಮೂಲಸೌಕರ್ಯಗಳ ಕೊರತೆಯ ಬಗ್ಗೆ ವಕೀಲರ ಸಂಘವು 2026ರ ಏಪ್ರಿಲ್‌ನಲ್ಲೇ ಪತ್ರ ಬರೆದಿತ್ತು. ತದನಂತರ ಹಲವು ಬಾರಿ ನೆನಪಿಸಿದರೂ ಹೈಕೋರ್ಟ್ ರಿಜಿಸ್ಟ್ರಿಯಿಂದ ಯಾವುದೇ ಸಕಾರಾತ್ಮಕ ಪ್ರತಿಕ್ರಿಯೆ ಬಂದಿಲ್ಲ ಎಂದು ಅಧ್ಯಕ್ಷರು ತಿಳಿಸಿದರು.

ಮೆಟ್ಟಿಲೇರಿ ಹೋಗಬೇಕಾದ ಅನಿವಾರ್ಯತೆ:
ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ಹೊಸ ಕಟ್ಟಡದಲ್ಲಿ ಕೇವಲ ಒಂದೇ ಲಿಫ್ಟ್ ಕಾರ್ಯಾಚರಿಸುತ್ತಿರುವುದರಿಂದ, ವಕೀಲರು ಹಾಗೂ ವಯೋವೃದ್ಧ ಕಕ್ಷಿದಾರರು ಅನಿವಾರ್ಯವಾಗಿ 7ನೇ ಮಹಡಿಯವರೆಗೆ ಮೆಟ್ಟಿಲುಗಳನ್ನು ಹತ್ತಿ ಹೋಗುವಂತಾಗಿದೆ.

ವಕೀಲರಿಗೆ ಅಗೌರವ:
ಕೆಲವು ನ್ಯಾಯಮೂರ್ತಿಗಳು ವಕೀಲರನ್ನು ಅಗೌರವದಿಂದ ನಡೆಸಿಕೊಳ್ಳುತ್ತಿದ್ದು, ಈ ಎಲ್ಲಾ ಸಮಸ್ಯೆಗಳಿಗೆ ರಿಜಿಸ್ಟ್ರಿ ತಕ್ಷಣವೇ ಶಾಶ್ವತ ಪರಿಹಾರ ಕಂಡುಕೊಳ್ಳಬೇಕು ಎಂದು ಮನವಿ ಮಾಡಿದರು.
ಈ ಧರಣಿ ಪ್ರತಿಭಟನೆಯಲ್ಲಿ ಬೆಂಗಳೂರು ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ಎಚ್‌.ವಿ. ಪ್ರವೀಣ್‌ಗೌಡ, ಉಪಾಧ್ಯಕ್ಷ ಸಿ.ಎಸ್‌. ಗಿರೀಶ್‌ಕುಮಾರ್, ಖಜಾಂಚಿ ಶ್ವೇತಾ ರವಿಶಂಕರ್‌ಸೇರಿದಂತೆ ನೂರಾರು ವಕೀಲರು ಭಾಗವಹಿಸಿ ಬೆಂಬಲ ಸೂಚಿಸಿದರು.

Advertisement
Advertisement

Author
Chandravalli News
Regional Kannada Daily is a leading news paper in (Karnataka state). Which is having large number of circulation in the districts of Chitradurga, Davanagere, Bellary, Vijayanagara, Shimoga, Chikmagalur, Tumkur, Bangalore, Simultaneously published in rural districts of Bangalore
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭರಮಗಿರಿ ಕೆರೆ ಭಾಗದ ಸುತ್ತಮುತ್ತಲಿನ ಪ್ರದೇಶಗಳಿಗೆ ನೀರಿನ ಸಮಸ್ಯೆ ಪರಿಹಾರಕ್ಕೆ ₹1.25 ಕೋಟಿ ಅನುದಾನ ಕೋರಿ ಮನವಿಪತ್ರ ಸಲ್ಲಿಸಿದ ಸುಹಾಸ್ ಸುಧಾಕರ್ಮುದ್ದನಾಯ್ಕನಪಾಳ್ಯ ಗ್ರಾಮಕ್ಕೆ ಜಿಲ್ಲಾ ಪಂಚಾಯ್ತಿ ಸಿಇಒ ದಿಢೀರ್ ಭೇಟಿ ದೊಡ್ಡ ತುಮಕೂರು, ಕೊಡಿಗೇಹಳ್ಳಿ ಗ್ರಾಪಂಗೆ ಡಾ. ವಾಸಂತಿ ಅಮರ್ ದಿಢೀರ್ ಭೇಟಿಶಿರಾ–ಬಡವನಹಳ್ಳಿ ಚತುಷ್ಪಥ ರಸ್ತೆ ಕಾಮಗಾರಿಗೆ ಗ್ರೀನ್ ಸಿಗ್ನಲ್: ಕೇವಲ 4 ಗಂಟೆಗೆ ತಿರುಪತಿ ತಲುಪಲು ಸಾಧ್ಯ–ಸೋಮಣ್ಣಪಿಜಿಯಲ್ಲಿ ಗ್ಯಾಸ್ ಸಿಲಿಂಡರ್ ಸ್ಫೋಟ –10 ಮಂದಿಗೆ ಗಂಭೀರ ಗಾಯಬರ ಎದುರಿಸಲು ಸರ್ಕಾರ ಸಿದ್ಧ: ಡಿಸಿಎಂ ಜಿ. ಪರಮೇಶ್ವರ್ಪ್ರಶ್ನೆ ಪತ್ರಿಕೆ ಸೋರಿಕೆ ದೇಶದ ಭವಿಷ್ಯದ ವಿಚಾರ, ಬಿಜೆಪಿಯವರು ವೈಫಲ್ಯ ಒಪ್ಪಿಕೊಳ್ಳಲಿ: ಸಿಎಂ ಡಿ.ಕೆ. ಶಿವಕುಮಾರ್ ಆಗ್ರಹನೀಟ್‌ ಪತ್ರಿಕೆ ಸೋರಿಕೆ: ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಗೆ ವಿಶೇಷ ಫಾಸ್ಟ್‌ಟ್ರ್ಯಾಕ್ ನ್ಯಾಯಾಲಯ– ಪ್ರಧಾನಿ ಮೋದಿ ಘೋಷಣೆಸೆಮಿಕಂಡಕ್ಟರ್ ವಲಯದಲ್ಲಿ ಕರ್ನಾಟಕದ ಬೃಹತ್ ಜಿಗಿತ': ಸಚಿವ ಎಂ.ಬಿ ಪಾಟೀಲ್'ದೆಹಲಿಯಲ್ಲಿ ಸಂವಿಧಾನದ ಪಾಠ, ರಾಜ್ಯದಲ್ಲಿ ಗೂಂಡಾಗಿರಿ: ಕಾಂಗ್ರೆಸ್‌ ಮೌನಕ್ಕೆ ಅಶೋಕ್ ತೀವ್ರ ತರಾಟೆ'