ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಖ್ಯಾತ ನಟ, ‘ಅಭಿನಯ ಚಕ್ರವರ್ತಿ’ ಕಿಚ್ಚ ಸುದೀಪ್ಹಾಗೂ ಅವರ ಪತ್ನಿ ಪ್ರಿಯಾ ಸುದೀಪ್ಅವರ ದಾಂಪತ್ಯ ಜೀವನಕ್ಕೆ ಬೊಂಬಾಟ್25 ವರ್ಷ ತುಂಬಿದ್ದು, ಈ ಜೋಡಿ ತಮ್ಮ ವಿವಾಹದ ಬೆಳ್ಳಿ ಹಬ್ಬವನ್ನು ಆಪ್ತರು ಹಾಗೂ ಕುಟುಂಬದವರ ಸಮ್ಮುಖದಲ್ಲಿ ಅತ್ಯಂತ ಶ್ರದ್ಧೆ-ಸಂಭ್ರಮದಿಂದ ಆಚರಿಸಿಕೊಂಡಿದೆ.
ಪೂಜೆ ಪುರಸ್ಕಾರಗಳೊಂದಿಗೆ ಬೆಳ್ಳಿ ಹಬ್ಬದ ಸಂಭ್ರಮ:
2001ರ ಅಕ್ಟೋಬರ್ 18ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದ ಸುದೀಪ್ ಹಾಗೂ ಪ್ರಿಯಾ ಜೋಡಿ, ಈಗ ಯಶಸ್ವಿ 25 ವರ್ಷಗಳ ಸಾಂಸಾರಿಕ ಪಯಣವನ್ನು ಪೂರೈಸಿದೆ. ಈ ವಿಶೇಷ ಸಂದರ್ಭದ ಅಂಗವಾಗಿ ಸುದೀಪ್ ಅವರ ಮನೆಯಲ್ಲಿ ಭಾನುವಾರ ಬೆಳಿಗ್ಗೆಯಿಂದಲೇ ವಿಶೇಷ ಪೂಜಾ ಕೈಂಕರ್ಯಗಳನ್ನು ಆಯೋಜಿಸಲಾಗಿತ್ತು. ಧಾರ್ಮಿಕ ವಿಧಿವಿಧಾನಗಳ ಬಳಿಕ, ಸುದೀಪ್ಮತ್ತು ಪ್ರಿಯಾ ದಂಪತಿ ಪರಸ್ಪರ ಹಾರ ಬದಲಾಯಿಸಿಕೊಳ್ಳುವ ಮೂಲಕ ತಮ್ಮ ಸಂತಸವನ್ನು ಹಂಚಿಕೊಂಡರು.
ಸ್ಯಾಂಡಲ್ವುಡ್ಗಣ್ಯರ ಶುಭಹಾರೈಕೆ: ಮನೆಯಲ್ಲಿ ನಡೆದ ಈ ಸರಳ ಹಾಗೂ ಅದ್ಧೂರಿ ಸಮಾರಂಭದಲ್ಲಿ ಚಿತ್ರರಂಗದ ಪ್ರಮುಖ ಗಣ್ಯರು, ಸುದೀಪ್ ಅವರ ಆಪ್ತ ಸ್ನೇಹಿತರು ಹಾಗೂ ಕುಟುಂಬದ ಹಿರಿಯರು ಭಾಗವಹಿಸಿ, ದಂಪತಿಗೆ ಹೂಗುಚ್ಛ ನೀಡಿ ಶುಭ ಹಾರೈಸಿದರು. ಪ್ರೀತಿಸಿ ಮದುವೆಯಾಗಿದ್ದ ಈ ಮಾದರಿ ಜೋಡಿಯ ಬೆಳ್ಳಿ ಹಬ್ಬದ ಸಂಭ್ರಮದ ಫೋಟೋಗಳು ಹಾಗೂ ವಿಡಿಯೋಗಳು ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ಅಭಿಮಾನಿಗಳು ತಮ್ಮ ನೆಚ್ಚಿನ ನಟನಿಗೆ ಶುಭಾಶಯಗಳ ಮಳೆಯನ್ನೇ ಸುರಿಸುತ್ತಿದ್ದಾರೆ.



