Web Stories
Chandravalli News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಸರ್ಕಾರಿ ಪಿಯು ಕಾಲೇಜ್ ಗೆ ಉತ್ತಮ ಫಲಿತಾಂಶ

Advertisement
ಚಂದ್ರವಳ್ಳಿ ನ್ಯೂಸ್, ಚಳ್ಳಕೆರೆ:
ಚಳ್ಳಕೆರೆ ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜು ದ್ವಿತೀಯ ಪಿ ಯು ಸಿ ಫಲಿತಾಂಶದಲ್ಲಿ ಶೇ
68 ರಷ್ಟು ಸಾಧನೆ ಮಾಡಿ ಸರ್ಕಾರಿ ಕಾಲೇಜುಗಳಲ್ಲಿ  ತಾಲೂಕಿಗೆ ಪ್ರಥಮ ಸ್ಥಾನ ಪಡೆದ ಪ್ರಯುಕ್ತ ಕಾಲೇಜು ವತಿಯಿಂದ ಕಾಲೇಜು ಅಭಿವೃದ್ಧಿ ಸಮಿತಿ ಅಧ್ಯಕ್ಷರು ಹಾಗೂ ಜನಪ್ರಿಯ ಶಾಸಕ ಟಿ. ರಘುಮೂರ್ತಿ ರವರಿಗೆ ಶಾಸಕರ ಭವನದಲ್ಲಿ  ಸಿಹಿ ನೀಡಿ ಸನ್ಮಾನಿಸಲಾಯಿತು.

 ಸನ್ಮಾನ ಸ್ವೀಕರಿಸಿ ಸಿಹಿ ವಿತರಿಸಿ ಶಾಸಕರು ಮಾತನಾಡಿ ಈ ವರ್ಷದ ಫಲಿತಾಂಶ ನನಗೆ ಸಂತೋಷ ತಂದಿದೆ. ಮುಂದಿನ ವರ್ಷ ಇನ್ನೂ ಹೆಚ್ಚು ಫಲಿತಾಂಶ ಬರುವುದಕ್ಕೆ ಪ್ರಯತ್ನಿಸಿ ಎಂದು ಸಲಹೆ ನೀಡಿದರು. ಸರ್ಕಾರಿ ಕಾಲೇಜುಗಳಲ್ಲಿ ಹೆಚ್ಚಾಗಿ ಬಡ ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿರುತ್ತಾರೆ. ಹಾಗಾಗಿ ನಾನು ಹೆಚ್ಚು ಸರ್ಕಾರಿ ಕಾಲೇಜುಗಳಿಗೆ ಆದ್ಯತೆ ನೀಡುತ್ತೇನೆ ಎಂದರು.

 ಕಾಲೇಜಿನ ಪ್ರಾಚಾರ್ಯ  ಕೆ ಎಚ್ ರಾಜು ಮಾತನಾಡಿ ಶಾಸಕರು ಕಾಲೇಜಿಗೆ ಬೇಕಾದ ಎಲ್ಲಾ ಮೂಲಭೂತ ಸೌಕರ್ಯಗಳನ್ನು ಒದಗಿಸಿ ಕೊಟ್ಟಿದ್ದಾರೆ ಅವರ ಮಾರ್ಗದರ್ಶನದಲ್ಲಿ ಮುಂದಿನ ವರ್ಷ ಉಪನ್ಯಾಸಕರ  ಸಹಕಾರದಿಂದ ಇನ್ನೂ ಹೆಚ್ಚು ಫಲಿತಾಂಶ ಬರುವುದಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಭರವಸೆ ನೀಡಿದರು.

 ಈ ಸಂದರ್ಭದಲ್ಲಿ ಕಾಂಗ್ರೆಸ್ ಬ್ಲಾಕ್ ತಾಲೂಕ್ ಅಧ್ಯಕ್ಷ ವೀರಭದ್ರಪ್ಪ, ಗ್ಯಾರಂಟಿ ಯೋಜನೆಗಳ ತಾಲೂಕ್ ಅಧ್ಯಕ್ಷ ಗದ್ದಿಗೆ ತಿಪ್ಪೇಸ್ವಾಮಿ, ರುದ್ರಮುನಿ, ಜಿಲ್ಲಾ ಉಪನ್ಯಾಸಕರ ಸಂಘದ ಮಾಜಿ ಅಧ್ಯಕ್ಷ ಎಸ್ ಲಕ್ಷ್ಮಣ, ಉಪನ್ಯಾಸಕರಗಳಾದ ಸಾಹಿತಿ ನಾಗರಾಜ್ ಬೆಳಗಟ್ಟ, ಎಚ್ ಆರ್ ಜಬಿವುಲ್ಲಾ, ತಿಪ್ಪೇಸ್ವಾಮಿ, ಪುಟ್ಟರಂಗಪ್ಪ, ಜಗದೀಶ್, ಚಂದ್ರಶೇಖರ್, ಶ್ರೀನಿವಾಸ್ ಇತರರು ಉಪಸ್ಥಿತರಿದ್ದರು.
Advertisement
Advertisement

Author
Chandravalli News
Regional Kannada Daily is a leading news paper in (Karnataka state). Which is having large number of circulation in the districts of Chitradurga, Davanagere, Bellary, Vijayanagara, Shimoga, Chikmagalur, Tumkur, Bangalore, Simultaneously published in rural districts of Bangalore
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಆಸಿಡ್ ದಾಳಿಗೆ ಒಳಗಾದ ನೊಂದ ವ್ಯಕ್ತಿಗಳಿಗೆ ಒಂದು ತಿಂಗಳಲ್ಲೇ ಮಧ್ಯಂತರ ಪರಿಹಾರ ವಿತರಣೆಯಾದವ ಗೊಲ್ಲರ ಸಂಘದ ಆಡಳಿತಾಧಿಕಾರಿ ಅವಧಿ ವಿಸ್ತರಣೆಕಾನೂನು ಸೇವೆಗಳ ಪ್ರಾಧಿಕಾರದಲ್ಲಿ ಶಾಖಾಧಿಕಾರಿ ಹುದ್ದೆಗಳ ನೇಮಕಾತಿ: ಅರ್ಜಿ ಆಹ್ವಾನಸಂಸದರ ಕಚೇರಿ ಎದುರು ಕಮ್ಯುನಿಸ್ಟ್ ಪಕ್ಷ ಪ್ರತಿಭಟನೆ ಆರೋಗ್ಯ ರಕ್ಷಣೆಗೆ ಜೀವನ ಶೈಲಿ ಬದಲಾಗಬೇಕು- ಮಾಜಿ ಸಚಿವ ಆಂಜನೇಯ ವಿದ್ಯಾರ್ಥಿವೇತನ ಬಿಡುಗಡೆಗೆ ಸಿಎಂಗೆ ಮನವಿಕುಂಚಿಟಿಗ ಕುಲ ದೇವತೆಗಳ ವಿಶಿಷ್ಟ ಆಚರಣೆ: ಏನಿದು ಶ್ರೀಕಣಿವೆ ಮಾರಮ್ಮನ 'ಸೆಳೆ' ವೈಭವಸಡಗರದ ಹಿರಿಯೂರು ಮಾರಿಕಾಂಬಾ ಜಾತ್ರೆ: ಏಪ್ರಿಲ್ 24ರಂದು ದೇವಿಯ ಬ್ರಹ್ಮರಥೋತ್ಸವಏ.19ಕ್ಕೆ ಸಾಸಲು ಚಿನ್ನಮ್ಮ ಉತ್ಸವ : ಬಂಡಿ ಮೂಲಕ ಮೆರವಣಿಗೆಚಿತ್ರದುರ್ಗ ಮರ್ಚೆಂಟ್ಸ್ ಬ್ಯಾಂಕ್ ನೂತನ ಅಧ್ಯಕ್ಷರಾಗಿ ರಘುರಾಮರೆಡ್ಡಿ ಅವಿರೋಧ ಆಯ್ಕೆ