Press ID & Credential Portal
Apply / Verify  ➔
LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
State News

ಭದ್ರಾ ಹೋರಾಟಗಾರರಿಗೆ ಕೃತಜ್ಞತೆ ಸಮರ್ಪಣೆಯಾಗಬೇಕು- ಜೆ.ಯಾದವರೆಡ್ಡಿ

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ :
ಬರ ಪೀಡಿತ ಪ್ರದೇಶ ಚಿತ್ರದುರ್ಗ ಜಿಲ್ಲೆಗೆ ಭದ್ರಾ ಮೇಲ್ದಂಡೆ ಯೋಜನೆಯಿಂದ ನೀರು ಹರಿಸುವುದಕ್ಕಾಗಿ ನಿಸ್ವಾರ್ಥದಿಂದ ಹೋರಾಡಿದ ಎಂ.ಜಯಣ್ಣ ಮುರುಘರಾಜೇಂದ್ರ ಒಡೆಯರ್, ರೈತ ಮುಖಂಡ ನುಲೇನೂರು ಶಂಕರಪ್ಪ ಇವರುಗಳಿಗೆ ಕೃತಜ್ಞತೆ ಸಮರ್ಪಣೆಯಾಗಬೇಕೆಂದು ಸಾಮಾಜಿಕ ಚಿಂತಕ ಜೆ.ಯಾದವರೆಡ್ಡಿ ತಿಳಿಸಿದರು.

ಭದ್ರೆಯ ಕನಸು ಹೊತ್ತು ದಶಕಗಳ ಕಾಲ ಹೋರಾಡಿ ಮಣ್ಣಲ್ಲಿ ಮಣ್ಣಾಗಿರುವ ಎಂ.ಜಯಣ್ಣ ಹಾಗೂ ಮುರುಘರಾಜೇಂದ್ರ ಒಡೆಯರ್ ಇವರುಗಳಿಗೆ ಭದ್ರಾ ನಾಲೆ ನೀರು ಸಮರ್ಪಣಾ ಕಾರ್ಯಕ್ರಮದ ಅಂಗವಾಗಿ ಪತ್ರಕರ್ತರ ಭವನದಲ್ಲಿ ಬುಧವಾರ ಹಮ್ಮಿಕೊಳ್ಳಲಾಗಿದ್ದ ಪೂರ್ವಭಾವಿ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದರು.

Advertisement

ಜಯಣ್ಣ, ಒಡೆಯರ್ ಇವರುಗಳು ಎಂದಿಗೂ ತನಗಾಗಿ ತನ್ನ ಕುಟುಂಬಕ್ಕಾಗಿ ಬದುಕಿದವರಲ್ಲ. ಜಿಲ್ಲೆಯ ರೈತರು ಹಾಗೂ ಜನಸಾಮಾನ್ಯರ ಒಳಿತನ್ನಿಟ್ಟುಕೊಂಡು ಹೋರಾಟ ನಡೆಸಿ ರಾಜಕಾರಣದಿಂದ ದೂರವಿದ್ದವರು. ನಿಸ್ಪಕ್ಷಪಾತ, ನಿಷ್ಕಲ್ಮಶವಾಗಿ ಹೋರಾಡಿ ನಮ್ಮನ್ನೆಲ್ಲಾ ಅಗಲಿದ್ದಾರೆ. ಇವರುಗಳು ಹೋರಾಟಕ್ಕೆ ಇಳಿದಾಗ ಅನೇಕು ಗೇಲಿ ಮಾಡಿದ್ದುಂಟು ಎಂದು ಬೇಸರ ವ್ಯಕ್ತಪಡಿಸಿದರು.

ಸ್ವಾತಂತ್ರ್ಯ ಹೋರಾಟಗಾರರು ನಮ್ಮ ಜಿಲ್ಲೆಯಲ್ಲಿದ್ದಾರೆ. ಜೀವಪರ, ಜನಪರ ಕಾಳಜಿಯುಳ್ಳವರಾಗಿದ್ದ ಇವರುಗಳಿಗೆ ಗೌರವ ಸಮರ್ಪಿಸುವುದರಲ್ಲಿ ನಿಜವಾದ ಅರ್ಥವಿದೆ. ಜಿಲ್ಲೆಯಲ್ಲಿ ದಲಿತರ ಮೇಲೆ ಎಲ್ಲಿಯೇ ದೌರ್ಜನ್ಯ, ದಬ್ಬಾಳಿಕೆಯಾದರೆ ಹೋರಾಟಕ್ಕೆ ಮುಂಚೂಣಿಯಲ್ಲಿರುತ್ತಿದ್ದರು. ಜಿಲ್ಲೆಯ ಯುವ ಜನಾಂಗಕ್ಕೆ ಜಯಣ್ಣ, ಒಡೆಯರ್ ರೈತ ನಾಯಕ ನುಲೇನೂರು ಶಂಕರಪ್ಪ ಇವರುಗಳು ಯಾರು ಎನ್ನುವುದನ್ನು ಪರಿಚಯಿಸಬೇಕಿದೆ ಎಂದು ಸಲಹೆ ನೀಡಿದರು.

ರೈತ ಮುಖಂಡ ಈಚಘಟ್ಟದ ಸಿದ್ದವೀರಪ್ಪ ಮಾತನಾಡಿ ಜಿಲ್ಲೆಯ ಹಿತಕ್ಕಾಗಿ ಹೋರಾಡಿದ ಎಂ.ಜಯಣ್ಣ, ಮುರುಘರಾಜೇಂದ್ರ ಒಡೆಯರ್ ಇವರುಗಳು ಜಿಲ್ಲೆಗೆ ನೀರು ಬರುವುದನ್ನು ನೋಡುವ ಭಾಗ್ಯವಿಲ್ಲದಂತಾಗಿರುವುದು ಅತೀವ ನೋವುಂಟು ಮಾಡಿದೆ.

ಭದ್ರಾ ಮೇಲ್ದಂಡೆಗಾಗಿ ಹೋರಾಟ ಮಾಡಿದವರಿಗೆ ಕೃತಜ್ಞತೆ ಸಮರ್ಪಿಸದಿದ್ದರೆ ಹೋರಾಟ ಅಪೂರ್ಣಗೊಳ್ಳುತ್ತದೆ. ಆರಂಭದಲ್ಲಿ ಜಿಲ್ಲಾ ಸಮಗ್ರ ನೀರಾವರಿ ಹೋರಾಟ ಸಮಿತಿ ಎಂಬ ಹೆಸರಿಟ್ಟುಕೊಂಡು ಚಳುವಳಿ ಆರಂಭಿಸಿದೆವು. ನಂತರ ಒಬ್ಬೊಬ್ಬರಾಗಿ ಹೋರಾಟ ಶುರು ಮಾಡಿದರು. ಜಿಲ್ಲೆಯ ಪ್ರತಿ ರೈತರ ಜಮೀನುಗಳಿಗೆ ನೀರು ಹರಿಸುವ ಅವಕಾಶವಿದೆ. ಅದಕ್ಕಾಗಿ ನಮ್ಮ ಹೋರಾಟ ನಿಲ್ಲಬಾರದೆಂದು ಹೇಳಿದರು.

ಜಿಲ್ಲೆಯ ಯಾವುದೇ ಪ್ರದೇಶ ನೀರಾವರಿ ಯೋಜನೆಯಿಂದ ಕೈಬಿಟ್ಟು ಹೋಗಬಾರದು. 18 ರಿಂದ 20 ಟಿ.ಎಂ.ಸಿ. ನೀರು ಗಾಜನೂರು

ಡ್ಯಾಮ್ ದಾಟಿ ಹೋಗುತ್ತಿದೆ. ಪ್ರತಿ ರೈತನ ಜಮೀನಿಗೆ ನೀರು ಹರಿಸುವ ಹೊಣೆ ಎಲ್ಲರ ಮೇಲಿದೆ. ಅದಕ್ಕಾಗಿ ಒಕ್ಕೊರಲ ಧ್ವನಿ ಎತ್ತಬೇಕು ಎಂದರು.

ದಲಿತ ಮುಖಂಡ ಬಿ.ರಾಜಪ್ಪ ಮಾತನಾಡುತ್ತ ಎಂ.ಜಯಣ್ಣ, ಮುರುಘರಾಜೇಂದ್ರ ಒಡೆಯರ್ ಇವರುಗಳು ಅನೇಕ ವರ್ಷಗಳಿಂದಲೂ ಜಿಲ್ಲೆಗೆ ನೀರಾವರಿ ಯೋಜನೆಯನ್ನು ಜಾರಿಗೆ ತರುವುದಕ್ಕಾಗಿ ಹೋರಾಟ ಮಾಡಿಕೊಂಡು ಬಂದವರು ಎನ್ನುವುದನ್ನು ಮರೆಯುವಂತಿಲ್ಲ. ಗೋನೂರು ಕೆರೆಗೆ ಜಯಣ್ಣನವರ ಹೆಸರನ್ನಿಡಬೇಕು. ಚಿತ್ರದುರ್ಗದ ಪ್ರಮುಖ ಬೀದಿಗೆ ಮುರುಘರಾಜೇಂದ್ರ ಒಡೆಯರ್‍ರವರ ಹೆಸರನ್ನು ನಾಮಕರಣ ಮಾಡಿದರೆ ನಿಜವಾಗಿಯೂ ಇಬ್ಬರ ಹೋರಾಟಕ್ಕೆ ಜಯ ಸಿಕ್ಕಂತಾಗುತ್ತದೆ ಎಂದು ಅಭಿಪ್ರಾಯ ಪಟ್ಟರು.

ದಲಿತ ಮುಖಂಡ ಡಿ.ದುರುಗೇಶ್ ಮಾತನಾಡಿ ಎಂ.ಜಯಣ್ಣ, ಮುರುಘರಾಜೇಂದ್ರ ಒಡೆಯರ್ ಇವರುಗಳು ಜೀವಂತವಾಗಿದ್ದಾಗ

ಜಿಲ್ಲೆಗೆ ಭದ್ರಾ ಮೇಲ್ದಂಡೆ ಯೋಜನೆ ಹರಿಸುವ ಬಗ್ಗೆಯೇ ಹೆಚ್ಚು ಚರ್ಚೆಯಾಗುತ್ತಿತ್ತು. ಜಿಲ್ಲೆಯ ರೈತರ ಜನಸಾಮಾನ್ಯರ ಒಳಿತಿಗಾಗಿಯೇ ಜೀವನವನ್ನು ಮುಡುಪಾಗಿಟ್ಟವರು. ಅಂತಹ ಹೋರಾಟಗಾರರನ್ನು ಪ್ರತಿಯೊಬ್ಬರು ನೆನೆಯಬೇಕು. ಸಚಿವರಾಗಿದ್ದ ಡಿ.ಗೂಳಿಹಟ್ಟಿ ಶೇಖರ್, ಇಂಜಿನಿಯರ್ ಚೆಲುವರಾಜ್ ಇವರುಗಳನ್ನು ಮರೆಯುವಂತಿಲ್ಲ. ಜಿಲ್ಲೆಗೆ ನೀರು ಹರಿದಿದೆಯೆಂದರೆ ಅದರ ಹಿಂದೆ ಈ ಹೋರಾಟಗಾರರ ಶ್ರಮವಿದೆ. ಜಿಲ್ಲೆಯ ಯಾವ ಶಾಸಕರಿಗೂ ನೀರಾವರಿ ಯೋಜನೆಗೆ ಬಗ್ಗೆ ಸರಿಯಾದ ಮಾಹಿತಿಯಿರಲಿಲ್ಲ. ಜಯಣ್ಣ, ಒಡೆಯರ್ ನುಲೇನೂರು ಶಂಕರಪ್ಪನವರ ಹೆಸರುಗಳನ್ನು ಯಾವುದಾದರೂ ಕಾಲುವೆಗೆ ಇಡಬೇಕೆಂದು ಸಲಹೆ ನೀಡಿದರು.

ಕರ್ನಾಟಕ ರಾಜ್ಯ ಟಿಪ್ಪುಸುಲ್ತಾನ್ ಅಭಿಮಾನಿಗಳ ಮಹಾ ವೇದಿಕೆ ರಾಜ್ಯಾಧ್ಯಕ್ಷ ಟಿಪ್ಪುಖಾಸಿಂ ಆಲಿ ಮಾತನಾಡುತ್ತ ಎಂ.ಜಯಣ್ಣ, ಮುರುಘರಾಜೇಂದ್ರ ಒಡೆಯರ್ ಟಿ.ನುಲೇನೂರು ಶಂಕರಪ್ಪನವರಲ್ಲದೆ ಜಿಲ್ಲೆಗೆ ಭದ್ರಾ ಮೇಲ್ದಂಡೆ ಯೋಜನೆಗಾಗಿ ಹೋರಾಡಿದವರು ಇನ್ನು ಅನೇಕರಿದ್ದಾರೆ.

ಅವರುಗಳನ್ನೆಲ್ಲಾ ಕಾರ್ಯಕ್ರಮದಲ್ಲಿ ನೆನೆಯಬೇಕು. ಒಡೆಯರ್ ಮತ್ತು ಎಂ.ಜಯಣ್ಣ ಇವರುಗಳ ಹೆಸರುಗಳನ್ನು ಯಾವುದಾದರೂ ಕಾಲುವೆಗೆ ಇಡಬೇಕು. ಕಾರ್ಯಕ್ರಮದಲ್ಲಿ ಶಾಲಾ ಮಕ್ಕಳನ್ನು ಕರೆಸಿ ಹೋರಾಟಗಾರರ ವಿಚಾರಗಳನ್ನು ತಿಳಿಸಬೇಕಾಗಿರುವುದರಿಂದಡಿಡಿಪಿಐ ರವರ ಜೊತೆ ಈ ಸಂಬಂಧ ಮಾತುಕತೆ ನಡೆಸುವಂತೆ ನುಡಿದರು.

ಕರುನಾಡ ವಿಜಯಸೇನೆ ಜಿಲ್ಲಾಧ್ಯಕ್ಷ ಕೆ.ಟಿ.ಶಿವಕುಮಾರ್ ಮಾನಾಡುತ್ತ ಹೋರಾಟಗಾರರನ್ನು ಹೋರಾಟಗಾರರೆ ಗೌರವಿಸದಿದ್ದರೆ ಬೇರೆಯವರು ಹೇಗೆ ಗೌರವಿಸುತ್ತಾರೆ.

ನಾನು ಕೂಡ ಅನೇಕ ವರ್ಷಗಳಿಂದ ಹೋರಾಟ ಮಾಡಿಕೊಂಡು ಬರುತ್ತಿದ್ದೇನೆ. ಹೋರಾಟಗಾರರೆಂದರೆ ನೋವು, ಸಂಕಟ, ಅವಮಾನಗಳನ್ನು ಅನುಭವಿಸಬೇಕು. ಅ.10 ರಂದು ಡಿ.ಸಿ.ಸರ್ಕಲ್‍ನಲ್ಲಿ ಕಾರ್ಯಕ್ರಮ ಹಮ್ಮಿಕೊಂಡು ಎಂ.ಜಯಣ್ಣ, ಒಡೆಯರ್, ನುಲೇನೂರು ಶಂಕರಪ್ಪನವರ ಭಾವಚಿತ್ರಗಳಿಗೆ ಹೂವಿನಿಂದ ಅಲಂಕರಿಸಿ ನಂತರ ಅವರ ಸಮಾಧಿಗೆ ಟ್ಯಾಂಕರ್‍ನಲ್ಲಿ ಭದ್ರಾ ನಾಲೆ ನೀರು ತೆಗೆದುಕೊಂಡು ಹೋಗಿ ಸಮರ್ಪಿಸಲಾಗುವುದು. ಕ್ರಾಂತಿ ಗೀತೆ ಹಾಡಿಸಬೇಕೆಂದಿದ್ದೇವೆ. ಜಯಣ್ಣ ಒಡೆಯರ್ ಇವರುಗಳ ಹೆಸರಿನಲ್ಲಿ ಡಿಸೆಂಬರ್‍ನಲ್ಲಿ ಪ್ರಶಸ್ತಿ ಕೊಡೋಣ. ಇದಕ್ಕೆ ಎಲ್ಲರ ಸಹಕಾರ ಮುಖ್ಯ ಎಂದು ಕೋರಿದರು.

ತಿಮ್ಮಣ್ಣನನಾಯಕನ ಕೆರೆ, ಚಂದ್ರವಳ್ಳಿ ಕೆರೆ, ಭರಮಣ್ಣನಾಯಕನ ಕೆರೆಗೆ ಭದ್ರಾ ಮೇಲ್ದಂಡೆ ಯೋಜನೆಯಿಂದ ನೀರು ತುಂಬಿಸಬೇಕು. ಪಠ್ಯ ಪುಸ್ತಕಗಳಲ್ಲಿ ಇವರ ಇತಿಹಾಸವಿಟ್ಟು ಮಕ್ಕಳಿಗೆ ಪರಿಚಯಿಸುವಂತೆ ಮನವಿ ಮಾಡಿದರು.

ರೈತ ಮುಖಂಡರುಗಳಾದ ಬಸ್ತಿಹಳ್ಳಿ ಜಿ.ಸುರೇಶ್‍ಬಾಬು, ಚಿಕ್ಕಪ್ಪನಹಳ್ಳಿ ರುದ್ರಸ್ವಾಮಿ, ಧನಂಜಯ ಹಂಪಯ್ಯನಮಾಳಿಗೆ, ಕರ್ನಾಟಕ ರಾಜ್ಯ ಜನಶಕ್ತಿ ರಾಜ್ಯ ಸಮಿತಿ ಸದಸ್ಯ ಟಿ.ಶಫಿವುಲ್ಲಾ, ಲೇಖಕ ಹೆಚ್.ಆನಂದಕುಮಾರ್, ಎಸ್.ಜೆ.ಎಂ. ಚಿತ್ರಕಲಾ ಶಾಲೆಯ ಕಣ್ಮೇಶ್ ಇನ್ನು ಅನೇಕರು ಮಾತನಾಡಿದರು.

ವಿವಿಧ ಸಂಘಟನೆಗಳವರು, ಎಂ.ಜಯಣ್ಣ ಮತ್ತು ಒಡೆಯರ್‍ರವರ ಅಭಿಮಾನಿಗಳು ಪೂರ್ವಭಾವಿ ಸಭೆಯಲ್ಲಿ ಹಾಜರಿದ್ದರು.

Author
ಸಿ.ಹೆಂಜಾರಪ್ಪ
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭದ್ರಾ ಹೋರಾಟಗಾರರಿಗೆ ಕೃತಜ್ಞತೆ ಸಮರ್ಪಣೆಯಾಗಬೇಕು- ಜೆ.ಯಾದವರೆಡ್ಡಿದಸರಾ ಕ್ರೀಡಾಕೂಟದಲ್ಲಿ ಕಂಚಿನ ಪದಕ ಗೆದ್ದ ಭೂಮಿಕಾ ಎಸ್ ತಗಡೂರು- ದೇವಿಕಾ ಜೋಡಿವಿಧಾನಸೌಧದ ಮೆಟ್ಟಿಲುಗಳ ಮೇಲೆ ರಾಜ್ಯದಲ್ಲೇ ಪ್ರಥಮ ಬಾರಿಗೆ ‘ಉರ್ದು ಹಬ್ಬ’: ಸಚಿವ ಯು.ಟಿ.ಖಾದರ್ಏಷ್ಯನ್ ಗೇಮ್ಸ್: 4x400 ಮೀ. ರಿಲೇ ಓಟದಲ್ಲಿ ಭಾರತದ ಮಹಿಳೆಯರಿಗೆ ಚಿನ್ನದ ಗರಿ; ಕರ್ನಾಟಕದ ಪೂವಮ್ಮಗೆ ಹೆಮ್ಮೆ!ನೈಸ್ ವಿವಾದ: ಡಿಕೆಶಿ - ಎಚ್ಡಿಕೆ ನಡುವೆ ತಾರಕಕ್ಕೇರಿದ ವಾಕ್ಸಮರ; ವಿಧಾನಸಭೆಯಲ್ಲೇ ಚರ್ಚೆಗೆ ಪ್ರತಿ ಸವಾಲು!ಸೌಜನ್ಯ ಪ್ರಕರಣದ ಎಸ್‌ಐಟಿ ತನಿಖೆಗೆ ಆರಂಭದಲ್ಲೇ ಹಿನ್ನಡೆ: ತಂಡದಿಂದ ಹೊರಗುಳಿಯಲು ಎಎಸ್‌ಪಿ ವೆಂಕಟೇಶ್ ಪ್ರಸನ್ನ ಪತ್ರNICE ಯೋಜನೆ ಅಕ್ರಮ ಆರೋಪ: ಡಿಕೆಶಿ ಸಮರ್ಥಿಸುತ್ತಿರುವ ಸಚಿವರ ವಿರುದ್ಧ ಹೆಚ್.ಡಿ. ಕುಮಾರಸ್ವಾಮಿ ವಾಗ್ದಾಳಿಚುನಾವಣಾ ಆಯೋಗದ ನಿರ್ಧಾರ: ಎಸ್‌ಐಆರ್ ಪೂರ್ಣಗೊಂಡ ರಾಜ್ಯಗಳಲ್ಲಿ ಫಾರ್ಮ್-6 ರಲ್ಲಿದ್ದ ಹೆಚ್ಚುವರಿ ಘೋಷಣೆ ರದ್ದುಚುನಾವಣಾ ಆಯೋಗ ಪ್ರಜಾಪ್ರಭುತ್ವದ ಮೂಲಾಧಾರವನ್ನೇ ಅಲುಗಾಡಿಸುತ್ತಿದೆ: ಮಲ್ಲಿಕಾರ್ಜುನ ಖರ್ಗೆಎಂಜಿನಿಯರ್ ಪರ್ವೇಜ್ ನಾಪತ್ತೆ ಪ್ರಕರಣ: ಭೋಪಾಲ್ ರೈಲು ನಿಲ್ದಾಣದ ಸಿಸಿಟಿವಿಯಲ್ಲಿ ಪತ್ತೆ!