ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ಪ್ರಧಾನಿ ಮೋದಿ ಅವರನ್ನು ಟೀಕಿಸಿದರೆ ಪಕ್ಷದ ಹೈಕಮಾಂಡ್ ತಮ್ಮನ್ನು ಮೆಚ್ಚಿಕೊ ಳ್ಳುತ್ತದೆ ಎಂಬ ಭ್ರಮೆಯಿಂದ ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ಹೊರಬರಬೇಕು' ಎಂದು ಬಿಜೆಪಿ ತಾಲ್ಲೂಕು ಘಟಕದ ಅಧ್ಯಕ್ಷ ಕೆ.ಅಭಿನಂದನ್ ಟೀಕಿಸಿದರು.
ಬಿ.ಕೆ. ಹರಿಪ್ರಸಾದ್ ಅವರು ಮೋದಿ ಅವರನ್ನು ಸ್ಟಿಂಗ್ ಆಪರೇಷನ್ ಪಿತಾಮಹ ಎನ್ನುವ ಮೂಲಕ ತಮ್ಮ ಪಕ್ಷದ ಸ್ಟಿಂಗ್ ಪಿತಾಮಹನಿಗೆ ಅವಮಾನಿಸಿದ್ದಾರೆ' ಎಂದು ಭಾನುವಾರ ಸುದ್ದಿಗೋಷ್ಠಿಯಲ್ಲಿ ವ್ಯಂಗ್ಯವಾಡಿದರು.
ಎಸ್ಐಆರ್ ಬಗ್ಗೆ ಕಾಂಗ್ರೆಸ್ ಪಕ್ಷದವರು ನಿರಂತರವಾಗಿ ಸುಳ್ಳು ಹೇಳುತ್ತಾ ಬಂದಿದ್ದಾರೆ. ಸಿಜೆಪಿಗೆ ಹಣಕಾಸು ನೆರವು ನೀಡುತ್ತಿರುವು- ದಾಗಿ ಹರಿಪ್ರಸಾದ್ ಒಪ್ಪಿಕೊಂಡಿ-ದ್ದಾರೆ. ಬಾಂಗ್ಲಾದೇಶದ ರೀತಿಯಲ್ಲಿ ಭಾರತದಲ್ಲೂ ಅರಾಜಕತೆ ಸೃಷ್ಟಿಸುವ ಉದ್ದೇಶದಿಂದ ಯುವಕರನ್ನು ದಾರಿ ತಪ್ಪಿಸುತ್ತಿರುವ ಸಿಜೆಪಿ ಜೊತೆ ಕಾಂಗ್ರೆಸ್ ಕೈಜೋಡಿಸಿರುವುದು ಅಧಿಕಾರ ಕಳೆದುಕೊಂಡಿರುವ ಹತಾಶೆಯ ಸಂಕೇತವಾಗಿದೆ.
ಶೀಘ್ರವೇ ವಿದ್ಯಾರ್ಥಿಗಳ ಹೆಸರಿನಲ್ಲಿ ನಡೆಯುತ್ತಿರುವ ಹೋರಾಟದ ಹಿಂದಿನ ಸಂಚು ಬಯಲಿಗೆ ಬರಲಿದೆ' ಎಂದು ಹೇಳಿದರು. ಕೆ.ಅಭಿನಂದನ್ 'ಗೃಹಲಕ್ಷ್ಮಿ ಯೋಜನೆಯ ಹಣವನ್ನು ಪ್ರತಿ ತಿಂಗಳು ಪಾವತಿಸುವಂತೆ, ರಾಜ್ಯದ ರಸ್ತೆ ಗುಂಡಿಗಳನ್ನು ಮುಚ್ಚುವಂತೆ ಸರ್ಕಾರಕ್ಕೆ ಬುದ್ಧಿ ಹೇಳುವ ಕೆಲಸವನ್ನು ಹರಿಪ್ರಸಾದ್ ಮಾಡಲಿ. ಮೋದಿಯವರನ್ನು ಟೀಕಿಸಿದರೆ ಮತದಾರರು ತಕ್ಕ ಪಾಠ ಕಲಿಸುತ್ತಾರೆ' ಎಂದು ಎಚ್ಚರಿಸಿದರು.



