LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಹೈಟೆಕ್ ಸಹಕಾರಿ ಸಮುದಾಯ ಭವನ ನಿರ್ಮಾಣಕ್ಕೆ ಭೂಮಿ ಪೂಜೆ 

Advertisement
Advertisement

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ :
ಚಿತ್ರದುರ್ಗ ಟೌನ್ ಕೋ-ಆಪರೇಟಿವ್ ಸೊಸೈಟಿಯ ಹೈಟೆಕ್ ಸಹಕಾರಿ ಸಮುದಾಯ ಭವನ ನಿರ್ಮಾಣಕ್ಕೆ ಶುಕ್ರವಾರ ಭೂಮಿ ಪೂಜೆ ನೆರವೇರಿಸಲಾಯಿತು.

ಸೊಸೈಟಿ ಅಧ್ಯಕ್ಷ ಎಂ.ನಿಶಾನಿ ಜಯಣ್ಣ ಭೂಮಿ ಪೂಜೆ ಸಲ್ಲಿಸಿ ಮಾತನಾಡಿ ೧೯೧೨ ರಲ್ಲಿ ಸ್ಥಾಪನೆಯಾದ ಚಿತ್ರದುರ್ಗ ಟೌನ್ ಕೋ-ಆಪರೇಟಿವ್ ಸೊಸೈಟಿ ಹೈಟೆಕ್ ಸಹಕಾರಿ ಸಮುದಾಯ ಭವನ ನಿರ್ಮಾಣಕ್ಕೆ ಎರಡುವರೆ ಕೋಟಿಯಿಂದ ಎರಡು ಮುಕ್ಕಾಲು ಕೋಟಿ ರೂ.ಗಳನ್ನು ಖರ್ಚು ಮಾಡಲಾಗುತ್ತಿದೆ. ಡಿಸಿಸಿ. ಬ್ಯಾಂಕ್‌ನಿಂದ ೨ ಕೋಟಿ ರೂ.ಗಳ ಸಾಲ ಪಡೆಯಲಾಗಿದೆ. ಈ.ಟೆಂಡರ್ ಮೂಲಕ ಆರ್.ಮಂಜುನಾಥ್‌ಗೆ ಗುತ್ತಿಗೆ ನೀಡಿದ್ದು, ಜಿಲ್ಲೆಯಲ್ಲಿಯೇ ಎಲ್ಲಿಯೂ ಇಲ್ಲದಂತ ಸಹಕಾರಿ ಭವನ ನಿರ್ಮಾಣ ಮಾಡಲಾಗುವುದೆಂದು ತಿಳಿಸಿದರು.

೯೦ ಅಡಿ ಫಂಕ್ಷನ್ ಹಾಲ್, ಏಳು ರೂಂ, ಡೈನಿಂಗ್ ಹಾಲ್, ಸ್ಟೋರ್ ರೂಂ, ಲಿಫ್ಟ್, ಎಸಿ. ವ್ಯವಸ್ಥೆಯಿರುತ್ತದೆ. ಜನವರಿ ಒಳಗೆ ಹೈಟೆಕ್ ಸಹಕಾರಿ ಸಮುದಾಯ ಭವನ ಕಟ್ಟಡ ಪೂರ್ಣಗೊಳಿಸುತ್ತೇವೆ. ಜಿಲ್ಲಾ ಉಸ್ತುವಾರಿ ಸಚಿವ ಟಿ.ರಘುಮೂರ್ತಿ, ಶಾಸಕರುಗಳಾದ ಕೆ.ಸಿ.ವೀರೇಂದ್ರಪಪ್ಪಿ, ಬಿ.ಜಿ.ಗೋವಿಂದಪ್ಪ ಹಾಗೂ ಡಿಸಿಸಿ. ಬ್ಯಾಂಕ್ ವ್ಯವಸ್ಥಾಪಕ ನಿರ್ದೇಶಕರಾದ ಇಲಿಯಾಸ್ ಉಲ್ಲಾ ಷರೀಪ್ ಇವರುಗಳ ಸಹಕಾರದೊಂದಿಗೆ ಸುಸಜ್ಜಿತವಾದ ಹೈಟೆಕ್ ಸಹಕಾರಿ ಸಮುದಾಯ ಭವನ ನಿರ್ಮಾಣವಾಗಲಿದೆ ಎಂದು ಹೇಳಿದರು.

ಚಿತ್ರದುರ್ಗ ಟೌನ್ ಕೋ-ಆಪರೇಟಿವ್ ಸೊಸೈಟಿ ಉಪಾಧ್ಯಕ್ಷೆ ಎನ್.ಎಂ.ಪುಷ್ಪವಲ್ಲಿ, ನಿರ್ದೇಶಕರುಗಳಾದ ಸುರೇಶ್‌ಭಾಫ್ನ, ಸಿ.ಕೆ.ಸತ್ಯಮೂರ್ತಿ, ಶ್ರೀನಿವಾಸ್‌ಮೂರ್ತಿ, ಹರೀಶ್‌ಬಾಬು, ಸೂರ್ಯಪ್ರಕಾಶ್, ಚಂಪಿಕ, ನಿಶಾನಿ ದಶರಥ, ಚಂದ್ರಪ್ಪ, ತಿಪ್ಪೇಸ್ವಾಮಿ, ಶಬ್ಬೀರ್ ಅಹಮದ್, ದೊರೆಸ್ವಾಮಿ ಕೆ, ಸಾಧಿಕ್ ಅಲಿಖಾನ್, ವ್ಯವಸ್ಥಾಪಕ ನಯೀಮ್ ಹಾಗೂ ಸೊಸೈಟಿಯ ಸಿಬ್ಬಂದಿ ವರ್ಗದವರು ಭೂಮಿ ಪೂಜೆಯಲ್ಲಿದ್ದರು.

 

Advertisement
Advertisement

Author
Chandravalli News
Regional Kannada Daily is a leading news paper in (Karnataka state). Which is having large number of circulation in the districts of Chitradurga, Davanagere, Bellary, Vijayanagara, Shimoga, Chikmagalur, Tumkur, Bangalore, Simultaneously published in rural districts of Bangalore
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಪೂಜಾರಿಯಿಂದ ದೇವರಿಗೆ ಸಿಕ್ಕೇ ಇಲ್ಲ ಸ್ವಾತಂತ್ರ್ಯಭಾರತವನ್ನು ಜಾಗತಿಕ ಮ್ಯಾನುಫ್ಯಾಕ್ಚರಿಂಗ್ ಹಬ್ ಮಾಡಲು ಕೌಶಲ್ಯಪೂರ್ಣ ಯುವಪಡೆ ಅಗತ್ಯ: ಹೆಚ್.ಡಿ. ಕುಮಾರಸ್ವಾಮಿವಿಧಾನಮಂಡಲ ಅಧಿವೇಶನ: ಸರ್ಕಾರದ ವೈಫಲ್ಯಗಳ ವಿರುದ್ಧ ಬಿಜೆಪಿ ಶಾಸಕಾಂಗ ಪಕ್ಷದ ಮಹತ್ವದ ಕಾರ್ಯತಂತ್ರ ಸಭೆರಾಷ್ಟ್ರಧ್ವಜ ಹಾರಿಸಲು ‘ಸಮಯವಿಲ್ಲ’ ಎಂದ ಸಚಿವ ಜಮೀರ್ ವಜಾಕ್ಕೆ ಆರ್‌ಅಶೋಕ್ ಆಗ್ರಹ: ಕಾಂಗ್ರೆಸ್ ವಿರುದ್ಧ ಆಕ್ರೋಶಅಂಡಮಾನ್ ಆಳಸಮುದ್ರದಲ್ಲಿ ಗಿನ್ನಿಸ್ ದಾಖಲೆ ಬರೆದ ಆರ್‌ಅಶೋಕ್ ಪುತ್ರ ಶರತ್: ತಂದೆಯಾಗಿ ಹೆಮ್ಮೆ ವ್ಯಕ್ತಪಡಿಸಿದ ವಿಪಕ್ಷ ನಾಯಕಮಹಿಳೆಯರಿಗೆ ಸಚಿವ ಸಂಪುಟದಲ್ಲಿ ಸೂಕ್ತ ಸ್ಥಾನ ನೀಡಿ: ಕಾಂಗ್ರೆಸ್ ವಿರುದ್ಧ ವಿಧಾನಸೌಧ ಆವರಣದಲ್ಲಿ ಬಿಜೆಪಿ ಬೃಹತ್ ಪ್ರತಿಭಟನೆರಾಷ್ಟ್ರಧ್ವಜ ಗೌರವಿಸುವುದಕ್ಕಿಂತ ಪಕ್ಷದ ಕೆಲಸ ಮುಖ್ಯವೇ?: ಸಚಿವ ಜಮೀರ್ ರಾಜೀನಾಮೆಗೆ ಆಗ್ರಹ ಸದನದ ಒಳಗೂ-ಹೊರಗೂ ಕಾಂಗ್ರೆಸ್ ವಿರುದ್ಧ ಉಗ್ರ ಹೋರಾಟ: ಬಿಜೆಪಿ ಶಾಸಕಾಂಗ ಪಕ್ಷದ ಸಭೆಯಲ್ಲಿ ತೀರ್ಮಾನ ವಿಭಜನೆಯ ಭೀಕರತೆ ನೆನೆದು ‘ಅಖಂಡ ಭಾರತ’ದ ಸಂಕಲ್ಪ ವಚನ ನೀಡಿದ ಸಿ.ಟಿ. ರವಿ: ತಾಯ್ನಾಡಿನ ಸಾರ್ವಭೌಮತ್ವ ರಕ್ಷಣೆಗೆ ಕರೆತಂದೆ ಮಾಡಿದ ಸಾಲಕ್ಕೆ SSLC ವಿದ್ಯಾರ್ಥಿನಿ ಅಪಹರಣಕ್ಕೆ ಯತ್ನ: ಯುವ ಕಾಂಗ್ರೆಸ್ ಅಧ್ಯಕ್ಷ ಸೇರಿ ಇಬ್ಬರ ವಿರುದ್ಧ ಪೋಕ್ಸೋ ಪ್ರಕರಣ ದಾಖಲು!