ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ಆಹಾರ ಇಲಾಖೆ ಮತ್ತು ಪೊಲೀಸ್ ಇಲಾಖೆಯ ಜಂಟಿ ಕಾರ್ಯಾ ಚರಣೆ,ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯ ಪ್ರಿಯದರ್ಶಿನಿ ಬಡಾವಣೆಯ ತೂಬಗೆರೆ ಹರೀಶ್ ಎಂಬುವವರ ಗೋಡೌನ್ ಒಂದರಲ್ಲಿ ಅಕ್ರಮವಾಗಿ ದಾಸ್ತಾನು ಮಾಡಲಾಗಿದ್ದ ಬರೋಬ್ಬರಿ 21.5 ಟನ್ ಅಕ್ರಮ ಪಡಿತರ ಅಕ್ಕಿ ವಶಪಡೆಸಿ ಕೊಂಡು, ಆರೋಪಿ ಹರೀಶ್ ಎಂಬುವವರನ್ನು ವಶಕ್ಕೆ ಪಡೆದ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತಿದ್ದಾರೆ.
ಇತ್ತೀಚೆಗೆ ರಾಜ್ಯಾದ್ಯಂತ ಪಡಿತರ ಅಕ್ಕಿ ಸಾಗಟ,ಮತ್ತು ದಾಸ್ತಾನು ಮಾಡಿ ರಾಜ್ಯ ಸರ್ಕಾರದ ಅನ್ನ ಭಾಗ್ಯ ಅಕ್ಕಿ ಕನ್ನಹಾಕುತಿದ್ದ ಅನೇಕಪ್ರಕರಣಗಳು ದಿನ ನಿತ್ಯ ಸುದ್ದಿ ಯಾಗುತ್ತಿರುವ ಹಿನ್ನಲೆ ಜನಸಾಮಾನ್ಯರು ಜಾಗೃತರಾಗಿ ಅಕ್ರಮ ಅಕ್ಕಿದಂದೆಗಳನ್ನು ಸೂಕ್ಷ್ಮವಾಗಿ ಗಮನಿಸುವುದರೊಂದಿಗೆ ಅವರಿಗೆ ಹತ್ತಿರ ಮತ್ತು ನಂಬಿಕೆಯಿರುವ ಅಧಿಕಾರಿ ಅಥವಾ ಸುದ್ದಿ ಮಾದ್ಯಮ ಸ್ನೇಹಿತರ ಗಮನೆತರುವಂತಹ ಕಾರ್ಯಕ್ಕೆ ಕೈಹಾಕುತ್ತಿರುವುದು ಶ್ಲಾಗನೀಯ.
ಅದರಂತೆ ನೆನ್ನೆ ನಗರ ಹೊರವಲಯದ ಪ್ರಿಯದರ್ಶಿನಿ ಬಡಾವಣೆಯಲ್ಲಿ ಅಕ್ರಮ ಪಡಿತರ ಅಕ್ಕಿಯನ್ನು ದಾಸ್ತಾನು ಮಾಡಿರುವ ಮಾಹಿತಿ ಪಡೆದ ತಹಶಿಲ್ದಾರ್ ಮಲ್ಲಪ್ಪ ನವರು ಮತ್ತು ಪೊಲೀಸ್ ಇನ್ಸಪೆಕ್ಟರ್ ಸಾದಿಕ್ ಪಾಷರವರು ಆಹಾರ ಇಲಾಖೆ ಮತ್ತು ಪೊಲೀಸ್ ಇಲಾಖೆಯ ಅಧಿಕಾರಿಗಳ ಆದೇಶ ಪಡೆದ ತಂಡ ಕಾರ್ಯಾಚರಣೆಗೆ ಮುಂದಾದಾಗ ನಿರೀಕ್ಷೆಗೂ ಮೀರಿ ಮೂರು ಕಡೆ ದಸ್ತಾನುಮಾಡಲಾಗಿದ್ದ ಬರೋಬ್ಬರಿ 21.5. ಟನ್ ಅಕ್ಕಿ ಮತ್ತು ಸ್ವಲ್ಪ ಪ್ರಮಾಣದ ರಾಗಿಯನ್ನು ವಶಕ್ಕೆ ಪಡೆಯುದರಲ್ಲಿ ಅಧಿಕಾರಿಗಳು ಯಶಸ್ವಿ ಯಾಗಿದ್ದಾರೆ.
ಈ ಪ್ರಕರಣ ಬೆಳಕಿಗೆ ಬಂದಹಿನ್ನಲೆಯಲ್ಲಿ ಆಹಾರ ಸಚಿವರ ಉಸ್ತುವಾರಿ ಕ್ಷೇತ್ರದಲ್ಲೇ ಈರೀತಿ ಪಡಿತರ ಅಕ್ರಮವಾಗಿ ಅಡ್ಡದಾರಿ ಹಿಡಿದರೇ ರಾಜ್ಯಾದ್ಯಂತ ನಡೆಯುತ್ತಿರುವ ಅಕ್ರಮಗಳ ಬಗ್ಗೆ ದೇವರೇ ಬಲ್ಲ ಎಂದು ತಮ್ಮ ಆಶ್ಚರ್ಯ ವ್ಯಕ್ತಪಡೆಸಿದ್ದಾರೆ.
ಕಾರ್ಯಾಚರಣೆಯ ತಂಡದಲ್ಲಿ ತಾಲ್ಲೂಕು ಆಹಾರ ನಿರೀಕ್ಷಕ ಅನಂತ ಕುಮಾರ್,ಸಹಾಯಕ ಮತ್ತು ಗ್ರಾಮಾಂತರ ಪೊಲೀಸ್ ಠಾಣೆಯ ಎಸ್ಸೈ ಚಂದ್ರಕಲಾ, ಎಎಸ್ಸೈ ರಂಗಸ್ವಾಮಿ ಸಿಬ್ಬಂದಿ ಶ್ರೀನಿವಾಸ ಹಾಜರಿದ್ದರು.


