ಚಂದ್ರವಳ್ಳಿ ನ್ಯೂಸ್ ಬೆಂಗಳೂರು: ರಾಜ್ಯಸಭೆಯ ಮಾಜಿ ಸದಸ್ಯರಾದ ದಿವಂಗತ ಹೆಚ್. ಹನುಮಂತಪ್ಪ ಅವರ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ಮಾನ್ಯ ಮುಖ್ಯಮಂತ್ರಿಗಳಾದ ಡಿ.ಕೆ. ಶಿವಕುಮಾರ್ ಅವರು ಇಂದು (ಜುಲೈ 13, ಸೋಮವಾರ) ಚಿತ್ರದುರ್ಗ ಜಿಲ್ಲೆಗೆ ಪ್ರವಾಸ ಕೈಗೊಳ್ಳಲಿದ್ದಾರೆ.
ಮುಖ್ಯಮಂತ್ರಿಯವರ ವಿಶೇಷ ಕರ್ತವ್ಯಾಧಿಕಾರಿ ಬಿ.ಎಸ್. ಶ್ರೀಧರ್ ಅವರು ಬಿಡುಗಡೆ ಮಾಡಿರುವ ಅಧಿಕೃತ ಪ್ರವಾಸ ಪಟ್ಟಿಯ ವಿವರ ಹೀಗಿದೆ:
ಸಿಎಂ ಇಂದಿನ ಪ್ರವಾಸದ ವೇಳಾಪಟ್ಟಿ:
- ಮಧ್ಯಾಹ್ನ 01:30: ಬೆಂಗಳೂರಿನ ಹೆಚ್.ಎ.ಎಲ್ (HAL) ವಿಮಾನ ನಿಲ್ದಾಣದಿಂದ ವಿಶೇಷ ಹೆಲಿಕಾಪ್ಟರ್ (VT-BST) ಮೂಲಕ ಚಿತ್ರದುರ್ಗಕ್ಕೆ ಪ್ರಯಾಣ.
- ಮಧ್ಯಾಹ್ನ 02:30: ಚಿತ್ರದುರ್ಗ ತಾಲ್ಲೂಕಿನ ಶ್ರೀ ಮುರುಘಾಮಠದ ಆವರಣದಲ್ಲಿರುವ ಎಸ್.ಜೆ.ಎಂ. ಆಂಗ್ಲ ಮಾಧ್ಯಮ ಶಾಲಾ ಹೆಲಿಪ್ಯಾಡ್‌ಗೆ ಆಗಮನ.
- ಮಧ್ಯಾಹ್ನ 02:45: ಚಿತ್ರದುರ್ಗ ಪಟ್ಟಣದಲ್ಲಿ ನಡೆಯಲಿರುವ ಮಾಜಿ ಸಂಸದ ಹೆಚ್. ಹನುಮಂತಪ್ಪ ಅವರ ಅಂತ್ಯಕ್ರಿಯೆಯಲ್ಲಿ ಭಾಗಿ.
- ಸಂಜೆ 04:00: ಕಾರ್ಯಕ್ರಮ ಮುಗಿಸಿ ಮರಳಿ ಎಸ್.ಜೆ.ಎಂ. ಶಾಲಾ ಆವರಣದ ಹೆಲಿಪ್ಯಾಡ್‌ಗೆ ಆಗಮನ ಹಾಗೂ ಹೆಲಿಕಾಪ್ಟರ್ ಮೂಲಕ ಬೆಂಗಳೂರಿಗೆ ಪ್ರಯಾಣ.
- ಸಂಜೆ 05:00: ಬೆಂಗಳೂರಿನ ಹೆಚ್.ಎ.ಎಲ್ ವಿಮಾನ ನಿಲ್ದಾಣಕ್ಕೆ ವಾಪಸ್.
ಅಧಿಕಾರಿಗಳಿಗೆ ಸೂಚನೆ ಹಾಗೂ ಭದ್ರತೆ: ಮುಖ್ಯಮಂತ್ರಿಗಳು Z+ (ಜೆಡ್ ಪ್ಲಸ್) ಶ್ರೇಣಿಯ ಭದ್ರತೆಯನ್ನು ಹೊಂದಿರುವುದರಿಂದ ಸೂಕ್ತ ಶಿಷ್ಟಾಚಾರ ಮತ್ತು ಅಗತ್ಯ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳುವಂತೆ ಬೆಂಗಳೂರು ಮತ್ತು ದಾವಣಗೆರೆ ವಲಯದ ಐಜಿಪಿ, ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಸೂಚಿಸಲಾಗಿದೆ.
ವಿಶೇಷ ಸೂಚನೆ: ಮುಖ್ಯಮಂತ್ರಿಯವರ ಪ್ರವಾಸದ ಸಂದರ್ಭದಲ್ಲಿ ಸಾರ್ವಜನಿಕರು ಹಾಗೂ ಪಕ್ಷದ ಮುಖಂಡರು ಅವರಿಗೆ "ಸುಗಂಧರಾಜ" ಹೂವಿನ ಹಾರವನ್ನು ಹಾಕಬಾರದು ಎಂದು ಪ್ರಕಟಣೆಯಲ್ಲಿ ವಿಶೇಷವಾಗಿ ಕೋರಲಾಗಿದೆ.



