ಚಂದ್ರವಳ್ಳಿ ನ್ಯೂಸ್, ದಾವಣಗೆರೆ:
ಗೋಪಿಕೆಯರಾಗಿ ಅರಸಿ ಬಂದೆವು ನಿನ್ನತ್ತ
ಯಾರಿಗೂ ಹೇಳದೆ ಕಣ್ಮರೆಯಾದೆ ಎತ್ತ
ಭಯ ಬೀತರಾದೆವು, ಹುಚ್ಚರಾದೆವು ,
ನಿನ್ನ ಯೋಚಿಸುತ್ತಾ...!
ಒಟ್ಟುಗೂಡಿದೆವು ಹುಡುಕುತ್ತಾ
ಹೊರಟೆವು ಕಾಡಿನತ್ತ..!
ನಿನ್ನ ನಾಮವನು ಚಪಿಸುತ್ತಾ
ನಿನ್ನ ನೆನಪಿನಲ್ಲೇ ಕರಗುತ್ತಾ..!
ನೀ ಇರುವೆ ಎಲ್ಲೆಡೆ
ಮರಗಳಲ್ಲಿ, ಆಕಾಶದಲ್ಲಿ
ಸಕಲ ಜೀವ ರಾಶಿಗಳ ಹೃದಯಗಳಲ್ಲಿ..!
ಪ್ರಿಯ ಆಲದ ಮರವೇ
ನಂದನ ಮಗ ಕೊಳಲನೂದುತ
ಇಲ್ಲಿ ಹಾದು ಹೋಗಿರುವುದನ್ನು
ನೀನು ನೋಡಿರುವೆಯಾ...?
ಪ್ರಿಯ ಅಶೋಕ ಮರವೇ,
ನಾಗ ಹೂವಿನ ಮರವೇ,
ಚಂಪಕ ಹೂವಿನ ಮರವೇ,
ಬಲರಾಮನ ಕಿರಿಯ ಸಹೋದರ ಇಲ್ಲಿ ಹಾದು ಹೋಗಿರುವುದನ್ನು ನೀನು ನೋಡಿರುವೆಯಾ..?
ಓ ತುಳಸಿಯೇ, ನೀನಿಲ್ಲದ ನೈವೇದ್ಯವೇ
ಕೃಷ್ಣನಿಗೆ ಅಪೂರ್ಣ..!
ಹಾಗೆಯೇ ಕೃಷ್ಣ ನಿಲ್ಲದೆ
ಗೋಪಿಕೆಯರ ಬದುಕು ಅಪೂರ್ಣ..!
ಓ ಮಾವಿನ ಮರವೇ
ಓ ಹಲಸಿನ ಮರವೇ
ಓ ಪೇರಲೆ ಮರವೇ..!
ಕೃಷ್ಣನ ಪಾದಸ್ಪರ್ಶದಿಂದ
ನೀವೆಲ್ಲರೂ ಆನಂದ ಹೊಂದಿರುವಿರಿ
ದಯಮಾಡಿ ಕೃಪೆ ತೋರಿ
ಮಾಧವನ ದಾರಿ ಎತ್ತ...!?
*ಸರ್ವಂ ಕೃಷ್ಣಾರ್ಪಣಮಸ್ತು*
ಕವಿತೆ: ಸುಷ್ಮಾ. ಎ. ಜೆ, ದಾವಣಗೆರೆ.




