ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ಅಂತಿಮ ವರ್ಷದ ಬಿಇಡಿ ಪ್ರಶಿಕ್ಷಣಾರ್ತಿಗಳ ಬೀಳ್ಕೊಡಿಗೆ ಕಾರ್ಯಕ್ರಮ ಲಾವಣ್ಯ ವಿದ್ಯಾಸಂಸ್ಥೆಯಲ್ಲಿ ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಸಂಸ್ಥೆಯ ಅದ್ಯಕ್ಷೆ ಯಶೋಧಮ್ಮ ಹನುಮಂತೇಗೌಡ ಸಮಾಜದಲ್ಲಿ ಬಿಇಡಿ ವಿದ್ಯಾರ್ಥಿಗಳ ಪಾತ್ರ ತುಂಬಾ ಮಹತ್ವವಾದದ್ದು. ಏಕೆಂದರೆ ನೀವುಗಳು ಮುಂದಿನ ದಿನಗಳಲ್ಲಿ ಹಲವಾರು ಶಾಲೆಗಳ ಶಿಕ್ಷಕರಾಗಿ ತಮ್ಮ ವೃತ್ತಿಯನ್ನು ಪ್ರಾರಂಬಿಸಲಿದ್ದೀರಿ. ನೀವುಗಳು ನೂರಾರು ವಿದ್ಯಾರ್ಥಿಗಳ ಭವಿಷ್ಯ ತಮ್ಮ ಕೈಯಲ್ಲಿರುತ್ತದೆ.ಅದುದರಿಂದ ಸಮಾಜದಲ್ಲಿ ಉತ್ತಮ ವಿದ್ಯಾರ್ಥಿಗಳ ಸೃಷ್ಟಿಯು ತಮ್ಮ ಜವಾಬ್ದಾರಿಯಾಗಿರುತ್ತದೆ. ಅದುದರಿಂದ ತಾವುಗಳು ಮಾದರಿಯಾಗಿರಬೇಕಾಗುತ್ತದೆ ಎಂದು ಹೇಳಿದರು.
ಸಂಸ್ಥೆಯ ಗೌರವ ಕಾರ್ಯದರ್ಶಿ ಹಾಗೂ ಟಿಎಪಿಎಂಸಿಎಸ್ ನಿರ್ದೇಶಕ ವಿಶ್ವಾಸ್ ಹನುಮಂತೇಗೌಡ ಮಾತನಾಡಿ ಎಐ ಯುಗದಲ್ಲಿ ಮೊಬೈಲ್ ಜಾಲದಿಂದ ಮಕ್ಕಳನ್ನು ಹೊರತಂದು ಅವರು ಪುಸ್ತಕದಲ್ಲಿ ತಮ್ಮನ್ನು ತಾವು ತೊಡಗಿ ಕೊಳ್ಳುವಂತೆ ಮಾಡುವ ಜವಾಬ್ದಾರಿ ತಮ್ಮಗಳ ಮೇಲೆ ಇದೆ. ತಾವುಗಳು ತಮ್ಮ ವೃತ್ತಿ ಜೀವನದಲ್ಲಿ ಉತ್ತಮ ಪ್ರಗತಿ ಪರ ಶಿಕ್ಷಕರಾಗಿ ಸಂಸ್ಥೆಗೆ ಮತ್ತು ಸಮಾಜಕ್ಕೆ ಉತ್ತಮ ಸಂದೇಶ ಸಾರಬೇಕಾಗಿದೆ. ಶಿಕ್ಷಣ ಕ್ಷೇತ್ರದಲ್ಲಿ ಸಾಕಷ್ಟು ಪ್ರಗತಿಯನ್ನು ಸಾದಿಸಿ ಎಂದು ಪ್ರಶಿಕ್ಷಣಾರ್ತಿಗಳಿಗೆ ಕಿವಿ ಮಾತು ಹೇಳಿದರು.
ಕಾರ್ಯಕ್ರಮದಲ್ಲಿ ಬಿಇಡಿ ಕಾಲೇಜು ಪ್ರಾಂಶುಪಾಲ ಪ್ರೋ. ಜಿ. ಕೃಷ್ಣಮೂರ್ತಿ, ಪದವಿ ಪೂರ್ವ ಮತ್ತು ಪದವಿ ಕಾಲೇಜು ಪ್ರಾಂಶುಪಾಲ ಎಂ. ಸಿ. ಮಂಜುನಾಥ್,
ಹಿರಿಯ ಉಪನ್ಯಾಸಕರಾದ ಪ್ರಕಾಶ್. ಲತಾ ಮತ್ತು ಪ್ರಥಮ ಮತ್ತು ದ್ವಿತೀಯ ಬಿಇಡಿ ಪ್ರಶಿಕ್ಷಣಾರ್ತಿಗಳು ಬಾಗವಹಿಸಿದ್ದರು. ಕಾರ್ಯಕ್ರಮದ ನಂತರ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು.




