Press ID & Credential Portal
Apply / Verify  ➔
LIVE TV LocalCrimeNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
Local News | Districts Bangalore Rural

ಹಿಂದುಳಿದ ವರ್ಗಗಳ ಪ್ರಬಲ ಶಕ್ತಿ ಜಾಲಪ್ಪ

ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ಮಾನವೀಯ ನೆಲೆಯಲ್ಲಿ ಹೊಣೆಯಾಧಾರಿತ ಸಾಮಾಜಿಕ ಪ್ರಜ್ಞೆಯನ್ನು ಹೊಂದಿದ್ದ ಆರ್.ಎಲ್.ಜಾಲಪ್ಪ
, 3 ದಶಕಗಳಿಗೂ ಹೆಚ್ಚು ಕಾಲ ರಾಜ್ಯ-ರಾಷ್ಟ್ರ ರಾಜಕಾರಣದಲ್ಲಿ ಸಕ್ರಿಯವಾಗಿದ್ದು ನೇರ, ನಿಷ್ಠುರ ನಡೆಗೆ ಹೆಸರಾದವರು ಎಂದು ಆರ್‌ಎಲ್‌ಜೆಐಟಿ ಪ್ರಾಧ್ಯಾಪಕ ಪ್ರೊ.ಕೆ.ಆರ್.ರವಿಕಿರಣ್ ಹೇಳಿದರು.

ಇಲ್ಲಿನ ಆರ್.ಎಲ್.ಜಾಲಪ್ಪ ಸಮೂಹ ಶಿಕ್ಷಣ ಸಂಸ್ಥೆಗಳ ನೇತೃತ್ವದಲ್ಲಿ ಸೋಮವಾರ ದೇವರಾಜ ಅರಸ್‌ಅಂತಾರಾಷ್ಟ್ರೀಯ ವಸತಿ ಶಾಲೆಯ ಸಭಾಂಗಣದಲ್ಲಿ ನಡೆದ ಮಾಜಿ ಕೇಂದ್ರ ಸಚಿವ ದಿವಂಗತ ಆರ್.ಎಲ್.ಜಾಲಪ್ಪ ಅವರ 101ನೇ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಭಾಷಣಕಾರರಾಗಿ ಪಾಲ್ಗೊಂಡು ಅವರು ಮಾತನಾಡಿದರು.

ಹಿಂದುಳಿದ ವರ್ಗಗಳ ಪ್ರಬಲ ಶಕ್ತಿಯಾಗಿದ್ದ ಅವರು, ಪರಿಸರ, ಶಿಕ್ಷಣ, ಗ್ರಾಮೀಣಾಭಿವೃದ್ದಿ, ಸಹಕಾರ ಸೇರಿದಂತೆ ವಿವಿಧ ವಲಯಗಳಲ್ಲಿ ಅನೇಕ ಸೇವಾ ಕಾರ್‍ಯಗಳನ್ನು ಜಾರಿಗೆ ತಂದ ಹೆಗ್ಗಳಿಕೆ ಹೊಂದಿದ್ದಾರೆ. ಅವರ ಒತ್ತಾಸೆಯಿಂದ ರಾಜ್ಯದಲ್ಲಿ ಜಾರಿಗೆ ಬಂದ ಹಲವು ಯೋಜನೆಗಳು ಇಂದಿಗೂ ಜನಸ್ನೇಹಿಯಾಗಿವೆ. ದೊಡ್ಡಬಳ್ಳಾಪುರದ ಅಪರೆಲ್ ಪಾರ್ಕ್ ಸಾವಿರಾರು ಜನರಿಗೆ ಉದ್ಯೋಗಾವಕಾಶಗಳನ್ನು ನೀಡಿದೆ. ಮುಖ್ಯವಾಗಿ ಮಹಿಳಾ ಉದ್ಯೋಗಿಗಳಿಗೆ ಆಸರೆಯಾಗಿದೆ. ಶೈಕ್ಷಣಿಕವಾಗಿಯೂ ಸಮಾಜವನ್ನು ಸದೃಢವಾಗಿ ಕಟ್ಟುವ ಉದ್ದೇಶದಿಂದ ಅನೇಕ ವಿದ್ಯಾ ಸಂಸ್ಥೆಗಳನ್ನು ದೇವರಾಜ ಅರಸ್ ಶಿಕ್ಷಣ ಸಂಸ್ಥೆಯ ಅಡಿಯಲ್ಲಿ ಸ್ಥಾಪಿಸಿ ಗ್ರಾಮೀಣ ವಿದ್ಯಾರ್ಥಿಗಳ ಅಧ್ಯಯನಕ್ಕೆ ಪೂರಕ ವಾತಾವರಣ ನಿರ್ಮಿಸಿದ್ದಾರೆ ಎಂದರು.

ರಾಜ್ಯ ರಾಜಕಾರಣದಲ್ಲಿ ದೇವರಾಜ ಅರಸು ನಂತರದ ಕಾಲಘಟ್ಟದಲ್ಲಿ ಹಿಂದುಳಿದ ವರ್ಗಗಳ ಶಕ್ತಿಯಾಗಿ ಗುರ್ತಿಸಿಕೊಂಡ ಪ್ರಮುಖರಲ್ಲಿ ಆರ್.ಎಲ್.ಜಾಲಪ್ಪ ಪ್ರಮುಖರು. 4 ಬಾರಿ ಶಾಸಕರಾಗಿ, 4 ಬಾರಿ ಸಂಸದರಾಗಿ, ರಾಜ್ಯದಲ್ಲಿ ಗೃಹ, ಸಹಕಾರ, ಕಂದಾಯ ಸಚಿವರಾಗಿ, ಕೇಂದ್ರದಲ್ಲಿ ಜವಳಿ ಸಚಿವರಾಗಿ ಕೆಲಸ ನಿರ್ವಹಿಸಿದರು. ಕೃಷಿ ಹಾಗೂ ಸಹಕಾರ ವಲಯದಲ್ಲಿ ಅವರು ರೂಪಿಸಿದ ಯೋಜನೆಗಳು ಇಂದಿಗೂ ಮಾದರಿಯಾಗಿವೆ ಎಂದು ತಿಳಿಸಿದರು.

ಅಧ್ಯಕ್ಷತೆ ವಹಿಸಿದ್ದ ಶ್ರೀ ದೇವರಾಜ ಅರಸ್‌ಶಿಕ್ಷಣ ಸಂಸ್ಥೆ ಗೌರ್ನಿಂಗ್‌ಕೌನ್ಸಿಲ್‌ಸದಸ್ಯ ಜೆ.ಆರ್.ರಾಕೇಶ್‌ಮಾತನಾಡಿ, ಜಾಲಪ್ಪ ಅವರು ತಮ್ಮ ದೂರದರ್ಶಿ ಚಿಂತನೆಗಳಿಂದ ಜನಮಾನಸದಲ್ಲಿ ಉಳಿದಿದ್ದಾರೆ. ರೈತರು, ಹಿಂದುಳಿದವರ ಅಭ್ಯುದಯ ಅವರ ಸ್ಪಷ್ಟ ಆದ್ಯತೆಯಾಗಿತ್ತು. ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸುವ ಮೂಲಕ ಹಿಂದುಳಿದ ಪ್ರದೇಶಗಳು, ಗ್ರಾಮೀಣ ಭಾಗದ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವ ಸಂಕಲ್ಪ ಮಾಡಿದರು. ಅವರ ಆಲೋಚನೆಗಳನ್ನು ಸಾಕಾರಗೊಳಿಸುವುದು ಈ ಶಿಕ್ಷಣ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿರುವ ಪ್ರತಿಯೊಬ್ಬರ ಕರ್ತವ್ಯವಾಗಬೇಕು ಎಂದರು.

ಗೌರ್ನಿಂಗ್‌ಕೌನ್ಸಿಲ್‌ಸದಸ್ಯರಾದ ಎನ್.ಉತ್ತಮ್‌ಕುಮಾರ್‌, ವಿದ್ವತ್‌, ವಿವಿಧ ಶೈಕ್ಷಣಿಕ ಘಟಕಗಳ ಪ್ರಾಂಶುಪಾಲರಾದ ಡಾ.ಗೌರಪ್ಪ, ಡಾ.ಜಿ.ಮುರಳಿ, ಧನಂಜಯ್‌, ಡಾ.ನರಸಿಂಹರೆಡ್ಡಿ, ಡಾ.ಎಂ.ಚಿಕ್ಕಣ್ಣ, ಉಮೇಶ್‌ಬಾವಿಕಟ್ಟಿ, ಜಿಯಾವುಲ್ಲಾ ಖಾನ್‌, ಬಲವಂತ್‌, ವಿವಿಧ ಶೈಕ್ಷಣಿಕ ಘಟಕಗಳ ಮುಖ್ಯಸ್ಥರು, ಸಿಬ್ಬಂದಿ ಉಪಸ್ಥಿತರಿದ್ದರು.

ಶ್ರೀ ದೇವರಾಜ ಅರಸ್‌ವ್ಯವಹಾರ ನಿರ್ವಹಣಾ ಮಹಾವಿದ್ಯಾಲಯದಿಂದ ಕಾರ್ಯಕ್ರಮ ಆಯೋಜನೆಗೊಂಡಿತ್ತು. ಇದೇ ವೇಳೆ ಆರ್.ಎಲ್.ಜಾಲಪ್ಪ ಸ್ಮೃತಿವನದಲ್ಲಿರುವ ಜಾಲಪ್ಪ ಅವರ ಪುಣ್ಯಸ್ಥಳದಲ್ಲಿ ಪೂಜಾ ಕಾರ್ಯಕ್ರಮ ನಡೆಯಿತು.

 

 

 

Author
Chandravalli News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ಭ್ರಮೆಯಿಂದ ಹೊರಬರಬೇಕುಅವಳಿ ಕರುವಿಗೆ ಜನ್ಮ ನೀಡಿದ ಹಸುದಸರಾ ಹಬ್ಬದ ಅಂಗವಾಗಿ ಚಿಕ್ಕ ಮಕ್ಕಳ ಪಾದ ತೊಳೆದು ಹೊಸಯಳನಾಡು ಶಶಿಕಲಾ ಪ್ರಕಾಶ್ಆಗ್ನೇಯ ಪದವೀಧರರ ಕ್ಷೇತ್ರದ ಗೆಲುವು ನಮ್ಮದೇ: ಶಾಸಕ ಎಂ. ಚಂದ್ರಪ್ಪದುರ್ಗಾಷ್ಟಮಿ ಸಂಭ್ರಮ 108 ಹೆಣ್ಣು ಮಕ್ಕಳಿಗೆ ಮೂಗುತಿಧಾರಣೆಹೆಚ್.ಡಿ. ದೇವೇಗೌಡರಿಗೆ 'ಶ್ರೀ ವೀರ ಮಾರ್ತಾಂಡ ಚಾವುಂಡರಾಯ ಪ್ರಶಸ್ತಿ' ಪ್ರದಾನ: ಭಾವನಾತ್ಮಕ ಕ್ಷಣವಿಕಲಚೇತನರ ಪಿಂಚಣಿಗೂ ಹಣವಿಲ್ಲದ ಸರ್ಕಾರ ದಿವಾಳಿಯಾಗಿದೆ:ಆರ್. ಅಶೋಕ್!ಪ್ರಧಾನಿ ಮೋದಿ ಅವರಿಗೆ ಸಿಎಂ ಡಿ.ಕೆ ಶಿವಕುಮಾರ್ ಪತ್ರಒಲಿಂಪಿಕ್ಸ್ ಗುರಿಯತ್ತ ಬಿಲ್ಲುಗಾರ್ತಿ ದೇವಮ್ಮ: ಎಂ.ಬಿ ಪಾಟೀಲ್ ಪ್ರಶಂಸೆಕಿಚ್ಚ ಸುದೀಪ್‌ಹಾಗೂ ಪತ್ನಿ ಪ್ರಿಯಾ ಸುದೀಪ್‌ಅವರ ದಾಂಪತ್ಯ ಜೀವನಕ್ಕೆ ಬೆಳ್ಳಿ ಹಬ್ಬದ ಸಂಭ್ರಮ