ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ಸಮಾಜ ಸೇವೆ ಎಂದರೆ ಯಾವುದೇ ಪ್ರತಿಫಲ, ಲಾಭ ಅಥವಾ ಕೀರ್ತಿಯನ್ನು ಬಯಸದೆ, ಸುತ್ತಮುತ್ತಲಿನ ಜನರ ಅನುಕೂಲ ಹಾಗೂ ಕಲ್ಯಾಣಕ್ಕಾಗಿ ನಿಸ್ವಾರ್ಥವಾಗಿ ಮಾಡುವ ಕೆಲಸ. "ಜನಸೇವೆಯೇ ಜನಾರ್ಧನನ ಸೇವೆ" ಎಂಬ ನಾಣ್ಣುಡಿಯಂತೆ,ಉತ್ತಮ ಸೇವೆಗಾಗಿ 76ನೇ ಕನ್ನಡ ರಾಜ್ಯೋತ್ಸವದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯ ವತಿಯಿಂದ ತಾಲೂಕು ಮಟ್ಟದಲ್ಲಿ ನೀಡಲಾಗುವ ಪ್ರತಿಷ್ಠಿತ ಡಾ. ವೆಂಕಟರೆಡ್ಡಿ ಪ್ರಶಸ್ತಿಗೆ ಭಾಜನರಾದ ಮೇಜರ್ ಮಹಾಬಲೇಶ್ವರ ಅವರನ್ನು ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣ್ ಕುಮಾರ್ ಶೆಟ್ಟಿ ಬಣದ ದೊಡ್ಡಬಳ್ಳಾಪುರ ತಾಲೂಕು ಘಟಕದ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಅಭಿನಂದಿಸಿ ಗೌರವಿಸಿದರು.
ಈ ಸಂದರ್ಭದಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯ ತಾಲೂಕು ಅಧ್ಯಕ್ಷ ಹಮಾಮ್ ವೆಂಕಟೇಶ್, ಜಿಲ್ಲಾ ಉಪಾಧ್ಯಕ್ಷ ಎಸ್.ಎಲ್.ಎನ್. ವೇಣು, ತಾಲೂಕು ಪ್ರಧಾನ ಕಾರ್ಯದರ್ಶಿ ಶ್ರೀನಗರ ಬಶೀರ್, ಕಾರ್ಯಾಧ್ಯಕ್ಷ ಜೋಗಿಹಳ್ಳಿ, ಕಾನೂನು ಸಲಹೆಗಾರ ಆನಂದ್, ಉಪಾಧ್ಯಕ್ಷರಾದ ಆನಂದ್, ಮಂಜುನಾಥ್, ಮುಖ್ಯನಹಳ್ಳಿ ರವಿ, ಅಮರನಾಥ್, ರಾಮ, ಮಡಿವಾಳ ಮುನಿಕೃಷ್ಣ, ದಾದಾಪೀರ್ ಸೇರಿದಂತೆ ಹಲವು ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಹಾಜರಿದ್ದರು.




