ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ಬಿಮಾ (ವಿಮಾ) ಯೋಜನೆಯಡಿ 2026-27ನೇ ಸಾಲಿನ ಮುಂಗಾರು ಹಂಗಾಮಿನ ತೋಟಗಾರಿಕೆ ಬೆಳೆಗಳಾದ ಮಳೆಯಾಶ್ರಿತ ಈರುಳ್ಳಿ, ನೀರಾವರಿ ಈರುಳ್ಳಿ, ಮಳೆಯಾಶ್ರಿತ ಟೊಮ್ಯಾಟೋ ಮತ್ತು ಕೆಂಪು ಮೆಣಸಿನಕಾಯಿ ವಿಮಾ ನೋಂದಣಿ ಪ್ರಕ್ರಿಯೆ ಪ್ರಾರಂಭವಾಗಿದೆ.
ಜಿಲ್ಲೆಯ ವಿವಿಧ ತಾಲೂಕುಗಳಿಗೆ ಬೆಳೆಗಳನ್ನು ಅಧಿಸೂಚಿಸಲಾಗಿದೆ. ಹೋಬಳಿಗಳಲ್ಲಿ ಇಫೆÇ್ಕ ಟೋಕಿಯೋ ಜನರಲ್ ಇನ್ಸೂರೆನ್ಸ್ ಕಂಪನಿಯ ಮೂಲಕ ಈ ಯೋಜನೆಯನ್ನು ಅನುಷ್ಠಾನಗೊಳಿಸಲಾಗುತ್ತಿದೆ.ನೀರಾವರಿ ಈರುಳ್ಳಿ ಬೆಳೆಗೆ ಜುಲೈ 15 ಮತ್ತು ಉಳಿದ ಅಧಿಸೂಚಿತ ಬೆಳೆಗಳ ನೋಂದಣಿಗೆ ಜುಲೈ 31 ಕೊನೆಯ ದಿನಾಂಕವಾಗಿರುತ್ತದೆ.
ಟೊಮ್ಯಾಟೋ ಬೆಳೆಗೆ ಶೇಕಡಾ 90 ರಷ್ಟು ಇಂಡೆಮ್ಮಿಟಿ ಮಟ್ಟವಿದ್ದು, ಪ್ರತಿ ಹೆಕ್ಟೇರ್‍ಗೆ 1,69,800 ರೂ. ವಿಮಾ ಮೊತ್ತ ನಿಗದಿಯಾಗಿದೆ. ಇದಕ್ಕೆ ರೈತರು ಶೇ.5 ರಂತೆ 8,490 ರೂ. ವಿಮಾ ಕಂತು ಪಾವತಿಸಬೇಕು.
ನೀರಾವರಿ ಈರುಳ್ಳಿ ಬೆಳೆಗೆ ಶೇ.90 ರಷ್ಟು ಇಂಡೆಮ್ಮಿಟಿ ಮಟ್ಟವಿದ್ದು, 93,900 ರೂ. ವಿಮಾ ಮೊತ್ತಕ್ಕೆ ರೈತರ ಕಂತು 4,695 ರೂ. ಆಗಿರುತ್ತದೆ.
ಮಳೆಯಾಶ್ರಿತ ಈರುಳ್ಳಿ ಬೆಳೆಗೆ ಶೇ.80 ರಷ್ಟು ಇಂಡೆಮ್ಮಿಟಿ ಮಟ್ಟ ಹಾಗೂ 85,600 ರೂ. ವಿಮಾ ಮೊತ್ತವಿದ್ದು, ರೈತರು 4,280 ರೂ. ಪಾವತಿಸಬೇಕಾಗುತ್ತದೆ.
ಮಳೆಯಾಶ್ರಿತ ಕೆಂಪು ಮೆಣಸಿನಕಾಯಿ ಬೆಳೆಗೆ ಶೇ.80 ರಷ್ಟು ಇಂಡೆಮ್ಮಿಟಿ ಮಟ್ಟವಿದ್ದು, 90,800 ರೂ. ವಿಮಾ ಮೊತ್ತಕ್ಕೆ ಪ್ರತಿಯಾಗಿ ರೈತರು ಶೇ.5 ರಂತೆ 4,540 ರೂ. ವಿಮಾ ಕಂತನ್ನು ಕಟ್ಟಬೇಕಾಗುತ್ತದೆ.
ಅರ್ಹ ರೈತರು ನಿಗದಿತ ಅವಧಿಯೊಳಗೆ ತಮ್ಮ ಹತ್ತಿರದ ಬ್ಯಾಂಕುಗಳು, ಸಾಮಾನ್ಯ ಸೇವಾ ಕೇಂದ್ರಗಳು ಅಥವಾ ಗ್ರಾಮ ಒನ್ ಕೇಂದ್ರಗಳಲ್ಲಿ ವಿಮೆಯನ್ನು ನೋಂದಾಯಿಸಿಕೊಳ್ಳಬಹುದು. ಹೆಚ್ಚಿನ ಮಾಹಿತಿ ಹಾಗೂ ಮಾರ್ಗದರ್ಶನಕ್ಕಾಗಿ ತೋಟಗಾರಿಕೆ ಇಲಾಖೆಯ ಕಚೇರಿ ಸಂಪರ್ಕಿಸಬಹುದು ತೋಟಗಾರಿಕೆ ಇಲಾಖೆಯ ಜಂಟಿ ನಿರ್ದೇಶಕಿ ಜಿ.ಸವಿತಾ ಮನವಿ ಮಾಡಿದ್ದಾರೆ.



