Press ID & Credential Portal
Apply / Verify  ➔
Advertisement
LIVE TV LocalCrimeNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
State News

ಗೋಹತ್ಯೆ ನಿಷೇಧ ಕಾನೂನು ಕಟ್ಟು ನಿಟ್ಟಾಗಿ ಜಾರಿ ಮಾಡಲು ಬಜರಂಗ ದಳ ಆಗ್ರಹ

ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ :
ರಾಜ್ಯದಲ್ಲಿ ಗೋಹತ್ಯೆ ನಿಷೇಧ ಕಾಯ್ದೆ ಜಾರಿಯಲ್ಲಿದ್ದರೂ ಗೋಹತ್ಯೆ ಅವ್ಯಾಹತವಾಗಿ ನಡೆಯುತ್ತಿದ್ದು, ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಹಲವಾರು ಪ್ರಕರಣಗಳು ದಾಖಲಾಗಿವೆ. ಈ ದಿಸೆಯಲ್ಲಿ ರಾಜ್ಯ ಸರ್ಕಾರ ಗೋಹತ್ಯೆ ನಿಷೇಧ ಕಾನೂನನ್ನು ಕಟ್ಟುನಿಟ್ಟಾಗಿ ಜಾರಿಗೆ ತರಬೇಕಿದೆ ಎಂದು ವಿಶ್ವ ಹಿಂದುಪರಿಷತ್ ಬಜರಂಗದಳದ ಕಾರ್ಯಕರ್ತರು ಆಗ್ರಹಿಸಿದ್ದಾರೆ.

ನಗರದ ಪ್ರವಾಸಿ ಮಂದಿರದಲ್ಲಿ ನಡೆದ ಸುದ್ಧಿಗೋಷ್ಟಿಯಲ್ಲಿ  ಬಜರಂಗದಳದ ಬೆಂಗಳೂರು ಗ್ರಾಮಾಂತರ ಜಿಲ್ಲಾ ಸಂಚಾಲಕ ಭಾಸ್ಕರ್ ಭಗತ್ ಮಾತನಾಡಿ ಜಿಲ್ಲೆಯ ದೊಡ್ಡಬಳ್ಳಾಪುರದಲ್ಲಿ ಸುಮರು 25 ಕಸಾಯಿಖಾನೆಗಳಿದ್ದು, ಗೋ ಹತ್ಯೆ ಮಾಡಿ,  ಗೋ ಮಾಂಸವನ್ನು ಮಾರಾಟ ಮಾಡಲಾಗುತ್ತಿದೆ.

ನಗರದ ದರ್ಗಾದಲ್ಲಿ ಗೋ ಹತ್ಯೆ ಪ್ರಕರಣವನ್ನು ಹಿಡಿದು ಪೊಲೀಸರಿಗೆ ದೂರು ನೀಡಲಾಗಿತ್ತು.ಆದರೆ ಇಂದಿಗೂ ಕಡಿಮೆ ಆಗಿಲ್ಲ. ಪೊಲೀಸರು ಈ ಬಗ್ಗೆ ಕ್ರಮ ವಹಿಸುತ್ತಿದ್ದರೂ ಪೊಲೀಸ್ ಇಲಾಖೆಯನ್ನು ಸಹ ದಿಕ್ಕು ತಪ್ಪಿಸುವ ಕೆಲಸಗಳಾಗುತ್ತವೆ. ಇದು ದೊಡ್ಡ ದಂದೆಯಾಗಿದ್ದು, ಇದರಲ್ಲಿ ಪ್ರಭಾವಿಗಳ  ಕೈವಾಡವಿರುವ ಶಂಕೆ ವ್ಯಕ್ತವಾಗುತ್ತದೆ.

ಗೋವು ನಮ್ಮ ಹಿಂದೂಗಳ ಪೂಜನೀಯ ಪ್ರಾಣಿಯಾಗಿದ್ದು, ಇದನ್ನು ನಾವು ಪೂಜಿಸಿ, ಗೌರವಿಸುತ್ತಿದ್ದೇವೆ. ಆದರೆ ಇತರೆ ಪ್ರಾಣಿಗಳ ಮಾಂಸ ಎಂದು ಹೇಳಿ ಗೋ ಮಾಂಸವನ್ನು ಹೋಟೆಲ್ಗಳಿಗೆ ಮಾರಾಟ ಮಾಡುವ ಪ್ರಕರಣಗಳು ನಡೆಯುತ್ತಿವೆ. ನಮಗೆ ಗೋ ಮಾತೆ ಬೇಕು. ಈ ಬಗ್ಗೆ ಇರುವ ಕಾನೂನು ಕಟ್ಟು ನಿಟ್ಟಾಗಿ ಜಾರಿಯಾಗಬೇಕು. ಇಲ್ಲವಾದಲ್ಲಿ ಸಂಘಟನೆಯಿಂದ ತೀವ್ರ ಹೋರಾಟಕ್ಕೆ ಸಜ್ಜಾಗಬೇಕಾಗುತ್ತದೆ ಎಂದರು.

 ಸುದ್ಧಿಗೋಷ್ಟಿಯಲ್ಲಿ  ಬಜರಂಗದಳದ ಸಹ ಸಂಚಾಲಕ ಚಂದನ್, ಜಿಲ್ಲಾ ಸುರಕ್ಷ ಪ್ರಮುಖ್ ಪವನ್, ನಗರ ಕಾರ್ಯದರ್ಶಿ ಉಮೇಶ್, ಗೋರಕ್ಷ ಸಮಿತಿಯ ನಾಗರಾಜ್, ಜಯಚಂದ್ರ, ವೆಂಕಟೇಶ್, ಕುಶಾಲ್ ಹಾಜರಿದ್ದರು.

 

Author
Chandravalli News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ದಲಿತರ ಹಕ್ಕುಗಳ ಸಂರಕ್ಷಣೆಗಾಗಿ ಸಹಿ ಸಂಗ್ರಹ ಚಳವಳಿಗೋಹತ್ಯೆ ನಿಷೇಧ ಕಾನೂನು ಕಟ್ಟು ನಿಟ್ಟಾಗಿ ಜಾರಿ ಮಾಡಲು ಬಜರಂಗ ದಳ ಆಗ್ರಹಕಾನೂನು ಅರಿವು ಜನಜಾಗೃತಿ ವೇದಿಕೆಯಿಂದ ವಿದ್ಯಾರ್ಥಿಗಳಿಗೆ ಉಚಿತ ಅರೋಗ್ಯ ಶಿಬಿರಹಾಳಾದ ಕೆಲವು ರಸ್ತೆಗಳಿಗೆ ಡಾಂಬರಿಕರಣಕ್ಕೆ ಚಾಲನೆಬೆಳಕಿನ ಹಬ್ಬ ದೀಪಾವಳಿ: ಬದುಕಿನಲ್ಲಿ ಬೆಳಕು ಮೂಡಲಿ, ಸಮಾಜದಲ್ಲಿ ಸಾಮರಸ್ಯ ನೆಲೆಸಲಿಹಾಸನ ಜಿಲ್ಲಾಡಳಿತದಲ್ಲಿ ‘ಬ್ರಹ್ಮಾಂಡ ಭ್ರಷ್ಟಾಚಾರ’: ಕೇಂದ್ರ ಸಚಿವ ಕುಮಾರಸ್ವಾಮಿ ಬಾಂಬ್!ಬಸ್ತರ್‌ನಲ್ಲಿ ಯೋಧರೊಂದಿಗೆ ದೀಪಾವಳಿ ಆಚರಿಸಿದ ಪ್ರಧಾನಿ ಮೋದಿ: ನಕ್ಸಲ್‌ವಾದದ ಅಂತ್ಯದ ಬಳಿಕದ ಮೊದಲ ದೀಪಾವಳಿ ಎಂದು ಬಣ್ಣನೆಎಥೆನಾಲ್ ಮಿಶ್ರಣದಿಂದ ವಾಹನಗಳ ಎಂಜಿನ್ ಕಸರತ್ತು: ತನಿಖೆಗೆ ಆದೇಶಿಸಿದ ಸಿಎಂ ಡಿ.ಕೆ. ಶಿವಕುಮಾರ್ರೈತ ಯುವಕರಿಗೆ ಹೆಣ್ಣು ಸಿಗುತ್ತಿಲ್ಲ, ಸೂಕ್ತ ಪರಿಹಾರ ಕಲ್ಪಿಸಿ: ತಹಶೀಲ್ದಾರ್‌ಗೆ ರೈತ ಮುಖಂಡ ಮನವಿಪ್ರಥಮ ಪಿಯುಸಿ: 2027ರಿಂದ ರಾಜ್ಯಾದ್ಯಂತ ಏಕರೂಪ ಪರೀಕ್ಷೆ ಹಾಗೂ ಪ್ರಶ್ನೆಪತ್ರಿಕೆ ಜಾರಿ