E-PAPER
19 Nov 2026, 12:42:26 AM|
Gold₹13444/gGold24K ₹13,444/g - 22K ₹12,313/gTap for full details
Press ID & Credential Portal
Apply / Verify  ➔
Advertisement
LIVE TV LocalCrimeNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
Districts Bangalore Rural

ಗ್ರಾಮೀಣ ಜನರ ಆಡು ಭಾಷೆಯೇ ಜಾನಪದ ಸಾಹಿತ್ಯಗಳು:ಜಿ. ಸುರೇಶ್

ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ಜನಪದ ಸಾಹಿತ್ಯವು ಸಾಮಾನ್ಯ ಜನರ ಬದುಕಿನ ಕನ್ನಡಿಯಾಗಿದ್ದು, ಅವರ ನೋವು, ನಲಿವು, ಪ್ರೀತಿ ಮತ್ತು ದುಡಿಮೆಯ ನೈಜ ಭಾವನೆಗಳ ಮಿಡಿತವಾಗಿದೆ. ಯಾವುದೇ ಪಾಂಡಿತ್ಯದ ಹಂಗಿಲ್ಲದೆ, ಹಳ್ಳಿಗಾಡಿನ ಜನರ ಬಾಯಿಂದ ಬಾಯಿಗೆ ಹರಿದುಬಂದ ಈ ಸಾಹಿತ್ಯವು ಜನಸಾಮಾನ್ಯರ ಅಂತರಾಳದ ಧ್ವನಿಯಾಗಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ತು ಕೋಶಾಧ್ಯಕ್ಷ ಜಿ.ಸುರೇಶ್   ತಿಳಿಸಿದರು.

 ದೊಡ್ಡಬಳ್ಳಾಪುರ ನಗರದ ಸರಸ್ವತಿ ಪ್ರೌಢಶಾಲೆಯಲ್ಲಿ ನಡೆದ ಸಾಹಿತ್ಯ ವಿಜ್ಞಾನ ಸಂಸ್ಕೃತಿ ಸಮಾಗಮ ಕಾರ್ಯಕ್ರಮದಲ್ಲಿ  ಜನಪದ ಸಾಹಿತ್ಯದಲ್ಲಿ‌ ಮಾನವೀಯ ಮೌಲ್ಯಗಳು  ಎಂಬ ವಿಷಯ ಕುರಿತು  ಅವರು ಮಾತನಾಡಿ

 ಗ್ರಾಮೀಣ ಜನರ ದೈನಂದಿನ ಬದುಕಿನ ಅನುಭವಗಳ  ಆಡು ಮಾತಿನ ರೂಪವೇ ಜನಪದ ಸಾಹಿತ್ಯವಾಗಿದೆ.  ಕನ್ನಡಿಗರು ಅಪ್ರತಿಮ ಪ್ರತಿಭಾವಂತರು ಎಂಬುದಕ್ಕೆ ಜನಪದ ಸಾಹಿತ್ಯ ಸಾಕ್ಷಿಯಾಗಿದೆ. ಜನಪದ ಸಾಹಿತ್ಯವು  ನೈತಿಕ ಮೌಲ್ಯಗಳ ಭಂಡಾರವಾಗಿದೆ ಎಂದರು.

     ಮಾನವನ ಬದುಕಿಗೆ ಅಗತ್ಯವಿರುವ ಮಾನವೀಯ ಮೌಲ್ಯಗಳು ಹಾಗೂ ಅನುಭವದ ಪಾಠಗಳನ್ನು  ಜನಪದ ಸಾಹಿತ್ಯ  ಪ್ರಕಾರಗಳು ನೀಡುತ್ತವೆ. ಪ್ರೀತಿ, ಕರುಣೆ, ಸಹಕಾರ, ಮಾನವೀಯ ಅಂತಃಕರಣ ಮೊದಲಾದ ಭಾವನೆಗಳನ್ನು ಸಮಾಜದಲ್ಲಿ  ಮೂಡಿಸಿ ಮಾನವೀಯ ಸಂಬಂಧಗಳನ್ನು ಗಟ್ಟಿಗೊಳಿಸುತ್ತದೆ. ಜನಪದ ಸಾಹಿತ್ಯ ನಮ್ಮನಾಡಿನ ಸಂಸ್ಕೃತಿಯ ಪ್ರತಿಬಿಂಬವಾಗಿದೆ.  ಆಧುನಿಕರಣ,  ಜಾಗತೀಕರಣ ಪ್ರಭಾವದಿಂದ ಜನಪದ ಪರಂಪರೆ ನಶಿಸುವ ಭೀತಿಯಲ್ಲಿದೆ. ಜನಪದ ಸಾಹಿತ್ಯದ ಶ್ರೀಮಂತಿಕೆಯನ್ನು ಇಂದಿನ  ಪೀಳಿಗೆಯರಿಗೆ  ಪರಿಚಯ ಮಾಡಿಕೊಡುವುದು ಅಗತ್ಯವಾಗಿದೆ ಎಂದು ಅಭಿಪ್ರಾಯಪಟ್ಟರು.

               ಕೃತಕ ಬುದ್ಧಿಮತ್ತೆ   ಮತ್ತು ಭವಿಷ್ಯದ ಹೊಸ ಜಗತ್ತು ಎಂಬ ವಿಷಯವನ್ನು ಕುರಿತು  ಪ್ರಾಧ್ಯಾಪಕ ಡಾ. ಕೆ.ಸುನಿಲ್ ಕುಮಾರ್ ಮಾತನಾಡಿ ಕೃತಕ ಬುದ್ಧಿಮತ್ತೆ ಮಾನವನ ಅದ್ಭುತ ಸೃಷ್ಟಿಯಾಗಿದೆ.  ಆಧುನಿಕ ಜಗತ್ತಿನ ಎಲ್ಲಾ ಕ್ಷೇತ್ರಗಳನ್ನು ಆವರಿಸಿಕೊಂಡಿದೆ. ಕೃಷಿ, ಆರೋಗ್ಯ, ರಕ್ಷಣೆ,ವ್ಯಾಪಾರ, ಸಂಪರ್ಕ, ಶಿಕ್ಷಣ ಹೀಗೆ ಎಲ್ಲೆಡೆಯೂ ಆಧುನಿಕ ತಂತ್ರಜ್ಞಾನ ತನ್ನ ಗಾಢ ಪ್ರಭಾವ ಬೀರಿದೆ. ದೈನಂದಿನ ಜೀವನದಲ್ಲಿ ಕೃತಕ ಬುದ್ಧಿಮತ್ತೆ ಗಮನಾರ್ಹ ಪಾತ್ರ ವಹಿಸುತ್ತಿದೆ. ವಿದ್ಯಾರ್ಥಿಗಳು ಆಧುನಿಕ ತಂತ್ರಜ್ಞಾನವನ್ನು ಅರಿತು ಸದ್ಬಳಕೆ ಮಾಡಿಕೊಳ್ಳಬೇಕು‌ ಎಂದರು.

     ಸರಸ್ವತಿ ವಿದ್ಯಾಸಂಸ್ಥೆಯ  ಅಧ್ಯಕ್ಷ  ಎ. ಸುಬ್ರಹ್ಮಣ್ಯ ಮಾತನಾಡಿ ದೊಡ್ಡಬಳ್ಳಾಪುರ ತಾಲ್ಲೂಕು ಕನ್ನಡಪರ ಹೋರಾಟಗಳ ತವರೂರು ಆಗಿದೆ.   ದೊಡ್ಡಬಳ್ಳಾಪುರಕ್ಕೆ  ಡಾ. ರಾಜಕುಮಾರ್, , ಕುವೆಂಪು, ಶಿವರಾಮಕಾರಂತ  ಮುಂತಾದ ಮಹನೀಯರು  ಭೇಟಿ   ನೀಡಿ‌ ಕನ್ನಡ ಪ್ರೇಮಿಗಳಿಗೆ ಸ್ಫೂರ್ತಿ ನೀಡಿದ್ದಾರೆ.  ಇಂದಿನ ಮಕ್ಕಳು ಕನ್ನಡತನವನ್ನು ಮೈಗೂಡಿಸಿಕೊಳ್ಳಬೇಕು. ಪುಸ್ತಕಗಳನ್ನು ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು ಎಂದರು.

 ಕಾರ್ಯಕ್ರಮದಲ್ಲಿ ಕನ್ನಡ ಜಾಗೃತಿ ಪರಿಷತ್ತಿನ ಗೌರವ ಕಾರ್ಯದರ್ಶಿ ಡಿ.ಪಿ. ಆಂಜನೇಯ,  ಶಾಲೆಯ ಮುಖ್ಯಶಿಕ್ಷಕ ಬಿ.ಕೆ. ಸಂಪತ್ ಕುಮಾರ್, ವಸತಿ ಶಾಲೆಯ ಮೇಲ್ವಿಚಾರಕ ಸಿ. ಅಣ್ಣಯ್ಯ, ಕನ್ನಡ ಜಾಗೃತ ಪರಿಷತ್ತಿನ ಪದಾಧಿಕಾರಿಗಳಾದ ಜಿ.ಸಿ. ಶಿವಕುಮಾರ್, ಸೂರ್ಯನಾರಾಯಣ್, ಕಲಾವಿದರಾದ ವೆಂಕಟೇಶ್, ದರ್ಗಾ ಜೋಗಿಹಳ್ಳಿ ಮಲ್ಲೇಶ್, ನಾಗರತ್ನಮ್ಮ,  ಸಫೀರ್  ಮತ್ತು ಶಾಲೆಯ ಶಿಕ್ಷಕರು, ವಿದ್ಯಾರ್ಥಿಗಳು ಭಾಗವಹಿಸಿದ್ದರು.

Author
Chandravalli News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಕೊಡಿಗೇಹಳ್ಳಿ ಗ್ರಾಮದ ಜಮೀನುಗಳನ್ನು ಭೂ ಸ್ವಾದಿನ ಪ್ರಕ್ರಿಯೆ ಯಿಂದ ಕೈ ಬಿಡಲು ರೈತರ ಆಗ್ರಹಗ್ರಾಮೀಣ ಜನರ ಆಡು ಭಾಷೆಯೇ ಜಾನಪದ ಸಾಹಿತ್ಯಗಳು:ಜಿ. ಸುರೇಶ್ ಎಐ, ಸೆಮಿಕಂಡಕ್ಟರ್ ಮತ್ತು ಬಯೋಟೆಕ್ ಕ್ಷೇತ್ರಗಳಲ್ಲಿ ಕರ್ನಾಟಕವನ್ನು ಜಾಗತಿಕ ಕೇಂದ್ರವನ್ನಾಗಿಸುವ ಗುರಿ: ಸಿಎಂನೀರಾವರಿ ತಾರತಮ್ಯ ಆರೋಪ: ರಾಜೀನಾಮೆ ಎಚ್ಚರಿಕೆ ನೀಡಿದ ಹೊನ್ನಾಳಿ ಶಾಸಕ ಶಾಂತನಗೌಡಡಿ.03 ಮತ್ತು 04ರಂದು ಮಾರಮ್ಮ ದೇವಿಯ ದೇವಸ್ಥಾನ ಉದ್ಘಾಟನೆ ಹಾಗೂ ವಿಗ್ರಹ ಪ್ರತಿಷ್ಠಾಪನೆಯಡಿಯೂರಪ್ಪ ಜೈಲಿಗೆ ಹೋಗಿದ್ದೇಕೆ?; ರಾಘವೇಂದ್ರ, ವಿಜಯೇಂದ್ರ ಜನರಿಗೆ ಹೇಳಲಿ: ಮಧು ಬಂಗಾರಪ್ಪಗ್ರಾಮ ಪಂಚಾಯಿತಿ ಅನುದಾನ ಬಾಕಿ: ಕೇಂದ್ರದ ವಿರುದ್ಧ ಸುಪ್ರೀಂ ಮೆಟ್ಟಿಲೇರಲು ನಿರ್ಧಾರಗುಂಡೇಟಿನಿಂದ ವ್ಯಕ್ತಿಯ ನಿಗೂಢ ಸಾವು: ಕೊಲೆಯೋ, ಆತ್ಮಹತ್ಯೆಯೋ? ತನಿಖೆ ಚುರುಕುಚಾಲಕನಿಗೆ ತಲೆಸುತ್ತು: ನಿಯಂತ್ರಣ ತಪ್ಪಿ ಕಾಂಪ್ಲೆಕ್ಸ್‌ನತ್ತ ನುಗ್ಗಿದ ಬಸ್!ಚಿನ್ನದ ರಥ ನಿರ್ಮಾಣ, ಸ್ಥಳೀಯ ಅಭಿವೃದ್ಧಿ ಹಾಗೂ ಮೈತ್ರಿ ಚುನಾವಣೆ ಬಗ್ಗೆ ಕುಮಾರಸ್ವಾಮಿ ಮಹತ್ವದ ಹೇಳಿಕೆ