ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ಬಹುದಿನಗಳಿಂದ ತೂಬಗೆರೆ ಯಿಂದ ಮಂಚೇನಹಳ್ಳಿಗೆ ಸಂಪರ್ಕ ಕಲ್ಪಿಸುವ ತಾಲ್ಲೂಕು ಹೆದ್ದಾರಿ ಹಾಳಾಗಿದ್ದು ಹಳ್ಳ ಗುಂಡಿಗಳಿoದಾಗಿ ವಾಹನ ಸವಾರರ ಪ್ರಾಣಕ್ಕೆ ಅತ್ಯಂತ ಅಪಾಯಕಾರಿ ಮತ್ತು ತೊಂದರೆಯಿಂದ ಅಪಘಾತಗಳು ಸಂಭವಿಸುವ ತೀವ್ರತೆ ಹೆಚ್ಚಾಗಿತ್ತು. ಈ ರಸ್ತೆ
ದಶಕಗಳಿಂದ ನೆನೆಗುದಿಗೆ ಬಿದ್ದಿದ್ದು ಇಂದು ಜಿಲ್ಲಾ ಉಸ್ತುವಾರಿ ಮಂತ್ರಿ ಕೆ. ಹೆಚ್. ಮುನಿಯಪ್ಪನವರು ರಸ್ತೆ ಕಾಮಗಾರಿಗೆ ಗುದ್ದಲಿ ಪೂಜೆ ನೇರವೇರಿಸುವ ಹೋಬಳಿಯ ಜನರ ಕನಸು ನೆನಸಾಗಿದೆ.
ತೂಬಗೆರೆ ಯಿಂದ ಮುಕ್ಕಡಿಘಟ್ಟ ಗ್ರಾಮದ ರಸ್ತೆ ಕಾಮಗಾರಿಗೆ 12 ಕೋಟಿ ರೂಗಳ ವೆಚ್ಚದಲ್ಲಿ 9.8 ಕಿ.ಮೀ ರಸ್ತೆಗೆ ಸಮಾಜ ಕಲ್ಯಾಣ ಇಲಾಖೆ ಸಚಿವ ಹಾಗು ಜಿಲ್ಲಾ ಉಸ್ತವಾರಿ ಸಚಿವ ಕೆ.ಎಚ್.ಮುನಿಯಪ್ಪ ಡಾಂಬರಿಕರಣಕ್ಕೆ ಚಾಲನೆ ನೀಡಿದರು.
ನಂತರ ಅವರು ದೊಡ್ಡಬಳ್ಳಾಪುರ ತಾಲ್ಲೂಕಿನ ತೂಬಗೆರೆ ಹೋಬಳಿಯ ದೊಡ್ಡತಿಮ್ಮನಹಳ್ಳಿಯ ಊರಿನ ಗ್ರಾಮದೇವತೆ ಸಪ್ಪಲಮ್ಮ ದೇವಾಲಯದ ಅವರಣದಲ್ಲಿ ಆಯೋಜನೆ ಮಾಡಲಾದ ಸಭೆಯಲ್ಲಿ ಮಾತನಾಡಿ ಸುಮಾರು ದಿನಗಳಿಂದ ನೆನೆಗುದಿಗೆ ಬಿದ್ದಿದ್ದ ಈ ರಸ್ತೆ ದೊಡ್ಡಬಳ್ಳಾಪುರ ದಿಂದ ಮಂಚೇನಹಳ್ಳಿಗೆ ಸಂಪರ್ಕ ಕಲ್ಪಿಸುವ ರಸ್ತೆಯಾಗಿದ್ದು ತೂಬಗೆರೆ ಯಿಂದ ಮುಕ್ಕಡಿಘಟ್ಟ ಗ್ರಾಮದ ವರೆವಿಗೆ ಸುಮಾರು ಹತ್ತರಿಂದ ಹದಿನೈದು ಹಳ್ಳಿಗಳಿದ್ದು ಇಲ್ಲಿನ ಗ್ರಾಮಸ್ಥರಿಗೆ ಸರಿಯಾದ ರಸ್ತೆ ಇಲ್ಲದ ಕಾರಣ ಈ ಬಾಗದ ಜನರು ರಸ್ತೆಗಾಗಿ ನಮ್ಮ ಕಛೇರಿಗೆ ಸುಮಾರು ಅರ್ಜಿಗಳು ಬಂದಿದ್ದವು.ಈ ಭಾಗದ ಜನರ ಮನವಿಗೆ ಸರ್ಕಾರ ಸ್ಪಂದಿಸಿ 12ಕೋಟಿ ವಚ್ಚದಲ್ಲಿ 9.8 ಕಿ.ಮೀ ಉತ್ತಮವಾದ ರಸ್ತೆ ಕಲ್ಪಿಸುವಲ್ಲಿ ಇಂದು ಗುದ್ದಲಿ ಪೂಜೆ ನೇರವೇರಿಸಲಾಗಿದೆ ಎಂದರು.
ಈ ಸಂದರ್ಭದಲ್ಲಿ ಕೆಪಿಸಿಸಿ ಸದಸ್ಯ ಎಸ್ ಆರ್ ಮುನಿರಾಜು ಘಾಟಿ ದೇವಾಲಯ ಅಭಿವೃದ್ದಿ ಪ್ರಾಧಿಕಾರ ಸದಸ್ಯ ರಂಗಪ್ಪ ,ಮಹೇಶ್ ಕುಮಾರ್, ತೂಬಗೆರೆ ಬ್ಲಾಕ್ ನ ಅಧ್ಯಕ್ಷ ರವಿ ಸಿದ್ದಪ್ಪ, ಅರವಿಂದ್,ತಾ. ಕೃಷಿಕ ಸಮಾಜದ ಅಧ್ಯಕ್ಷ ಮುರಳಿ ಮುನಿರಾಜು, ಕಾಂಗ್ರೇಸ್ ಜಿಲ್ಲಾಧ್ಯಕ್ಷರು ಮಹಿಳಾ ಪಧವೀಧರ ಕ್ಷೇತ್ರ ಡಾ. ಸೌಮ್ಯ ಪಿ.ಬಿ. ಹಾಗು ತೂಬಗೆರೆ ಹೋಬಳಿಯ ಮುಖಂಡರು ಉಪಸ್ಥಿತರಿದ್ದರು.




