Press ID & Credential Portal
Apply / Verify  ➔
Advertisement
LIVE TV LocalCrimeNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
State News

ಗ್ರಾಮೀಣ ಭಾಗದ ಜಾತಿಯ ಅಹಮಿಕೆ ಮತ್ತು ಅಸ್ಪೃಶ್ಯತೆ ಆಚರಣೆ

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಇಂದು ದೀಪಾವಳಿ. ಒಂದು ದೊಡ್ಡ ಸಂಭ್ರಮ. ಜೇಬಲ್ಲಿ ಇರಲಿ, ಇಲ್ಲದಿರಲಿ ಎಲ್ಲರಿಗೂ ಹಬ್ಬ. ಸೊರಗಿರುವ ರೈತರು, ಕೂಲಿಗಳು, ಎಲ್ಲಾ ಜಾತಿಯ ಬಡವರು ಖರ್ಚು ಮಾಡಲೇ ಬೇಕಾದ ಹಬ್ಬ. ಹೇಗೋ ಹೊಂದಿಸಿಕೊಂಡು ಹೊಸ ಬಟ್ಟೆ ತರಬೇಕು. ಕಜ್ಜಾಯ ಮಾಡಬೇಕು. ಪಟಾಕಿ ಸಿಡಿಸಬೇಕು. ಇದು ಶತಮಾನಗಳ ಕಷ್ಟ ಮತ್ತು ಸಂಭ್ರಮ.

ಈ ಹಬ್ಬಕ್ಕೆ ಇನ್ನೊಂದು ಮುಖವೂ ಇದೆ. ಜಾತಿಯ ಅಹಮಿಕೆ ಮತ್ತು ಅಸ್ಪೃಶ್ಯರನ್ನು ಅವಮಾನಿಸುವ ಮುಖ. ನಾನಂತು ನಾಲ್ಕೈದು ದಶಕಗಳಿಂದ ಗಮನಿಸಿಯೇ ಹೇಳುತ್ತಿರುವ ಮಾತು. ಬಹುತೇಕ ಹಳ್ಳಿಗಳ ದೇವಾಲಯದಲ್ಲಿ ಈ ಹಬ್ಬದ ಪ್ರಯುಕ್ತ ನೋಮು ಪೂಜೆ ನಡೆಸಿ ಶಿವ ಪಾರ್ವತಿಯ ಕೇದಾರೇಶ್ವರ ಕಥೆ ಕೇಳಿಸುವುದು ಸಂಪ್ರದಾಯ. ಈ ಸಂದರ್ಭದಲ್ಲಿ ಜಾತಿಯ ಅಹಮಿಕೆ ಮತ್ತು ಅಸ್ಪೃಶ್ಯತೆ ಆಚರಣೆ ಎರಡನ್ನೂ ಒಟ್ಟಿಗೆ ಕಾಣಬಹುದು.

ಮೇಲ್ಜಾತಿಗಳು ಶಿಕ್ಷಣದಿಂದ ಹೆಚ್ಚು ಕಲಿತಿಲ್ಲ ಅನ್ನುವುದಕ್ಕೆ ಸಾಕ್ಷಿ ಏನೆಂದರೆ ಈ ಹಬ್ಬದಲ್ಲಿ ಪ್ರದರ್ಶನಗೊಳ್ಳುವ ಅಸ್ಪೃಶ್ಯತೆ. ಹಳ್ಳಿಯ ದೇವಾಲಯದಲ್ಲಿ ಮೇಲ್ಜಾತಿ ಸ್ಪೃಶ್ಯರು ಗುಡಿಯ ಒಳಗೆ ಮತ್ತು ತಳಸಮುದಾಯ ಅಸ್ಪೃಶ್ಯರು ಹೊರಗೆ ಕೂರುತ್ತಾರೆ. ಪ್ರತಿ ಹಳ್ಳಿಯಲ್ಲೂ ವಿದ್ಯಾವಂತರು ಇದ್ದಾರೆ. ಏನು ಪ್ರಯೋಜನ?ಪ್ರಶ್ನಿಸುವ ಧೈರ್ಯ ಬಂದಿಲ್ಲವಲ್ಲ.

ನಾವು, ಅರಿವು ಭಾರತ ತಂಡದವರು ದೇವಾಲಯಗಳಲ್ಲಿ ನಡೆಯುವ ಈ ಅಮಾನವೀಯ, ಮೂಢ, ಅಸ್ಪೃಶ್ಯ ಸಂಪ್ರದಾಯವನ್ನು ತಿದ್ದಲು ಪ್ರಯತ್ನಿಸುತ್ತಿದ್ದೇವೆ. ಪ್ರತಿ ಮುಜರಾಯಿ ದೇವಾಲಯ ಮುಂದೆ ಎಲ್ಲರಿಗೂ ಪ್ರವೇಶವಿದೆ ಎಂಬ ಬೋರ್ಡ್ ಹಾಕಿಸಿದ್ದೇವೆ. ಇದರಿಂದ ಅಲ್ಲಲ್ಲಿ ಸಣ್ಣ ಬದಲಾವಣೆಗಳು ಬಂದಿವೆ. ಆದರೆ ಅದು ಸಾಲದು. ಎಲ್ಲ ಗುಡಿಗಳಲ್ಲಿ ಸಂಪೂರ್ಣವಾಗಿ ಬದಲಾವಣೆ ಬರಬೇಕು.

ಈ ದಿನ ಹಬ್ಬ ನಡೆಯುತ್ತಿದೆ. ಇಂದೇ ತಮ್ಮ ಹಳ್ಳಿಗಳಲ್ಲಿ ಕಾಣುವ ಅಸ್ಪೃಶ್ಯತೆಯನ್ನು ಪ್ರಶ್ನಿಸಿ. ಒಳಗೆ- ಹೊರಗೆ ವ್ಯತ್ಯಾಸ ಇದ್ದರೆ ಫೋಟೋ ತೆಗೆದು ನಮಗೆ ಕಳುಹಿಸಿ. ಜಿಲ್ಲಾಡಳಿತ ಮತ್ತು ಪ್ರಜ್ಞಾವಂತ ಜನರನ್ನು ಕೂಡಿಸಿ ಪ್ರೀತಿಯಿಂದಲೇ ಬದಲಾವಣೆಗೆ ಪ್ರಯತ್ನಿಸುತ್ತೇವೆ. ಫೋಟೋ ಜೋತಿಗೆ ವಿಳಾಸ ಮತ್ತು ನಿಮ್ಮ ಮೊಬೈಲ್ ನಂಬರ್ ಕೊಡಿ. ಸಂಪರ್ಕಕ್ಕೆ: 93806 93353 / 7760415263
ವರದಿ:ಡಾ.ಶಿವಪ್ಪ ಅರಿವು.

 

Author
Chandravalli News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ದಲಿತರ ಹಕ್ಕುಗಳ ಸಂರಕ್ಷಣೆಗಾಗಿ ಸಹಿ ಸಂಗ್ರಹ ಚಳವಳಿಗೋಹತ್ಯೆ ನಿಷೇಧ ಕಾನೂನು ಕಟ್ಟು ನಿಟ್ಟಾಗಿ ಜಾರಿ ಮಾಡಲು ಬಜರಂಗ ದಳ ಆಗ್ರಹಕಾನೂನು ಅರಿವು ಜನಜಾಗೃತಿ ವೇದಿಕೆಯಿಂದ ವಿದ್ಯಾರ್ಥಿಗಳಿಗೆ ಉಚಿತ ಅರೋಗ್ಯ ಶಿಬಿರಹಾಳಾದ ಕೆಲವು ರಸ್ತೆಗಳಿಗೆ ಡಾಂಬರಿಕರಣಕ್ಕೆ ಚಾಲನೆಬೆಳಕಿನ ಹಬ್ಬ ದೀಪಾವಳಿ: ಬದುಕಿನಲ್ಲಿ ಬೆಳಕು ಮೂಡಲಿ, ಸಮಾಜದಲ್ಲಿ ಸಾಮರಸ್ಯ ನೆಲೆಸಲಿಹಾಸನ ಜಿಲ್ಲಾಡಳಿತದಲ್ಲಿ ‘ಬ್ರಹ್ಮಾಂಡ ಭ್ರಷ್ಟಾಚಾರ’: ಕೇಂದ್ರ ಸಚಿವ ಕುಮಾರಸ್ವಾಮಿ ಬಾಂಬ್!ಬಸ್ತರ್‌ನಲ್ಲಿ ಯೋಧರೊಂದಿಗೆ ದೀಪಾವಳಿ ಆಚರಿಸಿದ ಪ್ರಧಾನಿ ಮೋದಿ: ನಕ್ಸಲ್‌ವಾದದ ಅಂತ್ಯದ ಬಳಿಕದ ಮೊದಲ ದೀಪಾವಳಿ ಎಂದು ಬಣ್ಣನೆಎಥೆನಾಲ್ ಮಿಶ್ರಣದಿಂದ ವಾಹನಗಳ ಎಂಜಿನ್ ಕಸರತ್ತು: ತನಿಖೆಗೆ ಆದೇಶಿಸಿದ ಸಿಎಂ ಡಿ.ಕೆ. ಶಿವಕುಮಾರ್ರೈತ ಯುವಕರಿಗೆ ಹೆಣ್ಣು ಸಿಗುತ್ತಿಲ್ಲ, ಸೂಕ್ತ ಪರಿಹಾರ ಕಲ್ಪಿಸಿ: ತಹಶೀಲ್ದಾರ್‌ಗೆ ರೈತ ಮುಖಂಡ ಮನವಿಪ್ರಥಮ ಪಿಯುಸಿ: 2027ರಿಂದ ರಾಜ್ಯಾದ್ಯಂತ ಏಕರೂಪ ಪರೀಕ್ಷೆ ಹಾಗೂ ಪ್ರಶ್ನೆಪತ್ರಿಕೆ ಜಾರಿ